ಬೆಂಗಳೂರು : ರಸ್ತೆ ಸಂಚಾರ ನಿಯಮದ ಸಿಗ್ನಲ್ ಜಂಪ್ ಮಾಡುವುದನ್ನು ನಿಲ್ಲಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್(Bengaluru Traffic Police) ಕೇಳಿದ ನಂತರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ(Media) ಅಸಭ್ಯವಾಗಿ ವರ್ತಿಸಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಮಗಳ ಪರವಾಗಿ ಬಿಜೆಪಿ ಶಾಸಕ(BJP MLA) ಅರವಿಂದ್ ಲಿಂಬಾವಳಿ(Aravind Limbavali) ಮಾಧ್ಯಮಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.
“ನಾನು ವೀಡಿಯೊವನ್ನು ನೋಡಿದ್ದೇನೆ, ಅವಳು ಮಾಧ್ಯಮದವರನ್ನು ‘ಸರ್’ ಎಂದು ಸಂಬೋಧಿಸಿದ್ದಾಳೆ, ಮಾಧ್ಯಮದವರಿಗೆ ನೋವಾಗಿದ್ದರೆ, ನಾನು ಅವಳ ಪರವಾಗಿ ಕ್ಷಮೆಯಾಚಿಸುತ್ತೇನೆ, ನಮ್ಮ ಕುಟುಂಬವು ಉತ್ತಮ ಹೆಸರನ್ನು ಹೊಂದಿದೆ” ಎಂದು ಹೇಳಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಕುರಿತು ಶಾಸಕರ ಪುತ್ರಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಪೊಲೀಸರು ಆಕೆಗೆ ಸಾಕ್ಷ್ಯ(Video Footage) ತೋರಿಸಿ 10 ಸಾವಿರ ದಂಡ ವಸೂಲಿ ಕೂಡ ಮಾಡಿದ್ದಾರೆ.

“ನನಗೆ ಈಗ ಹೋಗಬೇಕು. ಕಾರು ತಡೆಯಬೇಡಿ. ಓವರ್‌ಟೇಕ್ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಲು ಸಾಧ್ಯವಿಲ್ಲ. ಇದು ಎಂಎಲ್‌ಎ ವಾಹನ. ಈಗ ಹೋಗಲು ಬಿಡಿ, ನಾವು ದುಡುಕಿ ಓಡಿಸುತ್ತಿಲ್ಲ. ನನ್ನ ತಂದೆ ಒಬ್ಬ ಶಾಸಕ ಅರವಿಂದ ಲಿಂಬಾವಳಿ ಎಂದು ಆಕೆ ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ.