ಬೆಂಗಳೂರು, ಫೆ. 13: ಸ್ಯಾಂಡಲ್ವುಡ್ನಲ್ಲಿ ದೊಡ್ಡ ನಿರೀಕ್ಷೆ ಸೃಷ್ಟಿಸಿರುವ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಪೊಗರು ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅಭಿಮಾನಿಗಳ ಕುತೂಹಲ ಮೂಡಿಸಿರುವ ಈ ಸಿನಿಮಾದ ರಿಲೀಸ್‌ಗೂ ಮುನ್ನ ಭರ್ಜರಿ ಆಡಿಯೋ ಲಾಂಚ್‌ಗೆ ಸಿದ್ಧತೆ ನಡೆಸಿರುವ ಚಿತ್ರತಂಡ ಇದಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ.
ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಚಿತ್ರ ಇದೇ ತಿಂಗಳ 19ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಈ ನಡುವೆ ದಾವಣಗೆರೆಯಲ್ಲಿ ಪೊಗರು ಚಿತ್ರದ ಅದ್ದೂರಿ ಆಡಿಯೋ ಲಾಂಚ್‌ಗೆ ಭರದ ಸಿದ್ಧತೆ ನಡೆದಿದ್ದು, ಫೆ.14 ರ ಪ್ರೇಮಿಗಳ ದಿನದಂದು ಚಿತ್ರದ ಆಡಿಯೋ ಲಾಂಚ್ ನಡೆಯಲಿದೆ. ಇದೇ ವೇದಿಕೆಯ ಮೇಲೆ ಪೊಗರು ಟೈಟಲ್ ಟ್ರ್ಯಾಕ್ ಹಾಗೂ ಟ್ರೇಲರ್ ಕೂಡ ರಿಲೀಸ್ ಆಗಲಿದೆ.
ಈ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯರನ್ನು ಭೆಟಿ ಮಾಡಿದ ನಟ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್ ವಿಪಕ್ಷ ನಾಯಕರನ್ನು ಪೊಗರು ಚಿತ್ರದ ಆಡಿಯೋ ಲಾಂಚ್‌ಗೆ ಆಹ್ವಾನಿಸಿದ್ದಾರೆ. ಈ ವೇಳೆ ಶಾಸಕ ಬೈರತಿ ಸುರೇಶ್ ಹಾಗೂ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕೂಡ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಬಹುನಿರೀಕ್ಷಿತ ಪೊಗರು ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ತೆರೆ ಕಾಣಲಿದೆ.