ಟೀಮ್ ಇಂಡಿಯಾದ (Team India) ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin Uthappa) ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ (Centuries Lifestyle) ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ (Private company) ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಪಿಎಫ್ ಹಣ (PF money) ಪಾವತಿಸದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ (Accusation) ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ವಾರೆಂಟ್ ಜಾರಿ (Arrest warrant issued) ಮಾಡಲಾಗಿದೆ.
ರಾಬಿನ್ ಉತ್ತಪ್ಪ (Robin Uthappa) ಒಡೆತನದ ಕಂಪೆನಿಯು ಉದ್ಯೋಗಿಗಳ ಪಿಎಫ್ ಹಣ (PF money) ಕಟ್ ಮಾಡಿದ್ದರೂ ಕೂಡ ಅವ್ರ ಖಾತೆಗೆ ಹಣ ಹಾಕದೆ 23 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಿಎಫ್ಓ ರಿಜಿನಲ್ ಕಮಿಷನರ್ (PFO Regional Commissioner) ಷಡಾಕ್ಷಿರಿ ಗೋಪಾಲ ರೆಡ್ಡಿ ಅವರು, ರಾಬಿನ್ ಉತ್ತಪ್ಪ ರನ್ನ ಬಂಧಿಸುವಂತೆ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆ ರಾಬಿನ್ ಉತ್ತಪ್ಪಗೆ (Robin Uthappa) ನೋಟಿಸ್ ನೀಡಲು ಪೊಲೀಸರು ಮನೆಗೆ ಬಂದಿದ್ದಾರೆ. ಆದ್ರೆ ರಾಬಿನ್ ಭಾರತ ತೊರೆದು ದುಬೈನಲ್ಲಿ ನೆಲೆಸಿದ್ದಾರೆ (Based in Dubai) . ಈ ಹಿನ್ನೆಲೆ ಪೊಲೀಸರು ರಾಬಿನ್ ಉತ್ತಪ್ಪಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ. ಅರೆಸ್ಟ್ ವಾರೆಂಟ್ ಜಾರಿಯಾಗಿರೋದ್ರಿಂದ ರಾಬಿನ್ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
2022ರ ಸೆಪ್ಟೆಂಬರ್ನಲ್ಲಿ ರಾಬಿನ್ ಉತ್ತಪ್ಪ ಕ್ರಿಕೆಟ್‌ಗೆ ವಿದಾಯ ಹೇಳಿ (Say goodbye to cricket) ನಿವೃತ್ತಿ ಘೋಷಿಸಿದ್ದರು. (Announced his retirement.) ಆ ಬಳಿಕ ರಾಬಿನ್ ಉತ್ತಪ್ಪ ತನ್ನ ಕುಟುಂಬದೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ (Dubai) . ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಉತ್ತಪ್ಪ ಕುಟುಂಬ ಸಮೇತರಾಗಿ ದುಬೈನಲ್ಲಿ ನೆಲೆಸಿದ್ದೇವೆ. ಬೆಂಗಳೂರು ಟ್ರಾಫಿಕ್‌ನಲ್ಲಿ ನನ್ನ ಮಕ್ಕಳು ಕಷ್ಟ ಪಡಬಾರದು ಎಂದು ಬೆಂಗಳೂರು ತೊರೆದು ಇಲ್ಲಿದ್ದೇವೆ ಎಂದು ಹೇಳಿದ್ದರು. ಇವರ ಈ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿತ್ತು.. ಈ ಮಾತನ್ನ ಕೇಳಿದ್ದ ನೆಟ್ಟಿಗರು ನಿಮಗೆಲ್ಲ ದುಡ್ಡು ಮಾಡೋದಕ್ಕೆ, ಹೆಸರು ಮಾಡೋದಕ್ಕೆ ಮಾತ್ರ ಭಾರತ ಬೇಕು, ನೆಲೆಸೋದಕ್ಕೆ ಅಲ್ವಲ್ಲಾ ಎಂದು ಕಮೆಂಟ್ ಮಾಡಿದ್ದರು.
ರಾಬಿನ್ ಉತ್ತಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗಿದೆ (Outrage is high) . ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ರಿಕೆಟಿಗ, ತಮ್ಮ ಕಾರ್ಮಿಕರಿಗೆ ವಂಚಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಕಿಡಿಕಾರಿದ್ದು, ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.