
ಅಂಗನವಾಡಿ ಆಹಾರ ರಹಸ್ಯ ಬಯಲು ! ಆಹಾರ ಸುರಕ್ಷತಾ ಸರ್ಟಿಫಿಕೇಟ್ ಇಲ್ಲದೆಯೇ ಮಕ್ಕಳ ಆಹಾರ ತಯಾರಿಕೆ. ವಿಜಯಟೈಮ್ಸ್ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಆಹಾರ ಸೀಕ್ರೆಟ್ಸ್.
ಹಾಸನ ಭಾಗದ ಮಂದಿ ಅಂಗನವಾಡಿಯಲ್ಲಿ ಸರಬರಾಜಾಗೋ ಪೌಷ್ಟಿಕ ಆಹಾರ ಪುಡಿಯನ್ನು ಹಸುಗಳಿಗೆ ಹಾಕ್ತಿದ್ದಾರೆ ಅನ್ನೋ ದೂರು ಕೂಡ ಬರುತ್ತಿದೆ. ಇದಕ್ಕೆ ಇಲ್ಲಿನ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮೂವತ್ತು ವರ್ಷಗಳಿಂದ ಝಾಂಡಾ ಊರಿರುವ ಕೆಲ ಅಧಿಕಾರಿಗಳ ಕಮಿಷನ್ ದಂಧೆ, ಅರ್ಹತೆಯೇ ಇಲ್ಲದೆ ನಿಯಮಮೀರಿ ಉಪನಿರ್ದೇಶಕ ಸ್ಥಾನದಲ್ಲಿ ಕೂತಿರುವ ಅಧಿಕಾರಿ ಲಂಚಕ್ಕಾಗಿ ಮಾಡ್ತಿರೋ ಲಜ್ಜೆಗೆಟ್ಟ ವ್ಯವಹಾರಗಳೇ ಕಾರಣ ಅನ್ನೋ ಆರೋಪ ಬಲವಾಗಿ ಕೇಳಿ ಬರುತ್ತಿದೆ