ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅವರು ಅಭಿನಯದ ಜೇಮ್ಸ್(James) ಸಿನಿಮಾ(Cinema) ಇದೇ ಮಾರ್ಚ್ 17 ರಂದು ದೇಶಾದ್ಯಂತ ಯಶಸ್ವಿಯಾಗಿ ಬಿಡುಡೆಯಾಗುವುದರ ಜೊತೆಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ ರಾಜ್ಯಾದ್ಯಂತ ಕನ್ನಡಿಗರ(Kannadigas) ಮನ ಗೆದ್ದಿರುವ ಪವರ್ ಸ್ಟಾರ್ ಜೇಮ್ಸ್ ಸಿನಿಮಾವನ್ನು ತೆಗೆದು ಹಿಂದಿ(Hindi) ಭಾಷೆಯ(Language) `ದ ಕಾಶ್ಮೀರ್ ಫೈಲ್ಸ್’(The Kashmir Files) ಸಿನಿಮಾವನ್ನು ಹಾಕಿ ಎಂಬ ಅನಾಮಿಕರ ಕೂಗು ಕೇಳಿಂದಿದೆ!

ಈ ಒಂದು ವಿಚಾರ ಕನ್ನಡಿಗರ ಕಿವಿಗೆ ತಲುಪಿದ ಕ್ಷಣವೇ ಕನ್ನಡಿಗರು, ಪವರ್ ಸ್ಟಾರ್ ಅಭಿಮಾನಿಗಳು ಸಿಡಿದೆದ್ದು, ಕೆಂಡಮಂಡಲವಾಗಿದ್ದಾರೆ. ಹೌದು, ಕರ್ನಾಟಕ ರತ್ನ(Karnataka Ratna), ಕನ್ನಡಿಗರ ಆರಾಧ್ಯದೈವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಸಿನಿಮಾ ಒಂದೆಡೆಯಾದರೆ, ಮತ್ತೊಂದೆಡೆ ಒಂದೊಳ್ಳೆ ಕನ್ನಡ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಅಂಕಿ ಅಂಶಗಳನ್ನು ತಿಳಿದು ಕೂಡ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಜೇಮ್ಸ್ ಸಿನಿಮಾ ತೆಗೆದು, ದ ಕಾಶ್ಮೀರ್ ಫೈಲ್ಸ್ ಸಿನಿಮಾ ಹಾಕಿ ಎಂದು ಕೆಲ ಥಿಯೇಟರ್ ಮಾಲೀಕರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷವನ್ನು ಸಿಲುಕಿಸಲು ಈ ಒಂದು ರಾಜಕೀಯ ಕುತಂತ್ರ ಮಾಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ್ ಅವರು ಗುಡುಗಿದ್ದಾರೆ. ಹೌದು, ನಮ್ಮ ಅಚ್ಚುಮೆಚ್ಚಿನ ನಟ ಡಾ. ಪುನೀತ್ ರಾಜ್‍ಕುಮಾರ್ ಅವರು ಅಭಿನಯುದ ಜೇಮ್ಸ್ ಚಲನಚಿತ್ರವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಹಣೆದ ಸುಳ್ಳನ್ನು ಯಾರೊಬ್ಬರೂ ನಂಬುವುದಿಲ್ಲ. ಜೇಮ್ಸ್ ಚಲನಚಿತ್ರ ಪ್ರದರ್ಶನಕ್ಕೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆಂಬುದು ಕಾಂಗ್ರೆಸ್ಸಿಗರು ಸೃಷ್ಟಿಸಿದ ಸುಳ್ಳು ವದಂತಿ ಅಷ್ಟೇ ಎಂದು ಹೇಳಿದ್ದಾರೆ.