ಭಾರತ ತಂಡದಿಂದ ಅರ್ಶ್‌ದೀಪ್ ಸಿಂಗ್ (Arshdeep nominated for award) ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾದ ತಂಡದ ಎಡಗೈ ವೇಗಿ ಮಾರ್ಕೊ ಜಾನ್ಸೆನ್,
ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಮತ್ತು ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ಕೂಡ ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ಭಜನರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ (Australlia) ನಡೆದ ಪುರುಷರ 2022ರ ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಶ್‌ದೀಪ್ ಸಿಂಗ್ ಹತ್ತು ವಿಕೆಟ್‌ಗಳನ್ನು ಪಡೆದರು ಮತ್ತು ಈ ವರ್ಷ ಟಿ20 ಪಂದ್ಯಗಳಲ್ಲಿ ಭಾರತ ತಂಡಕ್ಕೇ ಹೊಸ ಭರವಸೆ ಮೂಡಿಸಿದರು.

ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಅವರ ಟಿ20 (T20) ಚೊಚ್ಚಲ ಪಂದ್ಯದ ನಂತರ, ಅರ್ಶ್‌ದೀಪ್ 21 ಪಂದ್ಯಗಳಲ್ಲಿ 18.12ರ ಸರಾಸರಿಯಲ್ಲಿ 33 ವಿಕೆಟ್‌ಗಳನ್ನು ಮತ್ತು 8.17ರ ಎಕಾನಮಿ ರೇಟ್ ಅನ್ನು ಪಡೆದಿದ್ದಾರೆ.
2022ರ ಅರ್ಶ್‌ದೀಪ್ ಸ್ಮರಣೀಯ ಪ್ರದರ್ಶನವು 90,000ಕ್ಕೂ ಹೆಚ್ಚು ಜನರ ಮುಂದೆ ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಬಂದಿತ್ತು, ಮತ್ತು ದೊಡ್ಡ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 3/32 ಅಂಕಿಅಂಶಗಳೊಂದಿಗೆ ಅರ್ಶ್‌ದೀಪ್ ಉತ್ತಮ ಪ್ರದರ್ಶನ ನೀಡಿದರು.
ಇದನ್ನೂ ಓದಿ: https://vijayatimes.com/messi-gave-special-gift/
ಮತ್ತೊಂದೆಡೆ, ಮಾರ್ಕೊ ಜಾನ್ಸೆನ್ ಕ್ಯಾಲೆಂಡರ್ ವರ್ಷದಲ್ಲಿ ದಕ್ಷಿಣ ಆಫ್ರಿಕಾದ 13.50 ಸರಾಸರಿಯಲ್ಲಿ 14 ಟೆಸ್ಟ್ ವಿಕೆಟ್‌ಗಳನ್ನು ಪಡೆದರು. ಇಂಗ್ಲೆಂಡ್ (England) ಮತ್ತು,
ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ರಮವಾಗಿ ಕೇವಲ 13.11 ಮತ್ತು 13.33 ಸರಾಸರಿಯಲ್ಲಿ ರನ್ ನೀಡಿ ಯಶಸ್ಸು ಗಳಿಸಿದರು.
ಏಕದಿನ ಪಂದ್ಯಗಳಲ್ಲಿ ಫಿನ್ ಅಲೆನ್ ನ್ಯೂಜಿಲೆಂಡ್ ತಂಡದ ಐರ್ಲೆಂಡ್ ಪ್ರವಾಸದಲ್ಲಿ, ವೆಸ್ಟ್ ಇಂಡೀಸ್ ಮತ್ತು ಭಾರತದ ವಿರುದ್ಧ ಅರ್ಧ ಶತಕಗಳನ್ನು ಗಳಿಸಿದರು.
https://vijayatimes.com/basavaraj-bommai-statement/
ಅವರು ತಮ್ಮ ಏಕದಿನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ 94.39ರ ಸ್ಟ್ರೈಕ್‌ರೇಟ್‌ನಲ್ಲಿ 38.70 ಸರಾಸರಿಯಲ್ಲಿ ರನ್ (Arshdeep nominated for award) ಹೊಂದಿದ್ದಾರೆ.