- ಬ್ಯೂಟಿ ಹೆಸರಲ್ಲಿ ಜನರನ್ನು ಮರಳು ಮಾಡುತ್ತಿದ್ದ ಪಾರ್ಲರ್‌ಗಳ ವಿರುದ್ಧ ಕ್ರಮ
- ಸೌಂದರ್ಯವರ್ಧನೆ ಹೆಸರಿನಲ್ಲಿ ಕೆಮಿಕಲ್ ಬಳಸಿ ಚಿಕಿತ್ಸೆ (Attack on beauty parlors in Belgaum)
- ಹಲವು ದಿನಗಳಿಂದ ದೂರು ನೀಡುತ್ತಿದ್ದ ಸಾರ್ವಜನಿಕರು
Belagavi: ಬೆಳಗಾವಿ ನಗರದಲ್ಲಿನ 30ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್‌ಗಳ(Beauty Parlour) ಮೇಲೆ ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ,
10 ಪಾರ್ಲರ್‌ಗಳನ್ನು ಜಪ್ತಿ ಮಾಡಿದ್ದಾರೆ. ಉಳಿದ 20 ಪಾರ್ಲರ್‌ಗಳಿಗೆ ನೋಟಿಸ್ ನೀಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್(Mohammed Roshan) ಅವರಿಗೆ ಸಾರ್ವಜನಿಕರಿಂದ ಪಾರ್ಲರ್‌ಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಲಿಖಿತ ದೂರುಗಳು ಬಂದಿದ್ದವು.
ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಲ್ಲ ಪಾರ್ಲರ್‌ಗಳ ಮೇಲೂ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿ(District Health Officer) ಡಾ. ಈಶ್ವರ ಗಡಾದ ಅವರ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿ,

ನಗರದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಯಿತು. ದಾಳಿ ವೇಳೆ ಪಾರ್ಲರ್‌ಗಳಲ್ಲಿ ನಿಷೇಧಿತ ರಾಸಾಯನಿಕ(Chemical) ವಸ್ತುಗಳು, ಸ್ಟಿರಾಯಿಡ್‌ಗಳ(Steroids) ಬಳಕೆ,
ಕೂದಲು ಕಸಿ (ಹೇರ್ ಟ್ರಾನ್ಸ್‌ಪ್ಲಾಂಟ್) ಕಾರ್ಯ ಮತ್ತು ಚರ್ಮರೋಗ ಚಿಕಿತ್ಸೆಗಳನ್ನು(Dermatological treatment) ಅನಧಿಕೃತವಾಗಿ ನೀಡಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.
ಒಟ್ಟು 30 ಪಾರ್ಲರ್‌ಗಳನ್ನು ಪರಿಶೀಲಿಸಿದಾಗ, 10 ಪಾರ್ಲರ್‌ಗಳಲ್ಲಿ ಗಂಭೀರ ಅಕ್ರಮ ಕಂಡುಬಂದಿದೆ. ಅವುಗಳನ್ನು ತಕ್ಷಣವೇ ಮುಚ್ಚಲಾಗಿದೆ. ಉಳಿದ 20 ಪಾರ್ಲರ್‌ಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ.
ಸ್ಟಿರಾಯಿಡ್ ಬಳಕೆ ಮತ್ತು ಅಪಾಯಕಾರಿ ಕ್ರೀಮ್‌ಗಳಿಂದ ಗ್ರಾಹಕರ ಆರೋಗ್ಯಕ್ಕೆ ಹಾನಿ ಸಂಭವಿಸುತ್ತಿತ್ತು ಎಂದು ಡಾ. ಈಶ್ವರ ಗಡಾದ ತಿಳಿಸಿದ್ದಾರೆ.
ಇನ್ನು ಚರ್ಮರೋಗ ತಜ್ಞರ(Dermatologist) ಸಂಘವು ಕೂಡಾ ಈ ಕುರಿತು ಆರೋಗ್ಯ ಇಲಾಖೆಗೆ ದೂರು ನೀಡಿತ್ತು. ಅದನ್ನು ಆಧರಿಸಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಏಕಕಾಲದಲ್ಲಿ ಹಲವು ತಂಡಗಳನ್ನು ಕಳುಹಿಸಿ ಪಾರ್ಲರ್‌ಗಳ ಮೇಲೆ ದಾಳಿ ನಡೆಸಲಾಗಿದೆ.ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಸೌಂದರ್ಯವರ್ಧನೆ ಹೆಸರಿನಲ್ಲಿ ಅನಧಿಕೃತ ಚಿಕಿತ್ಸೆ ನೀಡಿ ಆರೋಗ್ಯದ ಜೊತೆ ಆಟವಾಡುತ್ತಿದ್ದರು. ಇಂತಹ ಪಾರ್ಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಜನರಿಗೆ ಸುರಕ್ಷತೆ ದೊರೆಯುತ್ತದೆ”
ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.ಬೆಳಗಾವಿಯಲ್ಲಿ ನಡೆದ ಈ ದಾಳಿ ಬ್ಯೂಟಿ ಪಾರ್ಲರ್‌ಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿದೆ.
ಇದನ್ನು ಓದಿ : ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ, ಪ್ರತಿದಿನ ಬೆಳಿಗ್ಗೆ 6.30ರಿಂದ ಮೆಟ್ರೋಗಳು ಓಡಾಟ ಆರಂಭಿಸಲಿದೆ
ಸೌಂದರ್ಯವರ್ಧನೆ ಹೆಸರಿನಲ್ಲಿ ಯಾವುದೇ ರೀತಿಯ ವಂಚನೆ, ಕಾನೂನುಬಾಹಿರ ಚಿಕಿತ್ಸೆ ಅಥವಾ ಹಾನಿಕಾರಕ ವಸ್ತುಗಳ ಬಳಕೆ ಮುಂದೆ ಸಹಿಸಿಕೊಳ್ಳಲಾಗುವುದಿಲ್ಲ ಎಂಬ ಸಂದೇಶವನ್ನು ಆರೋಗ್ಯ ಇಲಾಖೆ ಸ್ಪಷ್ಟವಾಗಿ ನೀಡಿದೆ. (Attack on beauty parlors in Belgaum)