ಪರ್ಯಾಯ ಪಠ್ಯಪುಸ್ತಕ ತಯಾರಿಸುತ್ತೇವೆ : ದೇವನೂರು ಮಹಾದೇವ!

ಮಕ್ಕಳಿಗೆ ಸಂವಿಧಾನ(Constitution) ಮತ್ತು ಅದರ ಆಶಯಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ನಾವು ಪರ್ಯಾಯ(Altrenative) ಪಠ್ಯಪುಸ್ತಕವನ್ನು(TextBook) ತಯಾರಿಸುತ್ತೇವೆ.

ಸಾಮಾಜಿಕ ಜಾಲತಾಣಗಳಾದ(Social Media) ಫೇಸ್‍ಬುಕ್(Facebook), ವಾಟ್ಸ್‍ಪ್(WhatsApp) ಮೂಲಕ ಮಕ್ಕಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಸಾಹಿತಿ(Literatuarist) ದೇವನೂರು ಮಹಾದೇವ(Devanoor Mahadeva) ಹೇಳಿದರು. ಮೈಸೂರಿನಲ್ಲಿ(Mysuru) ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಆರ್‍ಎಸ್‍ಎಸ್ ಸರ್ಕಾರ ಮಕ್ಕಳಿಗೆ ಏನು ಬೇಕೋ ಅದನ್ನು ಕಲಿಸಲಿ.

ಆದರೆ ನಾವು ಬಾಬಾ ಸಾಹೇಬ್ ಅಂಬೇಡ್ಕರ್(Baba Saheb Ambedkar) ಅವರ ಸಂವಿಧಾನ, ಪ್ರಸ್ತಾವನೆ, ಜಾತ್ಯಾತೀತ ಆಶಯಗಳನ್ನು ಬೋಧಿಸುತ್ತೇವೆ. ಬಿಜೆಪಿ ಸರ್ಕಾರ ಪಠ್ಯಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಲು, ಮಕ್ಕಳು ಪ್ರಜಾಸತ್ತಾತ್ಮಕವಾಗಿ ಬೆಳೆಯುವಂತೆ ಮಾಡಲು, ಕಾರ್ಯಾಗಾರಗಳನ್ನು, ವಿಚಾರಗೋಷ್ಠಿಗಳನ್ನು ನಡೆಸುತ್ತೇವೆ. ಸಂವಿಧಾನದ ಆಶಯಗಳನ್ನು ತಿಳಿಸಲು ಪರ್ಯಾಯ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಪಠ್ಯಪರಿಷ್ಕರಣೆಯಲ್ಲದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದರು.

ಇನ್ನು ಮಕ್ಕಳು ಮೂಢನಂಬಿಕೆಗಳಿಗೆ(Superstitions) ಜೋತು ಬೀಳದಂತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು, ಜಾತ್ಯಾತೀತ ಮನೋಭಾವ ಹೊಂದಲು ಪರ್ಯಾಯ ಪಠ್ಯಪುಸ್ತಕ ರಚಿಸುತ್ತೇವೆ. ನಮ್ಮ ಸಂವಿಧಾನದ ಪ್ರಸ್ತಾನವನೆಯನ್ನು ಹಾಡುಕಟ್ಟಿ ಹಾಡುತ್ತೇವೆ. ರಾಜ್ಯದ ಎಲ್ಲ ಮಕ್ಕಳಿಗೂ ಸಂವಿಧಾನದ ಆಶಯಗಳನ್ನು ತಲುಪಿಸುತ್ತೇವೆ. ತಜ್ಞರ ಮೂಲಕ ರಾಜ್ಯಾದ್ಯಂತ ಉಪನ್ಯಾಸಗಳನ್ನು ನಡೆಸುತ್ತೇವೆ. ಇನ್ನು ನನ್ನ ಲೇಖನವನ್ನು ಪಠ್ಯಪುಸ್ತಕದಲ್ಲಿ ಮುದ್ರಣ ಮಾಡದಂತೆ ಹೇಳಿದ್ದೇನೆ.

ಆದರೆ ಈಗಾಗಲೇ ಪಠ್ಯಪುಸ್ತಕ ಮುದ್ರಣ ಆಗಿದ್ದರೆ, ನನ್ನ ಲೇಖನವನ್ನು ಬೋಧಿಸದಂತೆ ಶಿಕ್ಷಕರಿಗೆ ಸೂಚನೆ ನೀಡಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ ಎಂದರು.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.