ವಿಶ್ವಕಪ್ ಶೂಟಿಂಗ್ ; ಚಿನ್ನದ ಪದಕಕ್ಕೆ ಮುತ್ತಿಟ್ಟ ಅರ್ಜುನ್ ಬಬೂತಾ

ಅರ್ಜುನ್ ಬಬೂತಾ(Arjun Babutha), ತುಷಾರ್‌ ಮಾನೆ ಹಾಗೂ ಪಾರ್ಥ್‌ ಮಖಿಜಾ ಅವರನ್ನೊಳಗೊಂಡ ಭಾರತದ(India) ಪುರುಷರ ತಂಡ ದಕ್ಷಿಣ ಕೊರಿಯಾದ(South Korea) ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದೆ.


ಸೋಮವಾರ ನಡೆದ ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌(Air Rifile) ವಿಭಾಗದಲ್ಲಿ ಅರ್ಜುನ್ ಅವರು ಟೋಕಿಯೊ ಒಲಿಂಪಿಕ್ಸ್‌(Tokyo Olympics) ಬೆಳ್ಳಿ ಪದಕ ವಿಜೇತ ಸ್ಪರ್ಧಿ, ಅಮೆರಿಕದ ಲೂಕಸ್ ಕೊಜೆನಿಸ್ಕಿ ವಿರುದ್ಧ 17–9 ಪಾಯಿಂಟ್ ಅಂತರದಲ್ಲಿ ಗೆದ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದು. ಪಂಜಾಬ್‌ನ 23 ವರ್ಷದ ಅರ್ಜುನ್‌ ಅವರು ಸೀನಿಯರ್ ವಿಭಾಗದಲ್ಲಿ ಗೆದ್ದ ಮೊದಲ ಚಿನ್ನ ಇದಾಗಿದೆ. ರ್‍ಯಾಂಕಿಂಗ್ ರೌಂಡ್‌ನಲ್ಲಿ 261.1 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದು ಅವರು ಚಿನ್ನದ ಪದಕದ ಪೈಪೋಟಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಫೈನಲ್‌ನಲ್ಲಿ ನಿಖರ ಗುರಿ ಹಿಡಿದ ಅರ್ಜುನ್‌ ಮೊದಲ ಏಳು ಅವಕಾಶಗಳ ಬಳಿಕ 10–4 ಪಾಯಿಂಟ್ ನಲ್ಲಿ ಮುನ್ನಡೆಯಲ್ಲಿದ್ದರು. ಆ ಬಳಿಕವೂ ಉತ್ತಮ ಪ್ರದರ್ಶನ ಮುಂದುವರಿಸಿ ಚಿನ್ನದ ಪದಕವನ್ನು ಗಿಟ್ಟಿಸಿಕೊಂಡರು. ಇನ್ನು, ಇಸ್ರೇಲ್‌ನ ಸೆರ್ಗಿ ರಿಕ್ಟೆರ್‌ ಕಂಚು ಜಯಿಸಿದರೆ ಕಣದಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್‌ ಪಾರ್ಥ್‌ ಮಖೀಜಾ ನಾಲ್ಕನೇ ಸ್ಥಾನ ಪಡೆದುಕೊಂಡರು. ಅದೇ ರೀತಿ ಏರ್‌ ರೈಫಲ್ ಮಹಿಳೆಯರ ತಂಡ ವಿಭಾಗದಲ್ಲಿ ಕೂಡ ಭಾರತ ಬೆಳ್ಳಿ ಗೆದ್ದಿದೆ. ಆತಿಥೇಯ ತಂಡದ ಶೂಟರ್‌ಗಳಾದ ಜಿಹೈಯೊನ್‌ ಕಿಯುಮ್‌, ಇಯುನ್ಸಿಯೊ ಲೀ ಮತ್ತು ಡಯಿಯೊಂಗ್‌ ಗ್ವೋನ್‌,

ಭಾರತದ ಎಲವೆನಿಲ್‌ ವಲರಿವಾನ್‌, ಮೆಹುಲಿ ಘೋಷ್‌ ಮತ್ತು ರಮಿತಾ ಎದುರು 16–10 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನು, ಆಸ್ಟ್ರೇಲಿಯಾದ ಥಾಮಸ್‌ ಫಾರ್ಕಿನ್‌ ಅವರು ಭಾರತ ರಾಷ್ಟ್ರೀಯ ಶೂಟಿಂಗ್‌ ತಂಡದ ಕೋಚ್‌ ಆಗಿ ನೇಮಕಗೊಂಡ ಬಳಿಕ ದೊರೆತ ಮೊದಲ ಅಂತಾರಾಷ್ಟ್ರೀಯ ಚಿನ್ನದ ಪದಕ ಇದು. ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳಿರುವಾಗ ಇವರ ನೇಮಕವಾಗಿತ್ತು. ಸದ್ಯ, ಮೂರು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಒಂದು ಕಂಚು ಸಹಿತ ಒಟ್ಟು ಎಂಟು ಪದಕ ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

  • ಪವಿತ್ರ

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.