ಬರ್ಲಿನ್, ಆ. 23: ಕಾಬೂಲ್ ವಿಮಾನ ನಿಲ್ದಾಣದ ಉತ್ತರ ಭಾಗದ ದ್ವಾರದಲ್ಲಿ ಸೋಮವಾರ ಬೆಳಿಗ್ಗೆ ಅಫ್ಗನ್ ಭದ್ರತಾ ಪಡೆಗಳು ಮತ್ತು ‘ಅನಾಮಿಕ ದಾಳಿಕೋರರ’ ನಡುವೆ ಗುಂಡಿನ ದಾಳಿ ನಡೆದಿದ್ದು, ಒಬ್ಬ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಜರ್ಮನಿಯ ಮಿಲಿಟರಿ ಹೇಳಿದೆ.
‘ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಬಳಿಕ ಅಮೆರಿಕ ಮತ್ತು ಜರ್ಮನಿಯ ಪಡೆಗಳೂ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಿದವು. ಜರ್ಮನಿಯ ಸೈನಿಕರಿಗೆ ಯಾವುದೇ ಗಾಯವಾಗಿಲ್ಲ’ ಎಂದು ಟ್ವೀಟ್ ಮಾಡಿ ತಿಳಿಸಿದೆ.
ದಾಳಿಕೋರರು ಯಾರು ಎಂಬುದು ಗೊತ್ತಾಗಿಲ್ಲ. ವಿಮಾನನಿಲ್ದಾಣದ ಹೊರವಲಯದಲ್ಲಿ ಕಾವಲು ಕಾಯುತ್ತಿರುವ ತಾಲಿಬಾನಿಗಳು ಇದುವರೆಗೆ ನ್ಯಾಟೊ ಅಥವಾ ಅಫ್ಗನ್ ಪಡೆಗಳ ಮೇಲೆ ಗುಂಡು ಹಾರಿಸಿಲ್ಲ.