Atishi Marlena will take charge as the Chief Minister of Delhi
Delhi: ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಎಎಪಿ ಶಾಸಕಿ, ಸಚಿವೆ ಅತಿಶಿ ಮರ್ಲೆನಾ (Atishi Marlena) ಅವರನ್ನು ಆಯ್ಕೆ ಮಾಡಲಾಗಿದೆ.ಇಂದು ಮಧ್ಯಾಹ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.ಆ ಬಳಿಕ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದಿನ ಎಎಪಿ ಸಭೆಯಲ್ಲಿ, ಪಕ್ಷದ ನಾಯಕ ದಿಲೀಪ್ ಪಾಂಡೆ (Dilip Pandey) ಅವರು, ಸಿಎಂ ಯಾರೆಂದು ಕೇಜ್ರಿವಾಲ್ ನಿರ್ಧರಿಸಬೇಕೆಂದು ಪ್ರಸ್ತಾಪಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕರು ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಎಲ್ಲಾ ಎಎಪಿ ಶಾಸಕರು ಎದ್ದುನಿಂತು ಅದನ್ನು ಒಪ್ಪಿಕೊಂಡರು. ಎಂಎಸ್ ಅತಿಶಿ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂದು ಮೂಲಗಳು ಹೇಳಿವೆ.
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದರು (Tihar Jail) . ಅವರನ್ನು ಸೆಪ್ಟೆಂಬರ್ 13 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದಾದ ಬಳಿಕ ಸೆ.15ರಂದು ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಸಾರ್ವಜನಿಕರು ತೀರ್ಪು ನೀಡುವವರೆಗೂ ಸಿಎಂ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಮದ್ಯ ನೀತಿಯ ಪ್ರಕರಣದಲ್ಲಿ ಎಎಪಿ ನಾಯಕರು ಜೈಲಿಗೆ ಹೋಗಬೇಕಾದಾಗ, ಅತಿಶಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಪಕ್ಷಕ್ಕೆ ಅಪಾರ ನಿಷ್ಠೆ ತೋರಿದ್ದಾರೆ. ಹಾಗಾಗಿ ಇದೀಗ ಆಮ್ ಆದ್ಮಿ ಪಕ್ಷ (AAP) ಅತಿಶಿ ಮರ್ಲೆನಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ.
Atishi Marlena Delhi New CM Big Breaking News
Delhi: AAP MLA, Minister Atishi Marlena has been selected as the next Chief Minister of Delhi. Arvind Kejriwal will resign from the post of Delhi CM after meeting Lt Governor VK Saxena this afternoon. After that Atishi will take charge as Chief Minister.
At today’s AAP meeting, party leader Dilip Pandey suggested that Kejriwal should decide who will be the CM. When the AAP national convener proposed Atishi’s name, all the AAP MLAs stood up and accepted it. Sources said that Ms Atishi has been chosen as the leader of the legislature party.
Kejriwal was in Tihar Jail in the Excise policy case. He was released on bail on September 13. After this, on September 15, he announced that he would resign in two days. He said that he will not sit in the position of CM until the public gives a verdict. When AAP leaders go to jail in Delhi’s liquor policy case, Atishi took charge of the party. He has shown immense loyalty to the party. So now Aam Aadmi Party (AAP) has elected Atishi Marlena as the Legislative Party Leader.