ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಹಿತ ಅನೇಕ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ. ಇದಕ್ಕೆ ಇವಿಎಂ ಅನ್ನು ದೂಷಿಸುವ ಮೂಲಕ ಸೋಲನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ.
ಆದರೆ ನಾವೆಲ್ಲಾ ಬಿಜೆಪಿ ಎದುರು ಸೋತಿರುವುದು ಇವಿಎಂ ಸಮಸ್ಯೆಯಿಂದಲ್ಲ, ಬದಲಾಗಿ ಮತದಾರರ ತಲೆಯಲ್ಲಿರುವ ಚಿಪ್ಪಿನ ಸಮಸ್ಯೆಯಿಂದ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin owaisi) ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಉತ್ತರಪ್ರದೇಶ ಸಹಿತ ದೇಶದಲ್ಲಿ ಎಲ್ಲ ರಾಜ್ಯಗಳಲ್ಲೂ ಅಲ್ಪಸಂಖ್ಯಾತರನ್ನು ಕೇವಲ ವೋಟ್‍ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಲಖಿಂಪುರ್‍ಖೇರಿಯಲ್ಲೂ ಈ ಬಾರಿ ಬಿಜೆಪಿ ಗೆದ್ದಿದೆ. ಹೀಗಾಗಿಯೇ ಈ ಗೆಲುವನ್ನು ನಾನು 80-20 ಗೆಲುವು ಎಂದು ಹೇಳುತ್ತಿದ್ದೇನೆ. ಇನ್ನು ಮುಂದೆ ಚುನಾವಣೆ 80-20 ನಡುವೆಯೇ ನಡೆಯಲಿದೆ. ಅನೇಕ ವರ್ಷಗಳವರೆಗೆ ಪರಿಸ್ಥಿತಿ ಹೀಗೆ ಇರಲಿದೆ. ಇದು ನಮ್ಮ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಮತದಾರರು ಈ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕೆಂದು ಅಸಾದುದ್ದೀನ್ ಓವೈಸಿ ಹೇಳಿದರು.
ಇನ್ನು ಉತ್ತರಪ್ರದೇಶದಲ್ಲಿ ಮತದಾರರು ಸ್ಪಷ್ಟ ಫಲಿತಾಂಶ ನೀಡಿದ್ದಾರೆ. ಮತದಾರರು ಬಿಜೆಪಿಗೆ ಮತ್ತೇ ಅಧಿಕಾರ ನೀಡಲು ನಿರ್ಧರಿಸಿದ್ದಾರೆ. ಮತದಾರರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷ ಸಾಕಷ್ಟು ಶ್ರಮಿಸಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಸೇರಿದಂತೆ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ. ನಾವು ಮತ್ತೆ ಕಷ್ಟಪಟ್ಟು ಕೆಲಸ ಮಾಡುತ್ತೇನೆ, ಮತದಾರರ ಮನಗೆಲ್ಲಲು ಶ್ರಮಿಸುತ್ತೇವೆ ಎಂದರು.

ಇನ್ನು ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಕುರಿತು ಮಾತನಾಡುವ ಮೂಲಕ ಅವರನ್ನು ನಾನ್ಯಾಕೆ ಗೌರವಿಸಲಿ. ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡಲು ಏನು ಉಳಿದಿಲ್ಲ ಎಂದು ಲೇವಡಿ ಮಾಡಿದರು. ಅದೇ ರೀತಿ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷದ ಸೋಲಿನ ವಿಶ್ಲೇಷಣೆ ಮಾಡಿದ ಅಸಾದುದ್ದೀನ್ ಓವೈಸಿ, ಬಿಎಸ್ಪಿ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ.