Kochi: ನನ್ನ ಮೇಲೆ ದೈಹಿಕ ದಾಳಿ ನಡೆಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಸಂಚು (Arif Khan Against CM Pinarayi) ರೂಪಿಸಿದ್ದರು. ಇದಕ್ಕಾಗಿಯೇ
ಅವರು ಪಿತೂರಿ ನಡೆಸಿದ್ದಾರೆ ಎಂದು
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed khan) ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಕಾರಿನ ಮೇಲೆ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (Students Federation
of india) ಕಾರ್ಯಕರ್ತರು ದಾಳಿ ನಡೆಸಿದ ನಂತರ ಈ ಆರೋಪ ಕೇಳಿ ಬಂದಿದೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಕಾರ, ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್
ಇಂಡಿಯಾ (ಎಸ್ಎಫ್ಐ) ಕಾರ್ಯಕರ್ತರು ನನ್ನ (Arif Khan Against CM Pinarayi) ವಾಹನವನ್ನು ಸುತ್ತುವರೆದರು,
ಕಪ್ಪು ಬಾವುಟವನ್ನು ಬೀಸುತ್ತಾ, ವಾಹನವನ್ನು ಹೊಡೆದರು. ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿಗೆ ಪ್ರತಿಭಟನಾಕಾರರಿರುವ ಕಾರುಗಳನ್ನು ಬಿಡಲು ಸಾಧ್ಯವೇ? ಪೊಲೀಸರು ಯಾರಿಗಾದರೂ
ಸಿಎಂ ಕಾರಿನ ಬಳಿ ಬರಲು ಅವಕಾಶ ನೀಡುತ್ತಾರೆಯೇ? ಇಲ್ಲಿ ಪ್ರತಿಭಟನಾಕಾರರ (Protesters) ಕಾರುಗಳು ಅಲ್ಲಿಯೇ ನಿಂತಿದ್ದವು. ಇದೆಲ್ಲವನ್ನು ಗಮನಿಸಿದರೆ, ನನ್ನ ಮೇಲೆ ದೈಹಿಕವಾಗಿ ದಾಳಿ ನಡೆಸಲು
ಈ ಜನರನ್ನು ಕಳುಹಿಸಿದ್ದರು.

ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಈ ದಾಳಿಯ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗೂಂಡಾಗಳಿದ್ದಾರೆ. ಈ ಗೂಂಡಾಗಳು ತಿರುವನಂತಪುರದ (Tiruvanthapura) ರಸ್ತೆಗಳ ಉಸ್ತುವಾರಿ
ವಹಿಸಿಕೊಂಡಿದ್ದಾರೆ ಎಂದು ರಾಜ್ಯಪಾಲ ಆರಿಫ್ ಖಾನ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ರಾಜಭವನದ ಮೂಲಗಳ ಪ್ರಕಾರ, ರಾಜ್ಯಪಾಲ ಆರಿಫ್ ಖಾನ್ ಅವರಿಗೆ ಮೂರು ಸ್ಥಳಗಳಲ್ಲಿ ಕಪ್ಪು ಬಾವುಟ ಬೀಸಲಾಯಿತು. ಎರಡು ಕಡೆಗಳಲ್ಲಿ ಅವರ ಕಾರಿಗೆ ಪ್ರತಿಭಟನಾಕಾರರು ಡಿಕ್ಕಿ ಹೊಡೆದರು.
ಮತ್ತೊಂದೆಡೆ, ರಾಜ್ಯಪಾಲರ ವಾಹನವನ್ನು ಎಸ್ಎಫ್ಐ ಕಾರ್ಯಕರ್ತರು ತಡೆದರು. ಇನ್ನು ಕಾಂಗ್ರೆಸ್, ಯುಡಿಎಫ್ ಮತ್ತು ಬಿಜೆಪಿ (Congress, UDF And BJP) ಪಕ್ಷಗಳು ಕೂಡ ದಾಳಿಯ ಹಿಂದೆ
ಸಿಎಂ ವಿಜಯನ್ ಕೈವಾಡವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿವೆ.
ಇನ್ನು ವಿಧಾನಸಭೆಯಲ್ಲಿ ಅಂಗೀಕಾರವಾದ ಬಾಕಿ ಇರುವ ಮಸೂದೆಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ವಿಚಾರದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ರಾಜ್ಯ ಸರ್ಕಾರದ ನಡುವೆ ಅನೇಕ ಬಾರಿ
ವಾಗ್ವಾದ ನಡೆದಿದ್ದು, ಈ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಇದನ್ನು ಓದಿ: ಆರೋಗ್ಯ ಮಾಹಿತಿ: ಶಸ್ತ್ರಚಿಕಿತ್ಸೆ ನಂತರ ಬೇಗ ಚೇತರಿಸಿಕೊಳ್ಳಲು ಇಲ್ಲಿದೆ ವೈದ್ಯರ ಉಪಯುಕ್ತ ಮಾಹಿತಿ