ನವದೆಹಲಿ ನ 30 : ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಮತ್ತೊಂದು ಹೊರೆಯಾಗಿದೆ. ಒಂದೆಡೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬದುಕುವುದೇ ಕಷ್ಟವಾಗಿರುವ ಜನ ಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೊರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಘೋಷಣೆಯನ್ನೂ ಮಾಡಿದೆ.
ಆನ್ಲೈನ್ನಲ್ಲಿ ಆಟೋ ಬುಕ್ ಮಾಡುವ ಪ್ರಯಾಣಿಕರು ಜಿಎಸ್ಟಿ ಪಾವತಿಸಬೇಕು ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಹೊಸ ನಿಯಮಗಳು ಮುಂದಿನ ವರ್ಷ ಜನವರಿ 1 ರಿಂದ ಜಾರಿಗೆ ಬರಲಿದೆ.
ಜನವರಿ 2022 ರಿಂದ, ಆಟೋದಲ್ಲಿ ಪ್ರಯಾಣಿಸಲು ಬಯಸುವವರು ಆನ್ಲೈನ್ನಲ್ಲಿ ಬುಕ್ ಮಾಡಿದರೆ ಶೇಕಡಾ 5 ಜಿಎಸ್ಟಿ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಈ ವಿಷಯವನ್ನು ಬಹಿರಂಗಪಡಿಸಿದೆ. ಆನ್ಲೈನ್ನಲ್ಲಿ ಬುಕ್ ಮಾಡುವವರಿಗೆ ಓಲಾ ಮತ್ತು ಉಬರ್ ಆಟೋಗಳಲ್ಲಿ ಪ್ರಯಾಣಿಸಲು ಇದು ಹೊರೆಯಾಗುವುದಿಲ್ಲ. ಸಾಮಾನ್ಯವಾಗಿ ಆಟೋ ಮೂಲಕ ಪಾವತಿಸುವವರಿಗೆ ಜಿಎಸ್ಟಿ ಇರುವುದಿಲ್ಲ. ಆನ್ಲೈನ್ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಈ ಹೊರೆ ಬೀಳುತ್ತ