Bengaluru : ಇಷ್ಟು ದಿನದಿಂದ ಭರ್ಜರಿ ಪ್ರಚಾರ ನಡೆಸಿ ರಾಜ್ಯವೇ ಕುತೂಹಲದಿಂದ ಎದುರು ನೋಡ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka assembly election) ಮತದಾನಕ್ಕೆ ಈಗ ಟೈಂ ಬಂದೇ ಬಿಟ್ಟಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ (Assembly election 2023) ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದೆ.

ಕಳೆದ ಹಲವು ತಿಂಗಳಿನಿಂದ ನಡೆಸಿದ ರೋಡ್ ಶೋ (Road show), ಮನೆ ಪ್ರಚಾರ,ಸಮಾವೇಶ ಎಲ್ಲ ಅಂತ್ಯವಾಗಿದ್ದು,
ರಾಜ್ಯ ರಾಜಕೀಯದ ದಿಕ್ಕು ದೆಸೆಯನ್ನೇ ಬದಲಿಸುವ ಮಹಾ ಮತದಾನಕ್ಕೆ ಈಗ ಕ್ಷಣಗಣನೆ ಶುರುವಾಗಿದೆ.
ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿದ್ದು 5 ಕೋಟಿ 31 ಲಕ್ಷದ 33 ಸಾವಿರದ 54 ಮತದಾರರು ಇಂದು ಮತದಾನ (Assembly election 2023) ನಡೆಸಲಿದ್ದಾರೆ.
ಮತದಾನ ನಡೆಯಬೇಕಾಗುವ ಎಲ್ಲಾ ಕ್ಷೇತ್ರಗಳಿಗೂ ಚುನಾವಣಾ ಸಿಬ್ಬಂದಿಗಳು ವಿವಿ ಪ್ಯಾಟ್, ಇವಿಎಂ (EVM) ಸೇರಿದಂತೆ ಮತದಾನಕ್ಕೆ ಬೇಕಾಗುವ
ಎಲ್ಲಾ ವಸ್ತುಗಳನ್ನ ನಿನ್ನೆಯೇ ಮತಗಟ್ಟೆಗಳಿಗೆ ತಂದು ತಯಾರಿ ನಡೆಸಿದ್ದಾರೆ. ಒಟ್ಟು 2 ಸಾವಿರದ 615 ಅಭ್ಯರ್ಥಿಗಳ ಹಣೆ ಬರಹವನ್ನು ಇಂದು ಮತದಾರರು ನಿರ್ಧಾರಿಸಲಿದ್ದಾರೆ.
ಇದನ್ನೂ ಓದಿ : https://vijayatimes.com/heavy-rain-in-karnataka/
ವೋಟಿಂಗ್ ವೇಳೆ ಯಾವ ಐಡಿ ಕಾರ್ಡ್ ಬೇಕಾಗುತ್ತದೆ?
ಇಂದು ಮತದಾನ ಮಾಡಬೇಕಾದರೆ ಗುರುತಿನ ಚೀಟಿಯಾಗಿ ವೋಟರ್ ಐಡಿಯ (Voter Id) ಅವಶ್ಯಕತೆ ಇರುತ್ತದೆ.
ಒಂದು ವೇಳೆ ವೋಟರ್ ಐಡಿ ಇಲ್ಲದಿದ್ರೆ ಅಂತಹ ಸಮಯದಲ್ಲಿ ಆಧಾರ್ಕಾರ್ಡ್, ಪಾನ್ಕಾರ್ಡ್, ಡ್ರೈವಿಂಗ್ ಲೈಸನ್ಸ್, ರೇಷನ್ಕಾರ್ಡ್ ಸೇರಿದಂತೆ
ಸರ್ಕಾರದ ಬೇರೆ ಯಾವುದೇ ಐಡಿ ಕಾರ್ಡ್ ತೋರಿಸಿ ಇಂದು ಮತದಾನ ಮಾಡಲು ಅವಕಾಶ ಇದೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿದೆ (Assembly Constituency) ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲೂ ಒಟ್ಟು 7 ಕ್ಷೇತ್ರಗಳಿದೆ.
ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಉಡುಪಿಯಲ್ಲೂ ಮತದಾನಕ್ಕೆ ಭರ್ಜರಿ ಸಿದ್ಧತೆಗಳು ನಡೆದಿದೆ. ಮಲೆನಾಡದ ಶಿವಮೊಗ್ಗ,
ಚಿಕ್ಕಮಗಳೂರಿನಲ್ಲೂ ಸಹ ವೋಟಿಂಗ್ ಪ್ರಕ್ರಿಯೆಗೆ ಚುನಾವಣಾ ಸಿಬ್ಬಂದಿ ರೆಡಿಯಾಗಿದ್ದಾರೆ.
ಇದನ್ನೂ ಓದಿ : https://vijayatimes.com/shock-for-voters/
ಮತಗಟ್ಟೆ ತಲುಪಿರುವ ಅಧಿಕಾರಿಗಳ ತಂಡ, ಎಲ್ಲಾ ಪರಿಕರ ಹೊತ್ತು ಬೆಳಗ್ಗೆ 5.30 ರಿಂದಲೇ ಕೆಲಸ ಆರಂಭಿಸಿದ್ದರೆ ಮತ್ತು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.
ಇನ್ನು ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದೆ, ಇದರಲ್ಲಿ ಒಟ್ಟು 143 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 26 ಲಕ್ಷ ಮತದಾರರು ಹಕ್ಕು ಚಲಾಯಿಸಲು ಸಿದ್ದವಾಗಿದ್ದಾರೆ.
ಮೈಸೂರಿನಲ್ಲಿ ಒಟ್ಟು 2905 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಕ್ಷೇತ್ರಗಳಿದ್ದು, ಇಲ್ಲಿ 22 ಲಕ್ಷ ಮತದಾರರು ವೋಟಿಂಗ್ ನಡೆಸಲಿದ್ದಾರೆ.
ಇನ್ನು ಕರ್ನಾಟಕ ರಾಜ್ಯದಲ್ಲಿ ಕೆಲವು ವಿಧಾನಸಭೆ ಕ್ಷೇತ್ರಗಳು ಅತೀ ಸೂಕ್ಷ್ಮ ಕ್ಷೇತ್ರಗಳಾಗಿವೆ. ಅವುಗಳಲ್ಲಿ ವರುಣಾ, ಹಾಸನ, ಚಿತ್ತಾಪುರ, ಅಥಣಿ, ಚನ್ನಪಟ್ಟಣ, ಹುಬ್ಬಳ್ಳಿ ಸೆಂಟ್ರಲ್, ಆಗಿವೆ.ಇದೀಗ ರಾಜ್ಯದಲ್ಲಿ ಇದೇ ಕ್ಷೇತ್ರಗಳ ಮೇಲೆಯೇ ಎಲ್ಲರ ಚಿತ್ತ ಇದೆ.
- ರಶ್ಮಿತಾ ಅನೀಶ್