New Delhi : ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಹೊಸ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋವನ್ನು ಹಾಕಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival Requests PM) ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ವಿಷಾದ (Aravind Kejrival Requests PM) ವ್ಯಕ್ತಪಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,
“ನಮ್ಮ ಆರ್ಥಿಕತೆಯನ್ನು ಮರಳಿ ಟ್ರ್ಯಾಕ್ ಮಾಡಲು ನಮಗೆ ಸಾಕಷ್ಟು ಪ್ರಯತ್ನಗಳ ಅಗತ್ಯವಿದೆ, ಆದರೆ ಅದರೊಂದಿಗೆ ನಮಗೆ ನಮ್ಮ ದೇವರು ಮತ್ತು ದೇವತೆಗಳ ಆಶೀರ್ವಾದವೂ ಬೇಕು”.
ಭಾರತೀಯ ಕರೆನ್ಸಿ ನೋಟುಗಳ ಮೇಲೆ ಒಂದು ಕಡೆ ಗಾಂಧೀಜಿಯವರ ಚಿತ್ರವಿದೆ ಅದು ಹಾಗೆಯೇ ಉಳಿಯಬೇಕು. ಇನ್ನೊಂದೆಡೆ ಗಣೇಶ್ ಜೀ ಮತ್ತು ಲಕ್ಷ್ಮೀ ಜೀ ಅವರ ಫೋಟೋ ಹಾಕಿದರೆ, ಇಡೀ ದೇಶವೇ ಭಗವಂತನ ಆಶೀರ್ವಾದ ಪಡೆಯಲಿದೆ.
https://youtu.be/R3Q1ONHN9_U ಸಂಪೂರ್ಣ ಗುಂಡಿಬಿದ್ದ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಗುಳಿಮಂಗಳ ರಸ್ತೆ !
ಇಂಡೋನೇಷ್ಯಾದ ಉದಾಹರಣೆಯನ್ನು ಉಲ್ಲೇಖಿಸಿ ಮಾತನಾಡಿದ ಕೇಜ್ರಿವಾಲ್, ಭಾರತದಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು.
“ಇಂಡೋನೇಷ್ಯಾ ಮುಸ್ಲಿಂ ದೇಶ. 85% ಮುಸ್ಲಿಮರು ಮತ್ತು 2% ಹಿಂದೂಗಳಿದ್ದಾರೆ. ಆದ್ರೆ, ಭಾರತೀಯ ಕರೆನ್ಸಿಯಲ್ಲಿ (Indian Currency) ಶ್ರೀ ಗಣೇಶ್ ಜಿ ಅವರ ಚಿತ್ರವಿರಬೇಕು.
ಮುಂದಿನ ದಿನದಲ್ಲಿ ಹೊಸದಾಗಿ ಮುದ್ರಿಸಲಾಗುವ ನೋಟುಗಳ ಮೇಲೂ ಮಾತಾ ಲಕ್ಷ್ಮಿ ಮತ್ತು ಶ್ರೀ ಗಣೇಶ ದೇವರ ಚಿತ್ರಗಳನ್ನು ಹಾಕಬೇಕೆಂದು ನಾನು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಭಗವಾನ್ ಗಣೇಶನನ್ನು ಎಲ್ಲಾ ಭಕ್ತರ ಸಮೂಹವೂ ವಿಘ್ನನಿವಾರಕ, ವಿಘ್ನ ವಿನಾಶಕ, ಅಡೆತಡೆಗಳನ್ನು ನಿವಾರಿಸುವವನು ಎಂದು ವ್ಯಾಪಕವಾಗಿ ಆರಾಧಿಸುತ್ತಾರೆ.
ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ. ಲಕ್ಷ್ಮಿ ದೇವಿ ಸಂಪತ್ತು, ಅದೃಷ್ಟ, ಶಕ್ತಿ, ಸೌಂದರ್ಯ ಮತ್ತು ಸಮೃದ್ಧಿಯ ಅಧಿದೇವತೆ.
ನಾಳೆ ಅಥವಾ ನಾಳೆಯ ಮರುದಿನ ನಾನು ಕೇಂದ್ರ ಸರ್ಕಾರಕ್ಕೆ ಈ ವಿಷಯದ ಬಗ್ಗೆ ಪತ್ರ ಬರೆದು ಮನವಿ ಮಾಡುತ್ತೇನೆ.
ದೇಶದ ಆರ್ಥಿಕ ಸ್ಥಿತಿಯನ್ನು ಇತ್ಯರ್ಥಪಡಿಸುವ ಪ್ರಯತ್ನಗಳ ಹೊರತಾಗಿ ನಮಗೆ ಸರ್ವಶಕ್ತನ ಆಶೀರ್ವಾದ ಕೂಡ ಬೇಕು ಎಂದು ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/2-antique-idols-stolen/