New Delhi : ದೆಹಲಿ (Delhi) ಮದ್ಯ ನೀತಿ ಪ್ರಕರಣಕ್ಕೆ (Liqour Policy Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದೆಹಲಿ, ಪಂಜಾಬ್, ಹೈದ್ರಾಬಾದ್ ಸೇರಿದಂತೆ 35ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ, ಮಹತ್ವ ದಾಖಲೆಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.

ಜಾರಿ ನಿರ್ದೇಶನಾಲಯ ದಾಳಿಯ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Aravind Kejrival Against ED Raid) ಅವರು,
3 ತಿಂಗಳಿನಿಂದ 500 ಕ್ಕೂ ಹೆಚ್ಚು ದಾಳಿಗಳು, 300 ಕ್ಕೂ ಹೆಚ್ಚು ಸಿಬಿಐ / ಇಡಿ ಅಧಿಕಾರಿಗಳು ಮನೀಶ್ ಸಿಸೋಡಿಯಾ(Manish Sisodia) ವಿರುದ್ಧ ಸಾಕ್ಷ್ಯವನ್ನು ಹುಡುಕಲು 24 ಗಂಟೆಗಳ ಕಾಲ ಶ್ರಮಿಸುತ್ತಿದ್ದಾರೆ.
ಏನೂ ಇಲ್ಲದ ಕಾರಣ ಏನೂ ಸಿಗುತ್ತಿಲ್ಲ. ಎಷ್ಟೋ ಅಧಿಕಾರಿಗಳ ಸಮಯವನ್ನು ಕೆಲವರ ಕೊಳಕು ರಾಜಕೀಯಕ್ಕಾಗಿ ಹಾಳು ಮಾಡಲಾಗುತ್ತಿದೆ” ಎಂದು ಟೀಕಿಸಿದ್ದಾರೆ.
ಇನ್ನು ದೆಹಲಿ ಅಬಕಾರಿ ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇದುವರೆಗೆ 103ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ.
ಇದನ್ನೂ ಓದಿ : https://vijayatimes.com/kamal-hassan-controversial-statement/
ಈ ಪ್ರಕರಣದಲ್ಲಿ ಕಳೆದ ತಿಂಗಳು ಮದ್ಯದ ಉದ್ಯಮಿ ಮತ್ತು ಮದ್ಯ ತಯಾರಿಕಾ ಕಂಪನಿ ಇಂಡೋಸ್ಪಿರಿಟ್ನ ವ್ಯವಸ್ಥಾಪಕ (Aravind Kejrival Against ED Raid) ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಿದೆ.
ಅದೇ ರೀತಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆಯ ಮೇಲು ಇಡಿ ದಾಳಿ ನಡೆಸಿತ್ತು.

ದೆಹಲಿ ಅಬಕಾರಿ ನೀತಿ : ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಶಿಫಾರಸು ಮಾಡಿದ ನಂತರ, ಈ ಪ್ರಕರಣವನ್ನು ಇಡಿ ಕೈಗೆತ್ತಿಕೊಂಡಿತು. ಈ ಸಂಬಂಧ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.
ಇದನ್ನೂ ಓದಿ : https://vijayatimes.com/dk-shivkumar-appeared-to-ed/
ಈ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕೆಲವು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳ ಹೆಸರು ಕೇಳಿ ಬಂದಿದೆ.
–ಮಹೇಶ್.ಪಿ.ಎಚ್