vijaya times advertisements
Visit Channel

ಮಾರುಕಟ್ಟೆಗೆ ಕೃತಕ ಮಾಂಸ ; ಪ್ರಾಣಿಗಳನ್ನು ಕೊಲ್ಲದೆ ತಯಾರಾಗ್ತಿದೆ ಬಗೆ ಬಗೆ ಮಾಂಸ!

meat

Bengaluru : ಕುರಿ, ಕೋಳಿ, ಹಸುಗಳನ್ನು ಕೊಲ್ಲದೆಯೇ ನಮ್ಮ ಮಾರುಕಟ್ಟೆಗಳಲ್ಲಿ ತರೇಹವಾರಿ ಮಾಂಸಗಳು ದೊರಕಲಿವೆ. ಅದು ಹೇಗೆ ಸಾಧ್ಯ ಅಂತೀರಾ? ಯಸ್‌ ಆರ್ಟಿಫಿಷಿಯಲ್ ಮೀಟ್ ಲ್ಯಾಬ್‌ನಿಂದ!

Food Story

ನಮ್ಮ ವಿಜ್ಞಾನ ಸಂಶೋಧನೆಗಳು(Science Research) ಎಷ್ಟು ಮುಂದುವರೆದಿದೆ ಅಂದ್ರೆ ಕೃತಕ ಮಾಂಸ ತಯಾರಿಸಿ ತಿನ್ನಿಸುವಷ್ಟು ಸಾಧನೆ ಮೆರೆದಿದೆ.

ಯಾವುದೇ ಪ್ರಾಣಿಗಳನ್ನು ಕೊಲ್ಲದೆ ಪ್ರಯೋಗಾಲಾಯಗಳಲ್ಲೇ ಮಾಂಸ ತಯಾರಿಸಲು ಪ್ರಾರಂಭಿಸಿದೆ. ಇದನ್ನು ಲ್ಯಾಬ್ ಮೀಟ್, ಕಲ್ಚರ್ಡ್ ಮೀಟ್ ಅಂತ ಕರೀತಾರೆ.

ಏನಿದು ಲ್ಯಾಬ್ ಮೀಟ್‌ ? : ಈ ಲ್ಯಾಬ್ ಮೀಟ್ ಬಗ್ಗೆ ಇಂಥಾ ಸಾಕಷ್ಟು ಪ್ರಶ್ನೆಗಳು ಹುಟ್ಟಲಾರಂಭಿಸಿವೆ. ಲ್ಯಾಬ್ ಮೀಟ್‌ ಅಥವಾ ಪ್ರಯೋಗಾಲಯದ ಮಾಂಸವನ್ನು ಯಾವುದೇ ಪ್ರಾಣಿಯನ್ನು ಕೊಂದು ತಯಾರಿಸಲಾಗುವುದಿಲ್ಲ.

ಬದಲಾಗಿ ಪ್ರಾಣಿಗಳ ಕಾಂಡ ಕೋಶಗಳನ್ನು ತೆಗೆದುಕೊಂಡು ಕೃತಕವಾಗಿ ಮಾಂಸವನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/namma-metro-bengaluru/

ಈ ಮಾಂಸ ತಯಾರಿಕೆ ಮೊದಲು ಪ್ರಾಣಿಯ ಕಾಂಡಕೋಶವವನ್ನು ಹೊರತೆಗೆಯಲಾಗುತ್ತದೆ. ಆನಂತರ ಅದಕ್ಕೆ ನ್ಯೂಟ್ರಿಯಂಟ್ಸ್ ,ಅಮಿನೋ ಆಸಿಡ್, ಫೀಟಲ್ ಬೋವಿನ್ ಸೀರಂ ಮುಂತಾದ ಕೆಮಿಕಲ್ ಗಳನ್ನು ಹಾಕಿ ಅವನ್ನು ಬಯೊರಿಯಾಕ್ಟರ್ ನಲ್ಲಿ ಇಡಲಾಗುತ್ತದೆ.

ಆನಂತರ 1 ಜೀವಕೋಶಗಳು ಸಾವಿರ ಜೀವಕೋಶಗಳಾಗಿ ಬದಲಾಗಿ ಮಾಂಸ ಉತ್ಪಾದನೆಯಾಗುತ್ತೆ.

ಆರ್ಟಿಫಿಷಿಯಲ್ ಮಾಂಸದ ಹಿನ್ನಲೆ ? : 2013 ಮ್ಯಾಸ್ಟ್ರಿಚ್ ವಿಶ್ವವಿದ್ಯಾನಿಲಯದಲ್ಲಿ ಮೊದಲ ಆರ್ಟಿಫಿಶಿಯಲ್ ಮಾಂಸದ ಬೀಫ್ ಬರ್ಗರ್ ತಯಾರಿಸಲಾಯಿತು. ಇದನ್ನು 20,000 ಕ್ಕೂ ಹೆಚ್ಚು ತೆಳುವಾದ ಸ್ನಾಯು ಅಂಗದಿಂದ ತಯಾರಿಸಲಾಗಿತ್ತು.

ಆನಂತರ ಇದನ್ನು 5 ಆಗಸ್ಟ್ 2013 ರಂದು ಲಂಡನ್ನಿನಲ್ಲಿ ದೂರದರ್ಶನದಲ್ಲಿ ಜನರಿಗೆ ಪರಿಚಯಿಸಲಾಯಿತು.

Lab Meat

ಈ ಕೃತಕ ಮಾಂಸ ನೈಸರ್ಗಿಕ ಮಾಂಸದಷ್ಟೇ ರುಚಿಕರವಾಗಿರುತ್ತಾ? ಈ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಈ ಲ್ಯಾಬ್ ಮಾಂಸ ನಮ್ಮ ದಿನನಿತ್ಯದ ಮಾಂಸದಂತೆ ರುಚಿ ಮತ್ತು ನ್ಯೂಟ್ರಿಷನ್ ಅಂಶಗಳನ್ನು ಹೊಂದಿರುತ್ತೆ.

ಅಲ್ಲದೆ ಈ ಕೃತಕ ಮಾಂಸದಲ್ಲಿ ಯಾವುದೇ ಕೊಬ್ಬಿನಾಂಶ ಇರುವುದಿಲ್ಲ.ಇದು ದೇಹಕ್ಕೆ ಬಹಳ ಒಳ್ಳೆಯದು ಎನ್ನುತ್ತಾರೆ ಸಂಶೋಧಕರು.

ಆರ್ಟಿಫಿಷಿಯಲ್ ಮಾಂಸದ ಬೆಲೆ ಎಷ್ಟು? : ಕೃತಕ ಮಾಂಸವನ್ನು ಪ್ರಾಣಿಗಳ ಕೋಶಗಳನ್ನು ಬಳಸಿ ತಯಾರಿಸಲಾಗುತ್ತೆ. ಇದರಿಂದ ಇದು ಬಹಳ ದುಬಾರಿ. 1ಕೆಜಿಗೆ ಬರೋಬ್ಬರಿ 2000 ರೂಪಾಯಿ.

ಮೊದಲು ತಯಾರಿಸಿದ ಆರ್ಟಿಫಿಷಿಯಲ್ ಮಾಂಸದ ಹ್ಯಾಮ್ ಬರ್ಗರ್ $25 ಮಾರಾಟ ಆಗಿರುವ ದಾಖಲೆಯಿದೆ.

ಇದನ್ನೂ ಓದಿ : https://vijayatimes.com/its-not-kantara/

ಲ್ಯಾಬ್ ಮಾಂಸ ಯಾಕೆ ಉತ್ಪಾದಿಸಿದ್ರು? : ನಮ್ಮ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗ ನಮ್ಮ ವಿಶ್ವದ ಜನಸಂಖ್ಯೆ 7.3 ಬಿಲಿಯನ್.

ಇನ್ನೂ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಇದರಿಂದ ಆಹಾರದ ಕೊರತೆಯೂ ಕೂಡ ನಮಗೆ ಕಾಡಬಹುದು.

ಈಗ ಬೆಳೆಯುತ್ತಿರುವ ಕ್ಕಿಂತ 50%ಗೂ ಹೆಚ್ಚು ಆಹಾರವನ್ನು ನಾವು ಉತ್ಪಾದಿಸಬೇಕಾಗುತ್ತೆ. ಈ ಆಹಾರದ ಕೊರತೆಯನ್ನು ನೀಗಿಸಲು ಕೃತಕ ಮಾಂಸ ತಯಾರಿಸಲಾಗಿದೆ.

ಅಷ್ಟೇ ಅಲ್ಲದೆ ಪ್ರತಿನಿತ್ಯ ಜನರ ಮಾಂಸದ ಬೇಡಿಕೆಗಾಗಿ 70 ಬಿಲಿಯನ್ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಈಗ ಈ ಪ್ರಯೋಗ ಮಾಡಲಾಗಿದೆ.

https://youtu.be/HmN6BjXEDyg

ಈ ಕೃತಕ ಮಾಂಸವನ್ನು ಸಿಂಗಾಪುರದ ಸರ್ಕಾರ ಒಪ್ಪಿಕೊಂಡಿದ್ದಲ್ಲದೆ ಮಾರುಕಟ್ಟೆಗೂ ಬಿಡುಗಡೆ ಮಾಡಿದೆ. ಲ್ಯಾಬ್ ಮೀಟ್‌ಗೆ ಅನುಮತಿ ಕೊಟ್ಟ ವಿಶ್ವದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಅಲ್ಲಿನ ಜನರು ಈ ಮಾಂಸವನ್ನು ಒಪ್ಪಿಕೊಂಡು ಅದನ್ನು ಶುದ್ಧ ಮಾಂಸ ಎಂದು ಕರೆದಿದ್ದಾರೆ.

https://youtu.be/2uFll2Xlcoc COVER STORY | ಭರ್ಜರಿ ಆಯಿಲ್ ಮಾಫಿಯಾ !

ಭಾರತಕ್ಕೆ ಯಾವಾಗ ಬರುತ್ತೆ ಲ್ಯಾಬ್ ಮೀಟ್‌? : ಲ್ಯಾಬ್ ನಲ್ಲಿ ಬೆಳೆದ ಕ್ಲೀನ್ ಮೀಟ್ 2025 ದರ ಒಳಗೆ ಭಾರತದಲ್ಲಿ ಲಭ್ಯವಾಗಲಿದೆ ಅನ್ನೋ ಲೆಕ್ಕಾಚಾರ ಇದೆ.

ಆದ್ರೆ ಈ ಮಾಂಸ ಸುರಕ್ಷಿತವಾ? ಇದನ್ನು ತಿಂದ್ರೆ ಕಾಯಿಲೆ ಗೀಯಿಲೆ ಬರುತ್ತಾ ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ. ಲ್ಯಾಬ್ ನಲ್ಲಿ ತಯಾರಿಸಲಾಗುವ ಮಾಂಸದಲ್ಲಿ ನಾವು ಪ್ರತಿನಿತ್ಯ ತಿನ್ನುವ ಮಾಂಸದ ಹಾಗೆ ಬ್ಯಾಕ್ಟೀರಿಯಾ ಇರುವುದಿಲ್ಲ.

https://youtu.be/LCKhdJWdt_0 ೪ ವರ್ಷಗಳಿಂದ ಅಭಿವೃದ್ಧಿ ಕಾಣದ ಬೆಂಗಳೂರಿಗೆ ಚುನಾವಣೆಯಿಂದ ಅಭಿವೃದ್ಧಿ ಭಾಗ್ಯ!

ಹಾಗಂತ ಈ ಆಹಾರ 100% ಸುರಕ್ಷಿತ, ಇದು ಯಾವ ರೀತಿ ನಮ್ಮ ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುತ್ತೆ ಅನ್ನೋದನ್ನು ಸಂಶೋಧಕರು ಕೂಡ ಇನ್ನೂ ಸಂಶೋಧನೆ ಮಾಡುತ್ತಿದ್ದಾರೆ.

ಇದರಿಂದ ಇದು ಸುರಕ್ಷಿತವಾ ಇಲ್ವಾ ಅನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.

  • ಪ್ರೀತು ಮಹೇಂದರ್

Latest News

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,