Visit Channel

ತಮ್ಮ 25ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರ್ತಿ!

ashleigh barty

ಇವರ ಆಟ ನೋಡಿದ್ರೆ ನೋಡ್ತಾನೆ ಇರಬೇಕು ಅಂತ ಅನ್ಸುತ್ತೆ, ಇವರ ಆಟದ ಪರಿ ಇಂದ ಅತೀ ಚಿಕ್ಕ ವಯಸ್ಸಿನಲ್ಲಿ ವಿಶ್ವದ ಗಮನ ಸೆಳೆದ ಆಟಗಾರ್ತಿ.

ಇವರ ಆಟದ ಪರಿಯಿಂದ ಅತಿ ಚಿಕ್ಕ ವಯಸ್ಸಿನಲ್ಲೇ ವಿಶ್ವದ ಗಮನ ಸೆಳೆದ ಮಹಾನ್ ಆಟಗಾರ್ತಿ. ಇವರು ಮೈದಾನಕ್ಕೆ ಬಂದ್ರೆ ಸಾಕು ಎಲ್ಲೆಡೆ ಚಪ್ಪಾಳೆ ಕೂಗು ಹೆಚ್ಚಾಗುತ್ತದೆ.

ಅಷ್ಟೇ ಅಲ್ಲ ಇವರ ಆಟದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ . ಆದ್ರೆ ಇವರು ಇಷ್ಟು ಚಿಕ್ಕ ವಯಸ್ಸಲ್ಲೇ ನಿವೃತ್ತಿ ಯಾಕೆ ಪಡೆದ್ರು? ಅದಕ್ಕೆ ಕಾರಣ ಆದ್ರೂ ಏನು? ಈ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಹುಡುಕೋಣ ಬನ್ನಿ…

ashleigh barty

ಇನ್ಸ್ಟಾಗ್ರಾಂ(Instagram) ಖಾತೆಯಲ್ಲಿ ವಿಡಿಯೋವನ್ನ ಹಂಚಿಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿರಾಮವನ್ನು ಇಟ್ಟಿದ್ದಾರೆ. ಸಾಧನೆಗಳ ಉತ್ತುಂಗದಲ್ಲಿ ರಾರಾಜಿಸುತ್ತಿರುವಾಗ ಈ ಹಠಾತ್ ನಿರ್ಧಾರ ಎಲ್ಲರನ್ನೂ ದಿಗ್ಬ್ರಾಂತಿಗೊಳಿಸಿದೆ. ಅಭಿಮಾನಿಗಳನ್ನ ಬೇಸರ ಗೊಳಿಸಿದೆ. “ಈ ಸುಂದರವಾದ ಟೆನಿಸ್ ಕ್ರೀಡೆಗೆ ನಾನು ಸಂಪೂರ್ಣವಾಗಿ ಎಲ್ಲವನ್ನೂ ನೀಡಿದ್ದೇನೆ ಮತ್ತು ನಾನು ಅದರಲ್ಲಿ ನಿಜವಾಗಿಯೂ ಸಂತೋಷವಾಗಿದ್ದೇನೆ. ನನಗೆ, ಅದು ನನ್ನ ಯಶಸ್ಸು, ”ಎಂದು ಹೇಳಿ ನಿವೃತ್ತಿ ಘೋಷಿಸಿದ್ದಾರೆ.

ಅತಿ ಚಿಕ್ಕ ವಯಸ್ಸಿಗೇ ಯಶಸ್ಸು ಕಂಡ ಆಶ್ಲೀಗ್ ಬಾರ್ಟಿ: ಆಶ್ಲೀಗ್ ಬಾರ್ಟಿ(Ashleigh Barty) ತನ್ನ ಟೆನ್ನಿಸ್ ವೃತ್ತಿಜೀವನವನ್ನ 2010ರಲ್ಲಿ ಪ್ರಾರಂಭಿಸಿ 15 ಸಿಂಗಲ್ಸ್ ಮತ್ತು 12 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಲ್ಪಾವಧಿಯಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಅನ್ನೋ ಗೌರವವನ್ನು ಸಂಪಾದಿಸಿದ್ದಾರೆ. ಮೂರು ಗ್ರ್ಯಾಂಡ್ ಸ್ಲ್ಯಾಮ್ ಗಳನ್ನು ಗೆದ್ದಿದ್ದು, ಆಸ್ಟ್ರೇಲಿಯನ್ ಓಪನ್ನಲ್ಲಿ ಆಶ್ಲೀಗ್ ಬಾರ್ಟಿ ತನ್ನದೇ ದೇಶದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು 44 ವರ್ಷಗಳ ಬಳಿಕ ಗೆದ್ದುಕೊಂಡ ಮೊದಲ ಆಸ್ಟ್ರೇಲಿಯನ್ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. 121 ವಾರಗಳ ಕಾಲ ಡಬ್ಲುಟಿಎ ರಾಂಕಿಂಗ್ ನಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿ ಉಳಿದುಕೊಂಡಿದ್ದರು.

tennis player
ವಿಶ್ವದ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವಾಗ ನಿವೃತ್ತಿ ಹೊಂದಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ ಆಶ್ಲೀಗ್ ಬಾರ್ಟಿ. ವಿಶ್ವದ ಶ್ರೇಯಾಂಕಿತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ನಿವೃತ್ತಿ ಘೋಷಿಸಿದ ಮೊದಲ ಆಟಗಾರ ಯಾರು ಆ ಚಿಕ್ಕ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಕಾರಣವಾದರೂ ಏನು? ಜಸ್ಟಿನ್ ಹೆನಿನ್ ಅವರು ಮೇ 2008 ರಲ್ಲಿ ನಿವೃತ್ತರಾದರು, ಅವರು 61 ವಾರಗಳ ನಂತರ ನಂ.1 ಸ್ಥಾನದಲ್ಲಿದ್ದಾರೆ. ಹೆನಿನ್ ಎರಡು ವರ್ಷಗಳ ನಂತರ ಮತ್ತೆ ಆಟವಾಡಲು ಮರಳಿದರು. 
ಅಷ್ಟೆ ಅಲ್ಲ ಕಿಮ್ ಕ್ಲಿಸ್ಟರ್ಸ್ 2007 ರಲ್ಲಿ 23 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ನಿವೃತ್ತರಾದರು ಮತ್ತು ನಂ.4 ರ ರ್ಯಾಂಕ್ ಪಡೆದರು. ಎರಡು ವರ್ಷಗಳ ನಂತರ ಹಿಂತಿರುಗಿದರು, US ಓಪನ್ ಪ್ರಶಸ್ತಿಗಳನ್ನು ಬ್ಯಾಕ್-ಟು-ಬ್ಯಾಕ್ ಗೆದ್ದರು, ನಂತರ 2012-20 ರಿಂದ ಎರಡನೇ ಬಾರಿಗೆ ನಿವೃತ್ತರಾದರು. ಕ್ಲಿಸ್ಟರ್ಸ್ ಪ್ರಸ್ತುತ ಸಕ್ರಿಯ ಆಟಗಾರರಾಗಿದ್ದಾರೆ. ಹನ್ನೊಂದು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಜೋರ್ನ್ ಬೋರ್ಗ್ 1983 ರಲ್ಲಿ 26 ನೇ ವಯಸ್ಸಿನಲ್ಲಿ ನಿವೃತ್ತರಾದರು, ನಂತರ 1991-93 ರಿಂದ ಆಡಲು ಹಿಂತಿರುಗಿದರು.
ashleigh barty
ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಏನಾದರೂ ಅತ್ಯುತ್ತಮ ಆಟಗಾರರು ನಿವೃತ್ತಿ ಘೋಷಿಸಿರಬಹುದು. ಮಾನಸಿಕ ಒತ್ತಡ, ದೈಹಿಕ ಸಮಸ್ಯೆ ಅನ್ನೊ ಕಾರಣ ಕೂಡ ಇರಬಹುದು. ಅವರ ಆಟದಲ್ಲಿ ತೃಪ್ತಿಯನ್ನ ಹೊಂದಿದ್ದು ಅವರ ವೈಯಕ್ತಿಕ ಬದಕನ್ನ ಮತ್ತಷ್ಟು ಕಲರ್‍ಫುಲ್ ಆಗಿ ಕಳೆಯಲು ಸಹ ಇರಬಹುದು. ಒಟ್ಟಿನಲ್ಲಿ ಏನೇ ಇರಲಿ ಇಂತಹಾ ಪ್ರತೀಭಾವಂತ ಆಟಗಾರರು ಆಟ ನಿಲ್ಲಿಸಿರುವುದು ಮಾತ್ರ ಕ್ರೀಡಾಭಿಮಾನಿಗಳಿಗೆ ಅತ್ಯಂತ ನೋವಿನ ಸಂಗತಿ ಎಂದೇ ಹೇಳಬಹುದು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.