ಬಂಧಿತ ತೃಣಮೂಲ ಕಾಂಗ್ರೆಸ್(TMC) ನಾಯಕ ಪಾರ್ಥ ಚಟರ್ಜಿ(Partha Chatterjee) ಮತ್ತು ಆತನ ಸಹಾಯಕಿ ಅರ್ಪಿತಾ ಮುಖರ್ಜಿ(Arpitha Mukharjee) ಶಾಂತಿನಿಕೇತನದಲ್ಲಿ ಜಂಟಿ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪಶ್ಚಿಮ ಬಂಗಾಳದ(West Bengal) ಎಸ್‌ಎಸ್‌ಸಿ ಹಗರಣ(SSC Scam), ಶಿಕ್ಷಣ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಗಳು 2012 ರಲ್ಲಿ ಜಂಟಿ ಆಸ್ತಿಯನ್ನು ಖರೀದಿಸಿದ್ದಾರೆ. ಇಬ್ಬರೂ ಖರೀದಿಸಿದ ಫಾರ್ಮ್‌ಹೌಸ್ಗೆ 20 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ವರದಿ ಹೇಳುತ್ತಿದೆ.
ಹಿಂದಿನ ದಿನ, ಜಾರಿ ನಿರ್ದೇಶನಾಲಯ(ED) ಅರ್ಪಿತಾ ಮುಖರ್ಜಿ ಅವರ ಕನಿಷ್ಠ ಮೂರು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇನ್ನು ಪಾರ್ಥ ಚಟರ್ಜಿಯ ಹಲವಾರು “ಶೆಲ್ ಕಂಪನಿಗಳಿಗೆ” ಸೇರಿದ ಬ್ಯಾಂಕ್ ಖಾತೆಗಳು ಇಡಿ ಕಣ್ಗಾವಲಿನಲ್ಲಿದೆ. ಅರ್ಪಿತಾ ಮುಖರ್ಜಿ ಅವರು ಯಾವ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಕಂಡುಹಿಡಿಯಲು ಸಂಸ್ಥೆಯು ಅವರನ್ನು ವಿಚಾರಣೆ ಮಾಡುತ್ತಿದೆ ಹಾಗೂ ಹೆಚ್ಚು ಮಾಹಿತಿ ಪಡೆಯಲು ವಿಚಾರಣೆಯನ್ನು ಮುಂದುವರಿಸಲಿದೆ ಎಂದು ED ಸ್ಲೀತ್ ಹೇಳಿದ್ದಾರೆ.
ಪಾರ್ಥ ಚಟರ್ಜಿ ಅವರ ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆಯಿಂದ ಮುಖರ್ಜಿ ಮತ್ತು ಚಟರ್ಜಿ ಇಬ್ಬರ ವಿಚಾರಣೆ ನಡೆಯುತ್ತಿದೆ. ಸಚಿವ ಸ್ಥಾನ ಮತ್ತು ಪಕ್ಷದ ಕರ್ತವ್ಯಗಳಿಂದ ಪಾರ್ಥ ಚಟರ್ಜಿಯನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ(Mamata Banerjee) ವಜಾಗೊಳಿಸಿದರು. ಚಟರ್ಜಿ ಮತ್ತು ಮುಖರ್ಜಿ ಅವರ ಎರಡು ಫ್ಲಾಟ್‌ಗಳಿಂದ ಇ.ಡಿ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿ ಜೊತೆಗೆ 50 ಕೋಟಿ ರೂಪಾಯಿಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಆಗಸ್ಟ್ 3 ರವರೆಗೆ ಕೇಂದ್ರ ಏಜೆನ್ಸಿಯ ವಶದಲ್ಲಿರುತ್ತಾರೆ ಎಂದು ತಿಳಿಸಿದೆ.
ಇವರಿಬ್ಬರನ್ನು ಜುಲೈ 23 ರಂದು ಎಸ್.ಎಸ್.ಸಿ ಅಕ್ರಮ ಹಗರಣದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲಾಯಿತು. ಅಲ್ಲಿ ನಿಜವಾದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್‌ನಲ್ಲಿ ತೋರಿಸದೆ, ಅವರ ಹೆಸರುಗಳನ್ನು ದೂರವಿಡಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಹಗರಣದ ಮನಿ ಲಾಂಡರಿಂಗ್ ಅಂಶದ ಬಗ್ಗೆ ಇ.ಡಿ ತನಿಖೆಯನ್ನು ಚುರುಕುಗೊಳಿಸಿದೆ.