Karnataka : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮೇಲೆ ನಿಷೇಧ ಹೇರುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra statement)ಹೇಳಿಕೆ ನೀಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಗುರುವಾರ, ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಭಯೋತ್ಪಾದಕ ನಿಧಿಯ ಆರೋಪದ ಮೇಲೆ ಪಿಎಫ್‌ಐ ಮೇಲೆ ಭಾರಿ ದಾಳಿ ಪ್ರಾರಂಭಿಸಿದ್ದರಿಂದ ಕರ್ನಾಟಕ(Araga Jnanendra statement) ಪೊಲೀಸರು 18 ಸ್ಥಳಗಳಲ್ಲಿ ಶೋಧ ನಡೆಸಲು ಮುಂದಾದರು. 15 ಜನರನ್ನು ವಿಚಾರಣೆಗಾಗಿ ಒಳಪಡಿಸಿದ್ದು, ಏಳು ಜನರನ್ನು ಈಗಾಗಲೇ ಎನ್ಐಎ ಬಂಧಿಸಿದೆ.
ಎಫ್.ಐ.ರ್(FIR) ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆಯೂ ನಡೆಯುತ್ತಿದೆ. ನಮ್ಮ ಪೊಲೀಸರು ಕೂಡ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಗೃಹಸಚಿವರು ಹೇಳಿದ್ದಾರೆ.
ಎನ್‌ಐಎ, ಜಾರಿ ನಿರ್ದೇಶನಾಲಯ(ED) ಮತ್ತು ಕರ್ನಾಟಕ ಪೊಲೀಸರು ಗುರುವಾರ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ದಾಳಿ ನಡೆಸಿ ಪಿಎಫ್‌ಐನ ಏಳು ಪದಾಧಿಕಾರಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : https://vijayatimes.com/pfi-protest-turns-to-voilence/
ಮಂಗಳೂರಿನಲ್ಲಿ(Mangaluru) ಪಿಎಫ್‌ಐ ಮುಖಂಡನ ಮನೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಿಎಫ್‌ಐ ವಿರುದ್ಧ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ(Hubbali) 50ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಮಧ್ಯಾಹ್ನದ ಸುಮಾರಿಗೆ ದಕ್ಕಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಎನ್‌ಐಎ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಲು ಯತ್ನಿಸಿದರು.
ಪಿಎಫ್‌ಐ ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ರಾಜ್ಯ ಮತ್ತು ಸ್ಥಳೀಯ ನಾಯಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಕಾವೂರು ನಿವಾಸಿ ಮತ್ತು ಪಿಎಫ್‌ಐ ಮುಖಂಡ ನವಾಜ್, ಜೋಕಟ್ಟೆಯ ಎ.ಕೆ ಅಶ್ರಫ್, ಹಳೆಯಂಗಡಿಯ ಮೊಯ್ದೀನ್ ಮತ್ತು ಕಂಕನಾಡಿ ನಿವಾಸಿ ಅಶ್ರಫ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
#PayCM ಪೋಸ್ಟರ್‌ಗಳ ಬಗ್ಗೆ ಪ್ರಶ್ನಿಸಿದಕ್ಕೆ ಗೃಹ ಸಚಿವರು ಕೊಟ್ಟ ಉತ್ತರ ಹೀಗಿದೆ, ಇದು ಅವರ ಕಾಂಗ್ರೆಸ್ ಪಕ್ಷದ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ.
ಕಾಂಗ್ರೆಸ್ಸಿಗರಿಗೆ ನೇರ ರಾಜಕೀಯ ಮಾಡಲು ಯಾವುದೇ ಸಮಸ್ಯೆಗಳಿಲ್ಲ, ಅವರು ಕೆಲವು ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಮತ್ತು ಇಮೇಜ್ ಅನ್ನು ಹಾಳು ಮಾಡುತ್ತಿದ್ದಾರೆ.
ಹೀಗೆ ಮಾಡುವುದರಿಂದ ಅವರು ಬೆಳೆಯಬಹುದು ಎಂದು ನಂಬಿದ್ದಾರೆ, ಆದರೆ ಕರ್ನಾಟಕದ ಜನರು ಮುಂದೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಅಂಟಿಸಿ ಪ್ರಚಾರ ಆರಂಭಿಸಿದೆ.
ಇದನ್ನೂ ಓದಿ : https://vijayatimes.com/special-facts-about-lake-natron/