Bengaluru : ರಾಜ್ಯಾದ್ಯಂತ ಹೆಚ್ಚಿನ ಇ-ಬೈಕ್ ಟ್ಯಾಕ್ಸಿಗಳನ್ನು(auto drivers strike) ತರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಆಟೋ ಚಾಲಕರು ಡಿಸೆಂಬರ್ 29 ರಂದು ಬೆಂಗಳೂರಿನ ರಸ್ತೆಗಳಲ್ಲಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕಳೆದ ವಾರ ಮುಂಬೈನ ಪುಣೆ ನಗರದಲ್ಲಿ ಅಕ್ರಮ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಅನೇಕ ಆಟೋ ರಿಕ್ಷಾ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಭಾರೀ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು!
ಸದ್ಯ ಇದೇ ರೀತಿಯಲ್ಲಿ ರಾಜ್ಯದ ಆಟೋ ರಿಕ್ಷಾ ಚಾಲಕರು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಬಿಳಿ ನೋಂದಣಿ ಫಲಕಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳನ್ನು ಬಳಸುವ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸರ್ಕಾರ ನಿಷೇಧಿಸಬೇಕೆಂದು ಕರ್ನಾಟಕ ರಾಜಧಾನಿಯ ಆಟೋ ಚಾಲಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ ಎಂದು ಡೆಕ್ಕನ್ ಹೆರಾಲ್ಡ್(Deccan Herald) ಪತ್ರಿಕೆ ವರದಿ ಮಾಡಿದೆ.
http://ಇದನ್ನೂ ನೋಡಿ:https://fb.watch/hB86P0A_C4/
ಕರ್ನಾಟಕದ ಸಾರಿಗೆ ಇಲಾಖೆಯು ಈ ಹಿಂದೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಡಿ ಬೆಂಗಳೂರಿನಲ್ಲಿ ಇ-ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸಲು ಬೌನ್ಸ್(Bounce) ಮತ್ತು ಬ್ಲೂ ಸ್ಮಾರ್ಟ್‌ಗೆ(Blue smart) ಅನುಮತಿ ನೀಡಿದ್ದು,
ಪ್ರಯಾಣಿಕರಿಗೆ ಉತ್ತಮ ಕೊನೆಯ ಮೈಲಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಪರವಾನಗಿಗಳನ್ನು ನೀಡಿತ್ತು.
https://vijayatimes.com/tajmahal-received-tax-notice/

ಹಲವಾರು ಆಟೋ ಚಾಲಕರು ಮತ್ತು ಆಟೋ ಚಾಲಕರ ಸಂಘಟನೆಗಳು ಓಲಾ, ಊಬರ್ ಮತ್ತು ರಾಪಿಡೋ ಸೇವೆಗಳನ್ನು ವಿರೋಧಿಸಿದ್ದಾರೆ. ಕಾರಣ ಈ ಸೇವೆಗಳು ಅಕ್ರಮವಾಗಿದ್ದು,
ಆರ್.ಟಿ.ಓ ಇಲಾಖೆಯಿಂದ ಪರವಾನಿಗಿ ಪಡೆದಿಲ್ಲ ಮತ್ತು ತಮ್ಮ ವ್ಯವಹಾರಗಳಿಗೆ ಹೆಚ್ಚು ಹೊಡೆತ ನೀಡುತ್ತಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು(Bengaluru) ನಗರದಲ್ಲಿ ಆಗಾಗ್ಗೆ ಪ್ರಯಾಣದ ಸಮಸ್ಯೆಗಳು ಎದುರಾಗುತ್ತಿದ್ದು, ಸಾರ್ವಜನಿಕ ಸಾರಿಗೆಯು ಅಪಾರ ಜನಸಂಖ್ಯೆಗೆ ಪ್ರಯಾಣವನ್ನು ಪೂರೈಸುವಲ್ಲಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
http://ಇದನ್ನೂ ಓದಿ:https://vijayatimes.com/covid-new-version-bf7/
ವಿಶೇಷವಾಗಿ ಓಲಾ(Ola), ಊಬರ್(Uber) ಮತ್ತು ರಾಪಿಡೋ(Rapido) ನಂತಹ ಪ್ರಮುಖ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳು ಅನ್ಯಾಯ ಮಾರ್ಗದಲ್ಲಿ ಸಾಗುತ್ತಿದೆ.
ಸಾಮಾನ್ಯ ದರ ಅನ್ವಯವನ್ನು ಪಾಲಿಸದೆ, ಹೆಚ್ಚಿನ ದರಗಳನ್ನು ಪಡೆದುಕೊಳ್ಳುತ್ತಿದೆ ಎಂದು ಅನೇಕ ಆಟೋ ಚಾಲಕರು ಆರೋಪಿಸಿದ್ದಾರೆ.
ಒಟ್ಟಾರೆ ಈ ಎಲ್ಲಾ ಅಂಕಿ ಅಂಶಗಳನ್ನು ಆಧರಿಸಿ, ಆಟೋ ಚಾಲಕರು ಬೆಂಗಳೂರಿನಲ್ಲಿ ಅಕ್ರಮ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ ಎಂಬುದು ತಿಳಿದುಬಂದಿದೆ.