Guwahatti : ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 35,800 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಸ್ಸಾಂ ಸರ್ಕಾರ (Assam CM Gifts E Bike) ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಉಡುಗೊರೆಯಾಗಿ ವಿತರಿಸಿದೆ.
ಅಸ್ಸಾಂ ಸರ್ಕಾರದ ಈ ಯೋಜನೆ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ (Assam CM Gifts E Bike) ಕಾರಣವಾಗಿದೆ.

ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ನಡೆಸಿದ ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ 75% ಅಂಕಗಳನ್ನು ಗಳಿಸಿದ್ದರೆ ಪ್ರಶಸ್ತಿಗೆ ಅರ್ಹರು.
ಆದರೆ ಪ್ರಶಸ್ತಿ ಪಡೆಯಲು ಹುಡುಗರು ಮತ್ತು ಹುಡುಗಿಯರಿಗೆ ವಿಭಿನ್ನ ಮಾನದಂಡಗಳಿವೆ.
ಈಗಾಗಲೇ 35,800 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು (Electric Scooters) ಉಡುಗರೆಯಾಗಿ ವಿತರಿಸಲಾಗಿದೆ.
ಈ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himant Biswa Sarma), ಶಿಕ್ಷಣ ಸಚಿವ ರನೋಜ್ ಪೆಗು ಸೇರಿದಂತೆ ಇತರ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಉಡುಗೊರೆಗಳನ್ನು ವಿತರಿಸುವ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : https://vijayatimes.com/baba-cinema-re-release/
ಈ ಯೋಜನೆಯಡಿ 35,800 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಸ್ವೀಕರಿಸುವವರಲ್ಲಿ 29,748 ಹುಡುಗಿಯರು ಮತ್ತು 6,052 ಹುಡುಗರು ಸೇರಿದ್ದಾರೆ ಎಂದು ಅಸ್ಸಾಂ ಸರ್ಕಾರ ಹೇಳಿದೆ.
https://fb.watch/h6_9JrDPUG/ PROMO | ಥೂ ಥೂ..ಇದೆಂಥಾ ರಸ್ತೆ ರೀ? ಎಲ್ಲಿದೆ ಚಿನ್ನದ ರಸ್ತೆ?
ಇನ್ನು ಇದೇ ವೇಳೆ ಅಸ್ಸಾಂನ ಎಲ್ಲಾ ವಿದ್ಯಾರ್ಥಿನಿಯರು ರಾಜ್ಯದ ಪ್ರದೇಶದೊಳಗೆ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸಿದರೆ ವರ್ಷಕ್ಕೆ 10,000 ರೂಪಾಯಿಗಳನ್ನು ಸ್ಟೇ ಫಂಡ್ ಆಗಿ ಪಡೆಯುತ್ತಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದರು.

ಹೆಣ್ಣು ಮಕ್ಕಳ ಪೋಷಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ನಾವು ಅವರನ್ನು ಬೆಂಬಲಿಸುತ್ತಿದ್ದೇವೆ. ಈ ಮೊತ್ತವು ಅವರ ಕಮ್ಯುಟೇಶನ್ ಮತ್ತು ಇತರ ಸಂಬಂಧಿತ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.
ಈ ಯೋಜನೆಯು ಅನೇಕ ಹುಡುಗಿಯರನ್ನು ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸಲು ಪ್ರಭಾವ ಬೀರುತ್ತದೆ ಎಂದು ಭಾವಿಸುತ್ತೇವೆ ಎಂದು ಶರ್ಮಾ ಹೇಳಿದರು.
ಇದನ್ನೂ ಓದಿ : https://vijayatimes.com/state-congress-tweet-fires/
ಮುಂದಿನ ವಾರದಿಂದ ಪ್ರತ್ಯೇಕ ಪೋರ್ಟಲ್ ಪ್ರಾರಂಭವಾಗಲಿದ್ದು, ಯಾವುದೇ ವಿಭಾಗದಲ್ಲಿ ಯಾವುದೇ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಅರ್ಜಿ ಸಲ್ಲಿಸಬಹುದು.
ಮುಂಬರುವ ವರ್ಷಗಳಲ್ಲಿ, ಪದವಿ ವ್ಯಾಸಂಗ ಮಾಡುತ್ತಿರುವ ಹುಡುಗಿಯರನ್ನೂ ಈ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಶರ್ಮಾ ತಿಳಿಸಿದರು.
- ಮಹೇಶ್.ಪಿ.ಎಚ್