ಡಿಕೆ ಶಿವಕುಮಾರ್ ಅವರಿಗೆ ನಾನು ಸಿಎಂ ಆದ್ರೆ ಏನು ಮಾಡೋದು ಎಂಬ ಭಯ ಆವರಿಸಿದೆ ಅನ್ಸುತ್ತೆ! ಹೀಗಾಗಿಯೇ ಈ ರೀತಿ ಹೇಳಿಕೆ ನೀಡಿದ್ದಾರೆ. ಸದ್ಯ ಪಿಎಸ್‍ಐ(PSI) ಪ್ರಕರಣದಲ್ಲಿ ಕೇಳಿಬರುತ್ತಿರುವ ಆರೋಪಗಳನ್ನು ಉದ್ದೇಶಿಸಿ ಇಂದು ಬೆಳಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ(KPCC President), ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್(DK Shivkumar) ಅವರು, ಮಂತ್ರಿಗಳ ತಮ್ಮನ ವಿರುದ್ಧ ಆರೋಪವೂ ಕೇಳಿಬಂದಿದೆ.

ತನಿಖೆಗೆ ಬಂದಾಗ ಮಂತ್ರಿಗಳೇ ಕರೆಮಾಡಿ ತನಿಖೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಸಿಎಂಗೆ ಬದ್ದತೆ ಇದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲ್ಲಿ! ಪಿಎಸ್‍ಐ ಅಕ್ರಮದಲ್ಲಿ ಸಿಐಡಿ ಅವರ ತನಿಖೆಯಲ್ಲಿ ಆ ಮಂತ್ರಿಗಳ ಹೆಸರು ಕೂಡ ಕೇಳಿಬಂದಿದೆ. ಮಂತ್ರಿಯೊಬ್ಬರು ನಾವು ಗಂಡಸರಲ್ಲ ಅಂತಾರೇ…ಆಯ್ತು ಬಿಡಿ ನಾವು ಗಂಡಸರಲ್ಲ, ರಾಮನಗರದವರೆಲ್ಲಾ ಹೆಂಗಸರು ಎಂದು ಪರೋಕ್ಷವಾಗಿ `ಆ’ ಮಂತ್ರಿ ಎಂದು ಉಲ್ಲೇಖಿಸುವ ಮೂಲಕ ಡಿಕೆಶಿ ಪರೋಕ್ಷವಾಗಿ ಟಾಂಗ್ ನೀಡಿದರು.
ಆದ್ರೆ, ಸದ್ಯ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಸಚಿವ ಡಾ.ಅಶ್ವಥ್ ನಾರಾಯಣ್ ಪ್ರತಿಕ್ರಿಯೇ ನೀಡಿದ್ದು, ನಾನು ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಯಾವುದೇ ರೀತಿಯಲ್ಲೂ ಶಿಫಾರಸ್ಸು ಮಾಡಿಲ್ಲ! ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡುವುದಲ್ಲಾ! ಅವರ ಬಳಿ ಸೂಕ್ತ ದಾಖಲಾತಿಗಳು ಇದ್ದರೇ ಅದನ್ನು ಮುಂದಿಟ್ಟು ಸಾಬೀತುಪಡಿಸಲಿ ಆಗ ನಾನು ಒಪ್ಪಿಕೊಳ್ಳುತ್ತೇನೆ.

ಡಿಕೆ ಶಿವಕುಮಾರ್ ಅವರಿಗೆ ನಾನು ಸಿಎಂ ಆದ್ರೆ ಏನು ಮಾಡೋದು ಎಂಬ ಭಯ ಆವರಿಸಿದೆ ಅನ್ಸುತ್ತೆ, ಹೀಗಾಗಿಯೇ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.