
ವಿಜಯನಗರದಲ್ಲಿ ಜಿಲ್ಲಾಡಳಿತ ಸತ್ತೇ ಹೋಗಿದೆ. ಜಿಲ್ಲೆಯಲ್ಲಿ ಬರೀ ಅಕ್ರಮ ಮದ್ಯ, ಮಟ್ಕಾದ್ದೇ ದರ್ಬಾರು. ಯುವಕರು ಬಲಿಯಾಗಿ ಮನೆಗೇ ಬೆಂಕಿ ಬೀಳುತ್ತಿದೆ
ಅಕ್ರಮ ಮದ್ಯದ ಹಾವಳಿಯಿಂದ ಮನೆಗಳೆಲ್ಲಾ ಮುರಿದು ಬೀಳುತ್ತಿವೆ. ಸಂಸಾರಗಳೆಲ್ಲಾ ಹಾಳಾಗುತ್ತಿವೆ. ನಿತ್ಯ ಜಗಳ ಹಳ್ಳಿ ಹಳ್ಳಿಗಳಲ್ಲಿ ಕಾಮನ್ ಆಗಿದೆ. ಸಣ್ಣ ಸಣ್ಣ ವಯಸ್ಸಿನ ಯುವಕರು ಮದ್ಯಕ್ಕೆ ಬಲಿಯಾಗಿ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ, ಅನೇಕರು ನಿತ್ಯ ಮದ್ಯ ಕುಡಿದು ನಾನಾ ರೋಗಗಳಿಗೆ ತುತ್ತಾಗಿದ್ದಾರೆ. ಇನ್ನು ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.