Visit Channel

ಆರತಕ್ಷತೆಯಲ್ಲಿ ತಾರೆಯರೇ ಆಕರ್ಷಣೆ

WhatsApp Image 2021-01-18 at 11.50.12 AM

ಕಳೆದ ವರ್ಷಾಂತ್ಯದಲ್ಲಿ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ವಿವಾಹವು ಅಕ್ಷಯ್ ಜೊತೆಗೆ ನೆರವೇರಿತ್ತು. ಕೊರೊನಾ ನಿಯಮಾವಳಿಗಳ ಕಾರಣದಿಂದಾಗಿ ತೀರ ಸಣ್ಣಮಟ್ಟದಲ್ಲೇ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಈಗಾಗಲೇ ಕೊರೊನಾ ಬಾಯ್ ಹೇಳುತ್ತಿದೆ. ಹೊಸ ವರ್ಷದ ಎರಡನೇ ವಾರದಲ್ಲಿ ಎಲ್ಲರನ್ನೂ ಕರೆದು ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಸುವುದಾಗಿ ಅಂದೇ ರಮೇಶ್ ಸೂಚಿಸಿದ್ದರು. ಇದೀಗ ಆರತಕ್ಷತೆ ಸಮಾರಂಭದ ಫೊಟೋಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.

ಶನಿವಾರ ಸಂಜೆ ನಗರದ ಮಹಾತ್ಮಾ ಗಾಂಧಿ ರಸ್ತೆಯ ಕಾನ್ರಾಡ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರನೇಕರು ಆಗಮಿಸಿ ನೂತನ ದಂಪತಿಗೆ ಶುಭ ಕೋರಿದರು. ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಆರೋಗ್ಯ ಸಚಿವ ಸುಧಾಕರ್ ಮೊದಲಾದವರಿಂದ ಹಿಡಿದು ಚಿತ್ರೋದ್ಯಮದ ಗಣ್ಯರಾದ ಕ್ರೇಜಿಸ್ಟಾರ್ ಡಾ. ರವಿಚಂದ್ರನ್, ಸೆಂಚುರಿಸ್ಟಾರ್ ಡಾ. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಲಹರಿ ವೇಲು ಮೊದಲಾದವರು ಸೇರಿದಂತೆ ದೊಡ್ಡ ಮಟ್ಟದ ತಾರಾಗಣವೇ ನೆರೆದಿತ್ತು. ಆದರೆ ರಮೇಶ್ ಅವರ ನಿರೀಕ್ಷೆಯಂತೆ ಹೆಚ್ಚು ಜನರನ್ನು ಸೇರಿಸಲು ಸಾಧ್ಯವಾಗಲಿಲ್ಲ. ಕೋವಿಡ್ ಮತ್ತೊಂದು ಹೊಸ ರೂಪದಲ್ಲಿ ಹರಡುತ್ತಿದೆ ಎನ್ನುವ ಮಾಹಿತಿ ಬಂದಿರುವ ಕಾರಣ ಇನ್ನೂರಕ್ಕಿಂತ ಅಧಿಕ ಮಂದಿ ಸೇರದಂತೆ ಎಚ್ಚರಿಕೆ ವಹಿಸಲಾಗಿತ್ತು. ಇದೀಗ ಸುದೀಪ್, ಯಶ್ ಮೊದಲಾದವರು ಸಂಗೀತ ಸಂಭ್ರಮದಲ್ಲಿ ಹಾಡಿಗೆ ಹೆಜ್ಜೆ ಹಾಕಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಕಂಡು ಬಂದಿದೆ.

Latest News

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಭಯೋತ್ಪಾದಕರು!

ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.