ಬಂಧಿತ ಪಶ್ಚಿಮ ಬಂಗಾಳ(West Bengal) ಸಚಿವ ಪಾರ್ಥ ಚಟರ್ಜಿ(Partha Chatterjee) ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ(Arpitha Mukharjee) ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ED) ತಮ್ಮ ಎರಡನೇ ಫ್ಲಾಟ್‌ನಿಂದ ವಶಪಡಿಸಿಕೊಂಡ ಹಣ ಚಟರ್ಜಿಗೆ ಸೇರಿದ್ದು ಎಂದು ಸ್ಪೋಟಕ ಮಾಹಿತಿ ನೀಡಿದ್ದಾರೆ. ಆಕೆಯ ಮೊದಲ ಫ್ಲಾಟ್‌ನಿಂದ 21 ಕೋಟಿ ರೂ.ಗಳನ್ನು ವಶಪಡಿಸಿಕೊಂಡ ದಿನಗಳ ನಂತರ ತನಿಖಾ ಸಂಸ್ಥೆಯು ಆಕೆಯ ಎರಡನೇ ಅಪಾರ್ಟ್‌ಮೆಂಟ್‌ನಿಂದ 28 ಕೋಟಿ ರೂಪಾಯಿ ನಗದು ಮತ್ತು 5 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡ ದಿನವೇ ಆಕೆಯ ಹೇಳಿಕೆ ಹೊರಬಿದ್ದಿದೆ.
ಹಣ ಎಣಿಸಲು 10 ಗಂಟೆ ತೆಗೆದುಕೊಂಡ ಅಧಿಕಾರಿಗಳು, ಶೌಚಾಲಯದಿಂದ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಹೇಳಿದರು. ವಸೂಲಿ ಮಾಡಿದ ಮೊತ್ತವು ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು, ಮತ್ತು ಅವರ ಹಣವನ್ನು ಇರಿಸಿಕೊಳ್ಳಲು ಅವರ ಫ್ಲಾಟ್ ಅನ್ನು ಬಳಸಲಾಗಿದೆ ಎಂದು ಅರ್ಪಿತಾ ಒಪ್ಪಿಕೊಂಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ. ಆ ಫ್ಲಾಟ್‌ನಲ್ಲಿ ಇಷ್ಟು ದೊಡ್ಡ ಮೊತ್ತವಿದೆ ಎಂದು ನನಗೆ ತಿಳಿದಿರಲಿಲ್ಲ ಮತ್ತು ಪಾರ್ಥ ಫ್ಲಾಟ್‌ಗೆ ಭೇಟಿ ನೀಡುತ್ತಿದ್ದರು, ಅವರಿಗೆ ಮಾತ್ರ ಅದರ ಬಗ್ಗೆ ತಿಳಿದಿತ್ತು ಎಂದು ಆಕೆ ಹೇಳಿದ್ದಾಳೆ ಎಂದು ಇ.ಡಿ ತಿಳಿಸಿದೆ.
ಈ ಹಿಂದೆ ಅರ್ಪಿತಾ ತನ್ನ ಎರಡನೇ ಫ್ಲಾಟ್‌ನಲ್ಲಿಯೂ ನಗದು ಇದೆ ಎಂದು ತಿಳಿಸಿರಲಿಲ್ಲ ಎಂದು ಇ.ಡಿ ಹೇಳಿದೆ. ಆದರೆ ಆಸ್ತಿ ವಿವರ ಪಡೆದು ಅಪಾರ್ಟ್ ಮೆಂಟ್(Apartment) ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ನಗದು ಹಾಗೂ 5 ಕೆಜಿ ಮೌಲ್ಯದ ಚಿನ್ನ ಪತ್ತೆಯಾಗಿದೆ. 27.9 ಕೋಟಿ ರೂ.ಗಳಲ್ಲಿ 2,000 ಮತ್ತು 500 ರೂ. ಮುಖಬೆಲೆಯ ನೋಟುಗಳು ಸೇರಿವೆ, 50 ಲಕ್ಷ ರೂ.ಗಳ ಕಟ್ಟುಗಳಲ್ಲಿ 2,000 ರೂ.ಗಳ ನೋಟುಗಳು ಮತ್ತು 20 ಲಕ್ಷ ರೂ. ಅಲ್ಲದೆ, 4.31 ಕೋಟಿ ಮೌಲ್ಯದ ಚಿನ್ನ ಮತ್ತು ಆಭರಣಗಳಲ್ಲಿ ತಲಾ 1 ಕೆ.ಜಿಯ 3 ಚಿನ್ನ, ತಲಾ 500 ಗ್ರಾಂನ 6 ಕಂಗನ್ (ಬಳೆಗಳು) ಮತ್ತು ಚಿನ್ನದ ಪೆನ್ ಸೇರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.