New Delhi : ಇಂದಿನಿಂದ ಏಷ್ಯಾಕಪ್ (Asia Cup) ಕ್ರಿಕೆಟ್ ಟೂರ್ನಿ (Cricket Tourney) ದುಬೈನಲ್ಲಿ (Dubai) ಆರಂಭವಾಗಲಿದೆ.
ಮೊದಲ ಪಂದ್ಯ ಶ್ರೀಲಂಕಾ (Srilanka) ಮತ್ತು ಅಘ್ಪಾನಿಸ್ತಾನ್ (Afghanisthan) ನಡುವೆ ಭಾರತೀಯ ಕಾಲಮಾನ 7:30ಕ್ಕೆ ನಡೆಯಲಿದೆ. ಈ ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ಒಟ್ಟು 6 ತಂಡಗಳಿದ್ದು, ಈ ಟೀಮ್ಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದೆ.

ಗ್ರೂಪ್ ಎ ತಂಡಗಳು- ಭಾರತ (India), ಪಾಕಿಸ್ತಾನ, ಹಾಂಗ್ ಕಾಂಗ್
ಗ್ರೂಪ್ ಬಿ ತಂಡಗಳು – ಶ್ರೀಲಂಕಾ (Shreelanka), ಬಾಂಗ್ಲಾದೇಶ, ಅಫ್ಘಾನಿಸ್ತಾನ
ಟೂರ್ನಿಯ ವೇಳಾಪಟ್ಟಿ :
- ಆಗಸ್ಟ್ 27 – ಶ್ರೀಲಂಕಾ vs ಅಫ್ಘಾನಿಸ್ತಾನ- ದುಬೈ
- ಆಗಸ್ಟ್ 28 – ಭಾರತ vs ಪಾಕಿಸ್ತಾನ- ದುಬೈ
- ಆಗಸ್ಟ್ 30 – ಬಾಂಗ್ಲಾದೇಶ vs ಅಫ್ಘಾನಿಸ್ತಾನ- ಶಾರ್ಜಾ
- ಆಗಸ್ಟ್ 31 – ಭಾರತ vs ಹಾಂಗ್ ಕಾಂಗ್- ದುಬೈ
- ಸೆಪ್ಟೆಂಬರ್ 1 – ಶ್ರೀಲಂಕಾ vs ಬಾಂಗ್ಲಾದೇಶ- ದುಬೈ
- ಸೆಪ್ಟೆಂಬರ್ 2 – ಪಾಕಿಸ್ತಾನ vs ಹಾಂಗ್ ಕಾಂಗ್- ಶಾರ್ಜಾ
ನಾಲ್ಕು ತಂಡಗಳು ಸೂಪರ್-4 ಗೆ ಅರ್ಹತೆ ಪಡೆಯಲಿದೆ.
ಸೆಪ್ಟಂಬರ್ 3 ರಿಂದ ಸೂಪರ್-4 ಪಂದ್ಯಗಳು ಪ್ರಾರಂಭ

ಸೂಪರ್- 4 ವೇಳಾಪಟ್ಟಿ :
ಸೆಪ್ಟೆಂಬರ್ 3 – ಶಾರ್ಜಾ
ಸೆಪ್ಟೆಂಬರ್ 4 – ದುಬೈ
ಸೆಪ್ಟೆಂಬರ್ 6 – ದುಬೈ
ಸೆಪ್ಟೆಂಬರ್ 7 – ದುಬೈ
ಸೆಪ್ಟೆಂಬರ್ 8 – ದುಬೈ
ಸೆಪ್ಟೆಂಬರ್ 9 – ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ
ಇನ್ನು ಆಗಸ್ಟ್ 28 ರಂದು ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತ : ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ,
ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ / ಅವೇಶ್ ಖಾನ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್
ಇದನ್ನೂ ಓದಿ : https://vijayatimes.com/gulam-nabi-azaad-allegations/
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಝ್ವಾನ್, ಫಖರ್ ಝಮಾನ್, ಇಫ್ತಿಕಾರ್ ಅಹ್ಮದ್, ಹೈದರ್ ಅಲಿ, ಖುಷ್ದಿಲ್ ಶಾ, ಶದಾಬ್ ಖಾನ್, ಮೊಹಮ್ಮದ್ ನವಾಝ್, ಮೊಹಮ್ಮದ್ ವಾಸಿಮ್, ಹ್ಯಾರಿಸ್ ರೌಫ್, ಶಹನವಾಝ್ ದಹಾನಿ.