- ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿ ಖಾಸಗಿ ಸಂಸ್ಥೆಯ ಚೀಲಕ್ಕೆ
- ಗೋದಾಮು ವ್ಯವಸ್ಥಾಪಕ ಸೋಮಶೇಖರ ಸೇವೆಯಿಂದ ಅಮಾನತ್ತು
- 8 ಟನ್ ಪಡಿತರ ಅಕ್ಕಿ ಕಳ್ಳ ಸಾಗಾಣೆಗೆ ಯತ್ನ (Attempt to smuggle Annabhagya rice)
Koppala: ಗಂಗಾವತಿ (Gangavathi) ನಗರದ ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು(Ration rice) ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ವಿದೇಶಕ್ಕೆ ರಫ್ತು(Export to foreign countries) ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಇದಕ್ಕೆ ಸಂಭಂದಿಸಿದಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಂಟಿಯಾಗಿ ಪಡಿತರ ಕಾರ್ಡ್‌ದಾದರರಿಗೆ(Ration card) ನೀಡಲಾಗುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ದುಶ್ಕರ್ಮಿಗಳು ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ್ದಾರೆ,
ಈ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಸರ್ಕಾರಿ ಗೋದಾಮಿನಲ್ಲಿಟ್ಟಿದ್ದರು(government warehouse).
ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಪ್ರಕರಣವನ್ನ ದಾಖಲಿಸಿದ್ದರು. ಆರೋಪಿಗಳು ಕೋರ್ಟ್ ಮೆಟ್ಟಿಲೇರಿದ್ದರು, ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸದೆ,

ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವಾದ ಮಂಡಿಸಿದ್ದರಿಂದ ಜಿಲ್ಲಾಧಿಕಾರಿಗಳಲು ಆರೋಪಿಗಳಿಗೆ ಪಡಿತರ ಅಕ್ಕಿಯನ್ನು ವಾಪಸ್ ನೀಡುವಂತೆ ಆದೇಶ ಹೊರಡಿಸಿದ್ದರು.
ಜಪ್ತಿ ಮಾಡಿದ್ದ ಅಕ್ಕಿಯನ್ನು ರೈಸ್‌ಮಿಲ್‌ನವರು ವಾಪಸ್ ಪಡೆದುಕೊಳ್ಳುವಾಗ ಗೋದಾಮು ವ್ಯವಸ್ಥಾಪಕ(Warehouse Manager) ಹಾಗೂ ಇತರರು ಪಡಿತರ ಅಕ್ಕಿ ಸಾಗಾಣಿಕೆಗೆ ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಅಕ್ರಮವನ್ನು ಗಂಗಾವತಿ ಗ್ಯಾರಂಟಿ ಸಮಿತಿ ಅಧ್ಯಕ್ಷರು ಬಯಲಿಗೆಳೆದಿದ್ದು, ಅಕ್ಕಿಯನ್ನು ಖಾಸಗಿ ಸಂಸ್ಥೆಯ ವಿದೇಶಿ ಪಾಕೇಟ್‌ಗಳಲ್ಲಿ ತುಂಬಿಸಲಾಗಿತ್ತು. ತಹಶೀಲ್ದಾರ್ ಅವರು ಗೋದಾಮನ್ನು ಸೀಜ್ ಮಾಡಿ,
ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ(Shivaraj Thangadagi),
ಪಡಿತರ ಅಕ್ಕಿ ಅಕ್ರಮದ ವಿಚಾರವಾಗಿ ಈಗಾಗಲೇ ಪ್ರಕರಣ ದಾಖಲಾಗಿದೆ. ನಾನು ನೇರವಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಯಾರು ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೋ, ಅವರ ಮೇಲೆ ನೇರವಾಗಿ ಎಫ್‌ಐಆರ್(FIR) ದಾಖಲಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಈ ಅಕ್ರಮದಲ್ಲಿ ಸರ್ಕಾರಿ ಗೋದಾಮಿನ ಅಧಿಕಾರಿಗಳ ತಪ್ಪು ಮಾಡಿರುವ ಮಾಹಿತಿ ಇದೆ. ಆರಂಭದಲ್ಲಿ ಅಕ್ಕಿ ವಶಪಡಿಸಿಕೊಂಡರೂ, ನಂತರ ಅದನ್ನು ಬಿಡುಗಡೆ ಮಾಡಲಾಗಿತ್ತು.
ಈ ಹಂತದಲ್ಲಿ ಗೋದಾಮಿನ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಸುಮಾರು 8 ಟನ್ ಅಕ್ಕಿಯಷ್ಟು ಅಕ್ರಮ ನಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಇದನ್ನು ಓದಿ : ಗೋವಾಕ್ಕೆ ಕೌಂಟರ್ ನೀಡಿದ ಕರ್ನಾಟಕ ಸರ್ಕಾರ: ಮಹದಾಯಿ ಯೋಜನೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟ ಕರ್ನಾಟಕ ಸರ್ಕಾರ
ಈ ಪ್ರಕರಣವನ್ನು ಸಂಪೂರ್ಣ ತನಿಖೆ ನಡೆಸುವುದಾಗಿಯೂ ಮತ್ತು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. (Attempt to smuggle Annabhagya rice)