7ನೇ ಬಾರಿ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ (Argentina Defeated Switzerland) ಅರ್ಜೆಂಟೀನಾ; ಸ್ವಿಸ್ ಕನಸು ಭಗ್ನ
ಕ್ವಾರ್ಟರ್‌ಫೈನಲ್‌ನಲ್ಲಿ 3-1 ಅಂತರದ ಗೆಲುವು; ವಿಶ್ವಚಾಂಪಿಯನ್ಸ್ ಮತ್ತೊಮ್ಮೆ ಪ್ರಶಸ್ತಿಯತ್ತ ಹೆಜ್ಜೆ
ಮ್ಯಾಕ್ ಅಲಿಸ್ಟರ್, ಆಲ್ವರೆಜ್ ಹಾಗೂ ಲಾಟರೊ ಗೋಲುಗಳ ನೆರವಿನಿಂದ ಸ್ವಿಜರ್‌ಲೆಂಡ್ ವಿರುದ್ಧ ಭರ್ಜರಿ ಜಯ
ಹಾಲಿ ವಿಶ್ವಚಾಂಪಿಯನ್ ಅರ್ಜೆಂಟೀನಾ ಮತ್ತೊಮ್ಮೆ ತನ್ನ ಚಾಂಪಿಯನ್ (Argentina Defeated Switzerland) ಆಟವನ್ನು ಪ್ರದರ್ಶಿಸಿ ಫಿಫಾ ವಿಶ್ವಕಪ್ 2026ರ ಸೆಮಿಫೈನಲ್‌ಗೆ ಭರ್ಜರಿ ಪ್ರವೇಶ ಮಾಡಿದೆ.
ಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಜರ್‌ಲೆಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನೇತೃತ್ವದ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸಿ ಸಮಬಲ ಸಾಧಿಸಿದ್ದರಿಂದ ಪಂದ್ಯ ಹೆಚ್ಚುವರಿ ಅವಧಿಗೆ ಸಾಗಿತು.

ಹೆಚ್ಚುವರಿ ಸಮಯದಲ್ಲಿ ಜೂಲಿಯನ್ ಆಲ್ವರೆಜ್ ಹಾಗೂ ಲಾಟರೊ ಮಾರ್ಟಿನೆಜ್ ಗಳಿಸಿದ ಗೋಲುಗಳು ಅರ್ಜೆಂಟೀನಾಗೆ ಅಮೂಲ್ಯ ಗೆಲುವು ತಂದುಕೊಟ್ಟವು.
ಇದರೊಂದಿಗೆ ಸತತ ಎರಡನೇ ವಿಶ್ವಕಪ್‌ನಲ್ಲೂ ಸೆಮಿಫೈನಲ್ ಪ್ರವೇಶಿಸಿದ (Argentina Defeated Switzerland) ಅರ್ಜೆಂಟೀನಾ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.
ಪಂದ್ಯದ ಆರಂಭದಿಂದಲೇ ಅರ್ಜೆಂಟೀನಾ (Argentina) ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಪರಿಣಾಮ 10ನೇ ನಿಮಿಷದಲ್ಲೇ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಸುಂದರ
ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ ಹಿನ್ನಡೆಯಿಂದ ಕುಗ್ಗದ ಸ್ವಿಜರ್‌ಲೆಂಡ್ ಎರಡನೇಾರ್ಧದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
67ನೇ ನಿಮಿಷದಲ್ಲಿ ಡ್ಯಾನ್ ಎನ್‌ಡೊಯೆ ಗೋಲು ದಾಖಲಿಸಿ ಪಂದ್ಯವನ್ನು 1-1ಕ್ಕೆ ತಂದರು. ಬಳಿಕ ಎರಡೂ ತಂಡಗಳು ಹಲವು ಅವಕಾಶಗಳನ್ನು ಸೃಷ್ಟಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯ ಹೆಚ್ಚುವರಿ 30 ನಿಮಿಷಗಳಿಗೆ ಸಾಗಿತು.
ನಿರ್ಣಾಯಕ ಕ್ಷಣದಲ್ಲಿ 112ನೇ ನಿಮಿಷದಲ್ಲಿ ಜೂಲಿಯನ್ ಆಲ್ವರೆಜ್ ಗೋಲು ಹೊಡೆದು ಅರ್ಜೆಂಟೀನಾಗೆ ಮುನ್ನಡೆ ನೀಡಿದರೆ, ಇಂಜುರಿ ಸಮಯದಲ್ಲಿ ಲಾಟರೊ ಮಾರ್ಟಿನೆಜ್ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಮುದ್ರೆ ಒತ್ತಿದರು.
ಪಂದ್ಯದ ಪ್ರಮುಖ ತಿರುವು ಸ್ವಿಜರ್‌ಲೆಂಡ್ ಆಟಗಾರ ಬ್ರಿಲ್ ಎಂಬೊಲೊಗೆ ದೊರೆತ ಕೆಂಪು ಕಾರ್ಡ್ ಆಗಿತ್ತು. ಮೊದಲಾರ್ಧದಲ್ಲೇ ಹಳದಿ ಕಾರ್ಡ್ ಪಡೆದಿದ್ದ ಎಂಬೊಲೊ,
ಎರಡನೇಾರ್ಧದಲ್ಲಿ ಪೆನಾಲ್ಟಿ ಪಡೆಯುವ ಉದ್ದೇಶದಿಂದ ಡೈವ್ ಮಾಡಿರುವುದಾಗಿ ವಿಡಿಯೋ ಸಹಾಯಕ ರೆಫ್ರಿ (VAR) ಪರಿಶೀಲನೆಯ ಬಳಿಕ ತೀರ್ಮಾನಿಸಲಾಯಿತು.
ಆರಂಭದಲ್ಲಿ ಅರ್ಜೆಂಟೀನಾದ ಲಿಯಾಂಡ್ರೊ ಪರೇಡೆಸ್ (Leandro Paredes) ವಿರುದ್ಧ ಫೌಲ್ ತೀರ್ಪು ನೀಡಿದ್ದ ರೆಫ್ರಿ, ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಎಂಬೊಲೊಗೆ ಎರಡನೇ ಹಳದಿ ಕಾರ್ಡ್ ತೋರಿಸಿದರು. ಇದರ ಪರಿಣಾಮ ಅದು ಕೆಂಪು ಕಾರ್ಡ್ ಆಗಿ ಮಾರ್ಪಟ್ಟು ಅವರು ಪಂದ್ಯದಿಂದ ಹೊರಬಿದ್ದರು.
ನಿರ್ಣಾಯಕ ಹಂತದಲ್ಲಿ 10 ಆಟಗಾರರೊಂದಿಗೆ ಆಡಬೇಕಾದ ಸ್ವಿಜರ್‌ಲೆಂಡ್‌ಗೆ ಇದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಅರ್ಜೆಂಟೀನಾ ಕೊನೆಯ ಕ್ಷಣಗಳಲ್ಲಿ ಎರಡು ಗೋಲುಗಳನ್ನು ದಾಖಲಿಸಿ ಗೆಲುವು ತನ್ನದಾಗಿಸಿಕೊಂಡಿತು.
ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಇತಿಹಾಸದಲ್ಲಿ ಏಳನೇ ಬಾರಿ ಸೆಮಿಫೈನಲ್ (Semifinal) ಪ್ರವೇಶಿಸಿದ ಸಾಧನೆ ಮಾಡಿದೆ. 1930, 1978, 1986, 1990, 2014 ಹಾಗೂ 2022ರ ಬಳಿಕ ಇದೀಗ 2026ರಲ್ಲೂ ತಂಡ ಕೊನೆಯ ನಾಲ್ಕರ ಘಟ್ಟ ತಲುಪಿದೆ.
ವಿಶೇಷವೆಂದರೆ ಈ ಹಿಂದಿನ ಎಲ್ಲ ಆರು ಸಂದರ್ಭಗಳಲ್ಲೂ ಅರ್ಜೆಂಟೀನಾ ಫೈನಲ್ ತಲುಪಿತ್ತು. ಮತ್ತೊಂದೆಡೆ, ಸ್ವಿಜರ್‌ಲೆಂಡ್ (Switzerland) ನಾಲ್ಕನೇ ಬಾರಿ ಕ್ವಾರ್ಟರ್‌ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದು, ಇನ್ನೂ ಒಮ್ಮೆಯೂ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ.
ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ದಾಖಲಿಸಿದ ಇದು 13ನೇ ಜಯವಾಗಿದ್ದು, ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ ಸಾಧಿಸದ ದಾಖಲೆ ಇದಾಗಿದೆ. ಜರ್ಮನಿ 12 ಹೆಚ್ಚುವರಿ ಅವಧಿಯ ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಈ ಬಾರಿಯ ವಿಶ್ವಕಪ್ ಹಲವು ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗಿದೆ. ಫಿಫಾ ರ್‍ಯಾಂಕಿಂಗ್‌ನ ಅಗ್ರ ನಾಲ್ಕು ಸ್ಥಾನಗಳಲ್ಲಿರುವ ಫ್ರಾನ್ಸ್, ಅರ್ಜೆಂಟೀನಾ, ಸ್ಪೇನ್ (Spain) ಮತ್ತು ಇಂಗ್ಲೆಂಡ್ ತಂಡಗಳು ಒಂದೇ ವೇಳೆ ಸೆಮಿಫೈನಲ್ ಪ್ರವೇಶಿಸಿರುವುದು ರ್‍ಯಾಂಕಿಂಗ್ ವ್ಯವಸ್ಥೆ ಆರಂಭವಾದ ಬಳಿಕ ಇದೇ ಮೊದಲ ಬಾರಿ.
ಅಲ್ಲದೆ, ಈ ನಾಲ್ಕೂ ತಂಡಗಳು ಈ ಹಿಂದೆ ವಿಶ್ವಕಪ್ ಟ್ರೋಫಿ ಗೆದ್ದಿರುವ ಮಾಜಿ ಚಾಂಪಿಯನ್ಸ್ ಆಗಿರುವುದು ಮತ್ತೊಂದು ವಿಶೇಷ. ಅರ್ಜೆಂಟೀನಾ ಸತತ ನಾಲ್ಕು
ಪಂದ್ಯಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ದಾಖಲಿಸಿರುವ ಅಪರೂಪದ ಸಾಧನೆ ಮಾಡಿದ್ದು, ಈ ದಾಖಲೆ ಫ್ರಾನ್ಸ್ ಹೆಸರಿನಲ್ಲೂ ಇದೆ.
ಇನ್ನೊಂದೆಡೆ, ಲಿಯೋನಲ್ ಮೆಸ್ಸಿ (Lionel Messi) ಹಾಗೂ ಕೈಲಿಯನ್ ಎಂಬಾಪೆ ಈ ವಿಶ್ವಕಪ್‌ನಲ್ಲೂ ತಲಾ 10ಕ್ಕೂ ಹೆಚ್ಚು ಗೋಲು ಕೊಡುಗೆ (ಗೋಲು ಹಾಗೂ ಅಸಿಸ್ಟ್ ಸೇರಿ)
ನೀಡುವ ಮೂಲಕ ಕಳೆದ 60 ವರ್ಷಗಳಲ್ಲಿ ಎರಡು ವಿಭಿನ್ನ ವಿಶ್ವಕಪ್ ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಎಲ್ಲ ಸಾಧನೆಗಳೊಂದಿಗೆ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಇದನ್ನು ಓದಿ : https://vijayatimes.com/ram-mandir-donation-guidelines/