ಉತ್ತರಕಾಶಿ (Uttarakashi) ಸುರಂಗ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಲ್ಕ್ಯಾರಾ (Arnold Dix gave shockingnews) ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ
ಬಹುದೊಡ್ಡ ಹಿನ್ನೆಡೆಯಾಗಿದ್ದು, ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ (Arnold Dix) ಅವರು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿ ಆತಂಕಕಾರಿ ಮಾಹಿತಿ ನೀಡಿದ್ದಾರೆ.
ಸುರಂಗ ಕೊರೆಯುವ ಅಗರ್ ಮೆಷಿನ್ ರಿಪೇರಿ (Machine Repair) ಮಾಡಲಾಗದ ಸ್ಥಿತಿ ತಲುಪಿದೆ. ಈಗ ನಾವು ಬೇರೆ ಬೇರೆ ಆಯ್ಕೆಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ. ಡ್ರಿಲ್ಲಿಂಗ್ ಮಾಡುತ್ತಿದ್ದ
ಅಗರಿಂಗ್ ಮೆಷಿನ್ ಕಾರ್ಯ ಈಗ ಸ್ಥಗಿತವಾಗಿದೆ. 41 ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಬರಬೇಕು. ಯಾರಿಗೂ ಗಾಯವಾಗದಂತೆ ರಕ್ಷಣೆ ಮಾಡಬೇಕಾಗಿದೆ.
41 ಕಾರ್ಮಿಕರ ರಕ್ಷಣೆಗೆ ಇನ್ನೂ ಒಂದು ತಿಂಗಳ ಸಮಯ ಬೇಕು. ಕ್ರಿಸ್‌ಮಸ್ (Christmas) ವೇಳೆಗೆ ರಕ್ಷಣಾ ಕಾರ್ಯಾಚರಣೆ ಮುಗಿಯಲಿದೆ ಎಂದು ಅರ್ನಾಲ್ಡ್ ಡಿಕ್ಸ್ ಹೇಳಿದ್ದು, ಕಾರ್ಮಿಕರ ರಕ್ಷಣೆಗೆ
ಕೇವಲ ಒಂದೇ ಒಂದು ಮಾರ್ಗವಿಲ್ಲ. ಹಲವಾರು ಆಯ್ಕೆಗಳು ನಮ್ಮ ಮುಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ಸುರಂಗ ಕೊರೆಯುವ ಅಗರ್ ಮೆಷಿನ್ ರಿಪೇರಿ ಮಾಡಲಾಗದ ಸ್ಥಿತಿ ತಲುಪಿದೆ.
ಅಗರ್ ಮೆಷಿನ್‌ನಿಂದ (Agar machine) ಇನ್ನೂ ಕೊರೆಯಲು ಸಾಧ್ಯವಿಲ್ಲ. ಈಗ ನಾವು ಬೇರೆ ಬೇರೆ ಆಯ್ಕೆಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಕಾರ್ಮಿಕರು ಸುರಂಗದಲ್ಲಿ ಸಿಲುಕಿ
ಇದುವರೆಗೂ 12 ದಿನಗಳೇ ಕಳೆದು ಹೋಗಿದ್ದು, 6 ಇಂಚಿನ ಪೈಪ್ ಮೂಲಕ ಕಾರ್ಮಿಕರಿಗೆ ಊಟ, ಆಹಾರವನ್ನು ಪೂರೈಸಲಾಗುತ್ತಿದೆ. ಆದರೆ ಕಾರ್ಮಿಕರನ್ನು ಕಾಪಾಡುವ ಡ್ರಿಲ್ಲಿಂಗ್ ಪೈಪ್
(Drilling Pipe) ಕಾರ್ಯಾಚರಣೆ ಇನ್ನೂ 10 ಮೀಟರ್ ಬಾಕಿ ಇರುವಾಗ (Arnold Dix gave shockingnews) ಬಹುದೊಡ್ಡ ಹಿನ್ನಡೆಯಾಗಿದೆ.
ಇದನ್ನು ಓದಿ: ಭಾರತೀಯ ನೌಕಾಪಡೆ ಅಧಿಕಾರಿಗಳ ಮರಣದಂಡನೆಗೆ ವಿರೋಧ: ಭಾರತದ ಮನವಿ ಸ್ವೀಕರಿಸಿದ ಕತಾರ್
- ಭವ್ಯಶ್ರೀ ಆರ್ ಜೆ