Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ (auto drivers Unstoppable outrage) ಮತ್ತು ಇ-ಬೈಕ್ ಸೇವೆಗೆ ಅನುಮತಿ ನೀಡಿರುವ ಸಾರಿಗೆ ಇಲಾಖೆ ವಿರುದ್ಧ ಆಟೋ ಚಾಲಕರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬೆಂಗಳೂರು ನಗರದ ವಿವಿಧೆಡೆಯಿಂದ ಆಗಮಿಸಿದ್ದ ಚಾಲಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಎಸ್‌ಆರ್ ಬೆಂಗಳೂರು(auto drivers Unstoppable outrage) ನಿಲ್ದಾಣದಿಂದ ನಗರದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಸಿದರು.
ಬಿಳಿ ನೋಂದಣಿ ಫಲಕಗಳನ್ನು ಹೊಂದಿರುವ ವೈಯಕ್ತಿಕ ದ್ವಿಚಕ್ರ ವಾಹನಗಳನ್ನು ಬಳಸುವ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸುವಂತೆ ಬೆಂಗಳೂರಿನ ಆಟೋ ಚಾಲಕರ ಒಕ್ಕೂಟಗಳು ಈ ಹಿಂದೆ ಸರ್ಕಾರವನ್ನು ಒತ್ತಾಯಿಸಿದ್ದವು.
ಅನಧಿಕೃತ ಬೈಕ್ ಟ್ಯಾಕ್ಸಿಗಳು ತಮ್ಮ ದಿನನಿತ್ಯದ ಜೀವನೋಪಾಯಕ್ಕೆ ಕುತ್ತು ತಂದಿವೆ ಎಂದು ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: https://vijayatimes.com/rishabh-pant-car-accident/
ಈ ನಡುವೆ ಡಿಸೆಂಬರ್ 6 ರಂದು, ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ (Electric bike taxi) ಯೋಜನೆಯಡಿ ಬೆಂಗಳೂರಿನಲ್ಲಿ ಇ-ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸಲು ಬೌನ್ಸ್ (Bounce) ಮತ್ತು ಬ್ಲೂ ಸ್ಮಾರ್ಟ್‌ಗೆ (Blue smart) ಅನುಮತಿ ನೀಡಿತು,
ಪ್ರಯಾಣಿಕರಿಗೆ ಉತ್ತಮ ವೇಗ, ಸುರಕ್ಷಿತ ಪ್ರಯಾಣ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಪರವಾನಗಿಗಳನ್ನು ನೀಡಿತು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ನಗರದಲ್ಲಿ ಆಟೋ ಸಂಘಟನೆಗಳು ಗುರುವಾರ ಪ್ರತಿಭಟನೆಗೆ ಕರೆ ನೀಡಿದ್ದವು.
ಇತ್ತೀಚೆಗೆ, ಕರ್ನಾಟಕ ಸಾರಿಗೆ ಇಲಾಖೆಯು ಓಲಾ (Ola), ಊಬರ್ (Uber) ಮತ್ತು ರ‍್ಯಾಪಿಡೋ (Rapido) ನಂತಹ ಅಪ್ಲಿಕೇಶನ್ ಆಧಾರಿತ ಕಂಪನಿಗಳಿಗೆ ಹೊಸ ಆಟೋ ದರಗಳನ್ನು ರೂಪಿಸಿದೆ.
ಸರ್ಕಾರ ಮಿತಿಗೊಳಿಸಿದ ಆಟೋ ದರಗಳ ಮೇಲೆ ಅನುಕೂಲಕರ ಶುಲ್ಕದ 5% ಸಂಗ್ರಹಿಸಲು ಸಂಗ್ರಾಹಕರಿಗೆ ಸರ್ಕಾರ ಆದೇಶಿಸಿದೆ. ಹೆಚ್ಚುವರಿ 5% ದರವು ಜಿಎಸ್‌ಟಿ (GST) ಯಂತೆ ಅನ್ವಯಿಸುತ್ತದೆ.
ನವೆಂಬರ್ 2021 ರಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಆಟೋ ಚಾಲಕರ ಮೀಟರ್ ದರವನ್ನು ಹೆಚ್ಚಿಸಿತ್ತು.
ಇದನ್ನೂ ಓದಿ: https://vijayatimes.com/kangana-requested-narendra-modi/
30ರೂ ರಿಂದ ಪ್ರಾರಂಭಿಸಿದ್ದು, ಮೊದಲ ಎರಡು ಕಿಲೋಮೀಟರ್‌ಗಳಿಗೆ 25 ಮತ್ತು ಪ್ರತಿ ಕಿಲೋಮೀಟರ್‌ಗೆ ಮೂಲ ಬೆಲೆಯನ್ನು 13 ರಿಂದ 15 ರೂ.ಗೆ ಹೆಚ್ಚಿಸಲಾಯಿತು.
ಈ ಆಟೋ ದರಗಳಿಗೆ ಪ್ರಸ್ತುತ ನಿಗದಿತ ಸೇವಾ ಶುಲ್ಕ ಅನ್ವಯಿಸುತ್ತದೆ. ಇಷ್ಟೆಲ್ಲಾ ಬದಲಾವಣೆ ಆದರೂ ಕೂಡ ಆಟೋ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕಾರಣ, ಈ ಹಿಂದೆಯೂ ಕೂಡ ಆಟೋ ಚಾಲಕರ ಸಂಘ ಪರವಾನಗಿ ಪಡೆಯದ ವಾಹನಗಳು, ಎಲ್ಲೋ ಬೋರ್ಡ್ (Yellow board) ಹೊಂದಿಲ್ಲದ ವಾಹನಗಳು
ಹೇಗೆ ಜನರಿಗೆ ಸೇವೆ ಸಲ್ಲಿಸಲು ಅನುಮತಿ ನೀಡಿದ್ದೀರಿ ಎಂದು ಪ್ರಶ್ನಿಸಿತ್ತು!
ಜೊತೆಗೆ ಓಲಾ, ರ‍್ಯಾಪಿಡೋ, ಊಬರ್ ಅನಗತ್ಯ ಸೇವೆಗಳಿಂದ ತಮ್ಮ ಜೀವನೋಪಾಯಕ್ಕೆ ಅಡ್ಡಗಾಲು ಹಾಕಿದೆ. ದಯಮಾಡಿ ಈ ಸೇವೆಗಳನ್ನು ನಿಷೇಧಿಸಿ, ಆಟೋ ಚಾಲಕರಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿತ್ತು. ಆದ್ರೆ,
ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸದ ಕಾರಣ ಆಟೋ ಚಾಲಕರು ಬೃಹತ್ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.