ಮುಂಬೈ ಅ 4 : ಶಾರುಖ್ ಖಾನ್ ಮಗ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದಿರುವ ಹಿನ್ನಲೆಯಲ್ಲಿ ಶಾರುಖ್ ಖಾನ್ ಪರ ಮತ್ತಿ ವಿರೋಧಗಳು ವ್ಯೆಕ್ತವಾಗುತ್ತಿದೆ.
ಶಾರುಖ್ ಖಾನ್ಗೆ ಬೆಂಬಲ ನೀಡುತ್ತಿರುವವರೆಲ್ಲ ಅವರ ಅಪ್ಪಟ ಅಭಿಮಾನಿಗಳು. ಅವರೆಲ್ಲ ತಮ್ಮದೇ ಮೊಂಡುವಾದವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ‘ಶಾರುಖ್ ಖಾನ್ರನ್ನು ಮಣಿಸಲು ಆಗದವರು ಈಗ ಅವರ ಮಕ್ಕಳ ಮೂಲಕ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ನೋಡುತ್ತಿದ್ದಾರೆ. ಏನೇ ಆದರೂ ನಾವು ಶಾರುಖ್ ಪರ ನಿಲ್ಲುತ್ತೇವೆ’ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ನೆಟ್ಟಿಗರು ಅಕ್ಷಯ್ ಕುಮಾರ್ ತನ್ನ ಮಗನಿಗೆ ಅಡುಗೆ ಕಲಿಸುವ, ದೇವರ ಪೂಜೆ ಹೇಳಿಕೊಡುತ್ತಿರುವ ದೃಶ್ಯಗಳೊಂದಿಗೆ ಶಾರುಖ್ ಖಾನ್ ಗೆ ನಿಮ್ಮ ಮಗನ ಇಂದಿನ ಈ ದುಸ್ಥಿತಿಗೆ ನೀವೇ ಕಾರಣ’ ಅಂತೇಳಿ ಶಾರುಖ್ ಖಾನ್ ಅವರ ಹಳೆಯ ವಿಡಿಯೋ ಒಂದನ್ನು ವೈರಲ್ ಮಾಡುತ್ತಿದ್ದಾರೆ. ಜೊತೆಗೆ ಮತ್ತೊಬ್ಬ ನಟ ಮಾಧವನ್ ಅವರು ತಮ್ಮ ಮಗನಿಗೆ ಕಲಿಸಿ ಕೊಡುತ್ತಿರುವ ಸಂಸ್ಕಾರದ ಫೋಟೋ ಜೊತೆ ಶಾರುಖ್ ಮತ್ತು ಅವನ ಮಗನ ಜೊತೆಗಿನ ಫೋಟೋಗಳೊಂದಿಗೆ ಸಂಸ್ಕಾರ ಕಲಿಸಿದರೆ ಮಗ ಏನಾಗುತ್ತಾನೆ? ಕಲಿಸದೆ ಹೋದರೆ ಏನಾಗುತ್ತಾನೆ? ಎಂದು ಟಾಂಗ್ ನೀಡುತ್ತಿದ್ದಾರೆ.
ಆರ್ಯನ್‌ಗೆ ನಿರ್ದೇಶಕನಾಗುವ ಆಸೆ : ಆರ್ಯನ್‌ಗೆ ನಿರ್ದೇಶಕನಾಗುವ ಆಸೆಯಿದೆ ಎಂದು ಸ್ವತಃ ಶಾರುಖ್ ಒಂದು ಸಂದರ್ಶನಲ್ಲಿ ಹೇಳಿದ್ದರು. ಲಂಡನ್ನ ‘ಸೆವೆನ್ ಓಕ್ಸ್ ಹೈಸ್ಕೂಲ್’ನಲ್ಲಿ ಆರ್ಯನ್ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್ ಆರ್ಟ್ಸ್, ಸಿನಿಮ್ಯಾಟಿಕ್ ಆರ್ಟ್ಸ್, ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ ಎಂದು ಶಾರುಖ್ ತಿಳಿಸಿದ್ದರು