English English Kannada Kannada

Preetham Kumar P

ಹುಬ್ಬಳಿ ವಿಮಾನ ನಿಲ್ದಾಣ ಸೇರಿ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಪಟ್ಟಿ ಮಾಡಿದ ಕೇಂದ್ರ ಸರ್ಕಾರ

ಕೇವಲ 13 ವಿಮಾನ ನಿಲ್ದಾಣಗಳಲ್ಲದೇ ಒಟ್ಟು 25 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಯೋಜನೆ ರಾಷ್ಟ್ರೀಯ ಹಣಗಳಿಕೆಯ ಯೋಜನೆಯ (NMP) ಭಾಗವಾಗಿ ಈಗ ಯೋಜನೆ ಹಾಕಿಕೊಂಡಿರುವ 13 ವಿಮಾನ ನಿಲ್ದಾಣಗಳೂ ಸೇರಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

ಪೆಟ್ರೋಲ್ ಡೀಸೆಲ್ ದರ ಕಡಿತಕ್ಕೆ ಆಗ್ರಹಿಸಿ ನವೆಂಬರ್‌ 15ರಿಂದ ಲಾರಿ ಮುಷ್ಕರ

ತೈಲ ಬೆಲೆ ಏರಿಕೆಯಿಂದ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತಿದೆ. ಹೀಗಾಗಿ ತೈಲ ಬೆಲೆಯನ್ನು ಕಡಿಮೆ ಮಾಡಲು ಒತ್ತಾಯಿಸಬೇಕೆಂದು ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದ್ದು, ತೈಲ ಬೆಲೆಯನ್ನು ಕಡಿಮೆ ಮಾಡದಿದ್ದರೆ ಮುಷ್ಕರ ಮಾಡುವ ಕುರಿತು ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಸರ್ಕಾರದಿಂಧ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನಕ್ಕೆ ಬ್ರೇಕ್ ?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ (By election) ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಡಬಲ್‌ ಎಂಜಿನ್‌ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ  ಬಿಜೆಪಿಗೆ (BJP) ಅನುಕೂಲ ಮಾಡಲು ಜೆಡಿಎಸ್‌ (JDS) ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೆಡಿಎಸ್‌ ಮತ ಬಿಜೆಪಿಗೆ ಸಹಾಯ ಮಾಡಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಆತ್ಮಹತ್ಯೆಗೆ ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂಬುದನ್ನು ವೀಡಿಯೋ ಮುಖಾಂತರ ತಿಳಿಸಿರುವ ವಿದ್ಯಾರ್ಥಿಯು ಹದಿಮೂರು ನಿಮಿಷ ಗಳಿರುವ ವಿಡಿಯೋ ಒಂದನ್ನು ಮಾಡಿದ್ದಾನೆ ಮತ್ತು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಆ ವೀಡಿಯೋ ಪ್ರಸಾರ ಮಾಡಬೇಕೆಂದು ಕೋರಿದ್ದಾನೆ. 

ಐಪಿಲ್‌ಗೆ 2 ಹೊಸ ತಂಡಗಳ ಸೇರ್ಪಡೆ

ಸಂಜೀವ್ ಗೊಯೆಂಕಾ ಒಡೆತನದ ಆರ್‌ಪಿಎಸ್‌ಜಿ ಗ್ರೂಪ್ ಲಕ್ನೋವನ್ನು 7090 ಕೋಟಿ ರೂ.ರೂಪಾಯಿಗಳ ಬಿಡ್‌ನೊಂದಿಗೆ ಆಯ್ಕೆ ಮಾಡಿಕೊಂಡಿದ್ದರೆ,ಸಿಪಿಸಿ ಕ್ಯಾಪಿಟಲ್ 5625 ಕೋಟಿಗಳ ರೂ.ಗಳ ಬಿಡ್‌ನೊಂದಿಗೆ ಅಹಮದಾಬಾದ್ ಅನ್ನು ಆಯ್ಕೆ ಮಾಡಿದೆ.

ನವೆಂಬರ್‌ನಿಂದ ಪೂರ್ಣಾವಧಿ ತರಗತಿಗಳು ಪ್ರಾರಂಭ

ತಜ್ಞರ ಸಲಹೆ ಮೇರೆಗೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸಲಾಗಿದೆ. 1 ರಿಂದ 5ನೇ ತರಗತಿ ಪ್ರಾರಂಭಕ್ಕೆ ಪೋಷಕರು ಕಾಯುತ್ತಿದ್ದರು, ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಶಾಲೆ ಆರಂಭಿಸಲು ನಿರ್ಧರಿಸಿ ಮೊದಲ ಹಂತದಲ್ಲಿ ಅರ್ಧ ದಿನ ಶಾಲೆ ಮುಂದಿನ ತಿಂಗಳಿಂದ ಪೂರ್ತಿ ದಿನ ಶಾಲೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪೆಟ್ರೋಲ್‌ ಡಿಸೇಲ್ ದರದಲ್ಲಿ ಮತ್ತೆ ಏರಿಕೆ

ಸೋಮವಾರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 107.59 ರೂಪಾಯಿ ಮತ್ತು ಡೀಸೆಲ್ ಬೆಲೆ 96.32 ರೂ. ಆಗಿದೆ. ಇದೇ ವೇಳೆ, ದೇಶದ ವಾಣಿಜ್ಯ ರಾಜಧಾನಿಯೆಂದು ಕರೆಸಿಕೊಳ್ಳುವ ಮುಂಬೈನಲ್ಲಿ ಪೆಟ್ರೋಲ್ ರೇಟ್ 113.46 ರೂ. ಆಗಿದ್ದು, ಡೀಸೆಲ್ ದರವು 104 ರೂಪಾಯಿ ಆಗಿದೆ.ಬೋಪಾಲ್ ನಲ್ಲಿ ಪೆಟ್ರೋಲ್ ದರ ಅತ್ಯಧಿಕ ಅಂದರೆ, 116.26 ರೂ. ಆಗಿದ್ದರೆ, ಡೀಸೆಲ್ ದರವು 105.54 ರೂಪಾಯಿಗೆ ಏರಿಕೆಯಾಗಿದೆ.

ಭಾರತ ತಂಡ ಸೋಲಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದವರ ವಿರುದ್ದ ಸೆಹ್ವಾಗ್ ಆಕ್ರೋಶ

ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಸೆಹ್ವಾಗ್‌ ಹಬ್ಬ ಹರಿದಿನಗಳಲ್ಲಿ ಭಾರತದಲ್ಲಿ ಪಟಾಕಿ ನಿಷೇಧ ನಿಯಮವನ್ನು ಉಲ್ಲಂಘಿಸುವ ಕ್ರಿಕೆಟ್ ಅಭಿಮಾನಿಗಳ ಬೂಟಾಟಿಕೆಯ ವಿರುದ್ಧ ವಾಗ್ದಾಳಿ ನಡೆಸಿದರು. ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ನಿಷೇಧಿಸಲಾಗಿದೆ ಆದರೆ ನಿನ್ನೆ ಭಾರತದ ಕೆಲವು ಭಾಗಗಳಲ್ಲಿ ಪಾಕಿಸ್ತಾನದ ವಿಜಯವನ್ನು ಆಚರಿಸಲು ಪಟಾಕಿಗಳನ್ನು ಸಿಡಿಸಲಾಯಿತು.

ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

ಶಸ್ತಿ ಸ್ವೀಕರಿಸಿ ಮಾತನಾಡಿದ ರಜನಿಕಾಂತ್ ಅವರು, ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ರಾವ್, ಸಾರಿಗೆ ಸಹೋದ್ಯೋಗಿ ಮತ್ತು ಸ್ನೇಹಿತ ರಾಜ್ ಬಹದ್ದೂರ್, ತಮ್ಮ ಅಭಿಮಾನಿಗಳು, ಚಲನಚಿತ್ರ ನಿರ್ಮಾಪಕರು, ಸಹೋದ್ಯೋಗಿಗಳು ಮತ್ತು ಐದು ದಶಕಗಳಲ್ಲಿ ಅವಿರತ ಬೆಂಬಲ ನೀಡಿದ ತಮಿಳು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಬಾರ್‌ ಕೌನ್ಸಿಲ್‌ನಿಂದ ರಾಜೇಶ್‌ ಅಮಾನತು

ಕರಂಗಲ್ಪಾಡಿಯಲ್ಲಿ ಕಚೇರಿಯನ್ನು ಹೊಂದಿರುವ ಕೆಎಸ್ಎನ್ ರಾಜೇಶ್ ಅವರು 2001ರಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿದ್ದರು. ರಾಜೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯವಾದಿಗಳ ಕಾಯ್ದೆಯ 35ನೇ ಸೆಕ್ಷನ್ ಅಡಿ ಮುಂದಿನ ಆದೇಶದ ವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಾರ್ ಕೌನ್ಸಿಲ್‌ನಿಂದ ರಾಜೇಶ್ ಅಮಾನತುಗೊಂಡಿದ್ದರಿಂದ ಪೊಲೀಸ್ ತನಿಖೆ ಪೂರ್ತಿಗೊಳ್ಳುವ ವಡೆಗೆ ಮತ್ತು ಬಾರ್ ಕೌನ್ಸಿಲ್ ಈ ಬಗ್ಗೆ ಮುಂದಿನ ಆದೇಶ ನೀಡುವ ವರೆಗೆ ನ್ಯಾಯಾಲಯದಲ್ಲಿ ವಕಾಲತು ವಹಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ

Submit Your Article