Who will be the next CM after Arvind Kejriwal? Who is in the race?
Delhi: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರು ರಾಜೀನಾಮೆ ನೀಡುವುದಾಗಿ ಭಾನುವಾರ ಮಾಡಿದ ಘೋಷಣೆಯು ಅವರ ಸಂಭಾವ್ಯ ಉತ್ತರಾಧಿಕಾರಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಇದೀಗ ದೆಹಲಿ ಮುಖ್ಯಮಂತ್ರಿ ಗಾದಿಗೆ ಅನೇಕ ಎಎಪಿ (AAP) ನಾಯಕರ ಹೆಸರುಗಳು ಕೇಳಿ ಬರುತ್ತಿವೆ.
ಈ ಮಧ್ಯೆ ಅವಧಿಗೆ ಮುನ್ನವೇ ಚುನಾವಣೆ ಘೋಷಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ದೆಹಲಿ ಅಸೆಂಬ್ಲಿಯ ಪ್ರಸ್ತುತ ಅವಧಿಯು ಫೆಬ್ರವರಿ (February) 11, 2025 ರಂದು ಮುಕ್ತಾಯಗೊಳ್ಳಲಿದೆ. ಇದಕ್ಕೂ ಮುನ್ನವೇ ಸರ್ಕಾರವನ್ನು ವಿಸರ್ಜನೆ ಮಾಡುವ ಬಗ್ಗೆ ಎಎಪಿ ಪಕ್ಷದೊಳಗೆ ಭಾರೀ ಚರ್ಚೆ ನಡೆದಿದೆ. ಏತನ್ಮಧ್ಯೆ, ಅರವಿಂದ್ ಕೇಜ್ರಿವಾಲ್ ಅವರು ಜನರಿಂದ ಕ್ಲೀನ್ ಚಿಟ್ ಪಡೆಯುವವರೆಗೆ ಯಾವುದೇ ಅಧಿಕೃತ ಹುದ್ದೆಯನ್ನು ವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣ (Excise Policy Case)ದಲ್ಲಿ ಶುಕ್ರವಾರ ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕೇಜ್ರಿವಾಲ್, ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುವವರೆಗೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಮೂಲಗಳ ಪ್ರಕಾರ, ಪಕ್ಷದ ನಾಯಕರೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ರೇಸ್ನಲ್ಲಿ ಶಾಸಕಿ ಅತಿಶಿ, ಸೌರಭ್ ಭಾರದ್ವಾಜ್, ಕೈಲಾಶ್ ಗಹ್ಲೋಟ್, ಗೋಪಾಲ್ ರಾಯ್ (Atishi, Saurabh Bhardwaj, Kailash Gehlot, Gopal Roy) ಮತ್ತು ಇಮ್ರಾನ್ ಹುಸೇನ್ ಅವರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯಲ್ಲಿರುವವರಲ್ಲಿ, ಶಿಕ್ಷಣ, ಹಣಕಾಸು, ಕಂದಾಯ ಮತ್ತು ಕಾನೂನು ಸೇರಿದಂತೆ ಹಲವು ಪ್ರಮುಖ ಖಾತೆಗಳ ನಿರ್ವಹಣೆಯಿಂದಾಗಿ ಶಾಸಕಿ ಅತಿಶಿ ಹೆಸರು ಎದ್ದು ಕಾಣುತ್ತಿದೆ. ಇದಕ್ಕೂ ಮುನ್ನ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸ್ಥಾನದಲ್ಲಿ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಅತಿಶಿ ಅವರನ್ನು ನಾಮನಿರ್ದೇಶನ ಮಾಡಿದ್ದರು.
ಆದಾಗ್ಯೂ, ಈ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿತ್ತು. ಕೇಜ್ರಿವಾಲ್ ಅವರಿಗೆ ಆಪ್ತರಾಗಿರುವ ಅತಿಶಿ ಸಿಎಂ ಗಾದಿಗೇರುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಸಿಎಂ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಯಾವುದೇ ನಿರ್ದಿಷ್ಟ ವ್ಯಕ್ತಿಗಳನ್ನು ಹೆಸರಿಸದಿದ್ದರೂ ದಲಿತ ನಾಯಕರೊಬ್ಬರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸಬಹುದು ಎಂದು ಕೆಲವು ಎಎಪಿ ಮುಖಂಡರು ಹೇಳಿದ್ದಾರೆ.
Aravind Kejriwal Resignation LIVE Updates Kannada
Delhi: Arvind Kejriwal’s announcement of resignation as Delhi Chief Minister on Sunday has fueled speculation about his potential successor. Now the names of many AAP leaders are being heard for Delhi Chief Minister Gadi.
In the meantime, it is said that there is a possibility of announcing the election before the period. The current term of the Delhi Assembly will end on February 11, 2025. Before this, there was a huge discussion within the AAP party about the dissolution of the government. Meanwhile, Arvind Kejriwal has announced that he will not hold any official post until he gets a clean chit from the people.
Kejriwal, who was released on bail from Tihar Jail on Friday in the Excise Policy Case, vowed not to sit on the CM’s chair until people give him a certificate of honesty. According to sources, a party leader is said to be taking over as Chief Minister.
MLAs Atishi, Saurabh Bhardwaj, Kailash Gehlot, Gopal Roy and Imran Hussain are hearing strongly in the Chief Minister race. Among the frontrunners for the post of chief minister, MLA Atishi’s name stands out due to her handling of several important portfolios including education, finance, revenue and law. Earlier, CM Arvind Kejriwal had nominated Atishi to hoist the tricolor on Independence Day in his place.
However, this nomination was rejected. Atishi, who is close to Kejriwal, is likely to become the CM. Meanwhile Arvind Kejriwal’s wife Sunita The possibility of Kejriwal holding the post of CM cannot be ruled out. But some AAP leaders said that a Dalit leader could be appointed as the next chief minister, though no specific person was named.