- ಅಮೆರಿಕದ ರೈತರು ಶ್ರೀಮಂತರು, ಭಾರತೀಯರು ಬಡವರು: ಕೇಂದ್ರದ ನೀತಿಗೆ ಕೇಜ್ರಿವಾಲ್ ಆರೋಪ
- ಹತ್ತಿ ಸುಂಕ ವಿನಾಯಿತಿಯ ವಿರುದ್ಧ ಆಕ್ರೋಶ
- ಧೈರ್ಯ ತೋರಿಸಿದರೆ ದೇಶ ಬೆಂಬಲಿಸುತ್ತದೆ ಎಂದು ಮೋದಿಗೆ ಕೇಜ್ರಿವಾಲ್ ಸಂದೇಶ
Rajkot: ಅಮೆರಿಕ ಭಾರತದಿಂದ ರಫ್ತು ಮಾಡುವ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕ ವಿಧಿಸಿರುವ ಸಂದರ್ಭದಲ್ಲಿ, ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal), ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi) ಉದ್ದೇಶಿಸಿ ಕಿಡಿಕಾರಿದ್ದಾರೆ. (arvind kejriwal challenge Modi)
“ಸ್ವಲ್ಪ ಧೈರ್ಯ ವಿದ್ದರೆ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 75ರಷ್ಟು ಸುಂಕ ವಿಧಿಸಿ” ಎಂದು ಅವರು ಸವಾಲು ಹಾಕಿದ್ದಾರೆ.

ಭಾರತ ಸರ್ಕಾರ ಈ ವರ್ಷ ಡಿಸೆಂಬರ್ 31ರವರೆಗೆ ಅಮೆರಿಕ ಸೇರಿದಂತೆ ಹಲವು ದೇಶಗಳಿಂದ ಕಚ್ಚಾ ಹತ್ತಿ ಆಮದು ಮಾಡುವುದಕ್ಕೆ ಶೇಕಡಾ 11ರಷ್ಟು ಸುಂಕ ವಿನಾಯಿತಿ ನೀಡಿದೆ.
ಕೇಂದ್ರದ ಪ್ರಕಾರ, ಈ ನಿರ್ಧಾರವು ಜವಳಿ ಉದ್ಯಮಕ್ಕೆ ಬೇಕಾಗುವ ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ರಫ್ತು ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವುದು ಆಗಿರುತ್ತದೆ ಆದರೆ ಈ ಕುರಿತು. ಅಭಿಪ್ರಾಯ ಕೇಜ್ರಿವಾಲ್ ಅವರ ಅಭಿಪ್ರಾಯದಲ್ಲಿ, ಈ ಕ್ರಮವು ಭಾರತೀಯ ಹತ್ತಿ ಬೆಳೆಗಾರರ ಹಿತಾಸಕ್ತಿಗೆ ವಿರುದ್ಧವಾಗಿದೆ.
ಅಲ್ಲದೆ ಈ ನೀತಿ ಇದು ಅಮೆರಿಕದ ರೈತರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ. ಆದರೆ ಗುಜರಾತ್ ಮತ್ತು ಭಾರತದ ಇತರ ಭಾಗಗಳ ಹತ್ತಿ ಬೆಳೆಗಾರರು ಬಡವರಾಗುತ್ತಿದ್ದಾರೆ.
ಪ್ರಧಾನಿ ಮೋದಿ ಅಮೆರಿಕದ ಮುಂದೆ ಬಾಗಿದ್ದಾರೆ, ದೇಶೀಯ ರೈತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.(arvind kejriwal challenge Modi)
ಇನ್ನು ಕೇಜ್ರಿವಾಲ್ ಅವರು ಹತ್ತಿಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿ ಪಡಿಸಲು, 20 ಕೆ.ಜಿ. ಹತ್ತಿಗೆ ₹2,100ರ ಬೆಲೆಯಲ್ಲಿ ಖರೀದಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜೊತೆಗೆ ರಸಗೊಬ್ಬರ, ಬೀಜ ಹಾಗೂ ಕೃಷಿ ಇನ್ಪುಟ್‌ಗಳ (Inputs) ಮೇಲೂ ಹೆಚ್ಚುವರಿ ಸಬ್ಸಿಡಿ ನೀಡಬೇಕು ಎಂದು ಹೇಳಿದರು.ಅಮೆರಿಕದ ಹತ್ತಿ ಆಮದುಗಳಿಗೆ ಶೇಕಡಾ 11 ಸುಂಕ ವಿಧಿಸಬೇಕು.
ರೈತರಿಗೆ ಖಚಿತ ಬೆಲೆ, ಸಹಾಯಧನ ಹಾಗೂ ಸೂಕ್ತ ಬೆಂಬಲ ನೀಡಿದರೆ ಮಾತ್ರ ಕೃಷಿ ಕ್ಷೇತ್ರ ಬಲಪಡುತ್ತದೆ. ಇಲ್ಲದಿದ್ದರೆ ಹತ್ತಿ ಬೆಳೆಗಾರರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇತರ ದೇಶಗಳ ಮೇಲೂ ಸುಂಕಗಳನ್ನು ವಿಧಿಸಿದ ಸಂದರ್ಭದಲ್ಲಿ, ಅನೇಕ ರಾಷ್ಟ್ರಗಳು ತೀವ್ರ ಪ್ರತಿಕ್ರಿಯೆ ನೀಡಿದವು.
ಪರಿಣಾಮವಾಗಿ ಟ್ರಂಪ್ ತನ್ನ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ಆದರೆ ಭಾರತ ಮಾತ್ರ ಪ್ರತಿಕ್ರಿಯಿಸದೆ ಸುಮ್ಮನಿತ್ತು ಎಂದು ಕೇಜ್ರಿವಾಲ್ ಟೀಕಿಸಿದರು.
ಅವರು (ಟ್ರಂಪ್) ಶೇ.50 ಸುಂಕ ವಿಧಿಸಿದಾಗ, ಮೋದಿಜಿ ಪ್ರತಿಕ್ರಿಯೆ ನೀಡದೆ ಹತ್ತಿ ಆಮದು ಸುಂಕವನ್ನು ಶೇ.11ರಷ್ಟು ಕಡಿಮೆ ಮಾಡಿದರು.
ಇದು ದೇಶದ ಗೌರವಕ್ಕೆ ಧಕ್ಕೆ ತಂದಂತಹ ನಿರ್ಧಾರ. ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆ, ಇಲ್ಲಿ 140 ಕೋಟಿ ಜನರು ಮೋದಿಯ ಹಿಂದೆ ನಿಂತಿದ್ದಾರೆ.
ಇಂತಹ ಸಮಯದಲ್ಲಿ ನೀವು ಧೈರ್ಯ ತೋರಬೇಕಿತ್ತು ಎಂದು ಕೇಜ್ರಿವಾಲ್ ಮೋದಿಗೆ ಸಲಹೆ ನೀಡಿದ್ದಾರೆ.
ಟ್ರಂಪ್ ವಿರುದ್ಧ ಕಿಡಿ ಕಾರಿದ ಕೇಜ್ರಿವಾಲ್ ಅವರು ಟ್ರಂಪ್ ಒಬ್ಬ ಹೇಡಿ, ಅಂಜುಬುರುಕ ವ್ಯಕ್ತಿ.
ಅವರಿಗೆ ಎದುರಾಗಿ ನಿಂತ ದೇಶಗಳು ಅವರಿಗೆ ಹೆದರಿ ತಲೆಬಾಗಬೇಕಾಯಿತು. ಆದರೆ ಭಾರತ ಹಾಗಲ್ಲ ಎಂದು ತೋರಿಸಲಾದರೂ ಧೈರ್ಯ ತೋರಬೇಕಿತ್ತು.
ಅಮೆರಿಕದಿಂದ ಬರುವ ವಸ್ತುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿದರೆ ಟ್ರಂಪ್ ಬಗ್ಗಲೇಬೇಕಾಗುತ್ತಿತ್ತು. ಅಮೆರಿಕದ ನಾಲ್ಕು ದೊಡ್ಡ ಕಂಪನಿಗಳು ಮುಚ್ಚಿಹೋದರೆ, ಅವರು ತೊಂದರೆಯಲ್ಲಿ ಸಿಲುಕುತ್ತಿದ್ದರು ಎಂದು ಹೇಳಿದರು.
ಇನ್ನು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಹತ್ತಿ ಆಮದು ಸುಂಕ ವಿನಾಯಿತಿ ರಫ್ತು ಆಧಾರಿತ ಘಟಕಗಳಿಗೆ ಆರ್ಡರ್‌ಗಳನ್ನು ತರುವುದಕ್ಕೆ ಸಹಾಯಮಾಡುತ್ತದೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಲ ನೀಡುತ್ತದೆ ಎಂದು ಕೇಂದ್ರ ಹೇಳಿದೆ.
ಅಮೆರಿಕ ಭಾರತಕ್ಕೆ ಅತಿದೊಡ್ಡ ಜವಳಿ ಮತ್ತು ಉಡುಪು ರಫ್ತು ಮಾರುಕಟ್ಟೆಯಾಗಿರುವುದರಿಂದ, ಈ ನಿರ್ಧಾರವು ತಾತ್ಕಾಲಿಕವಾಗಿ ಉದ್ಯಮದ ಪರವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.