ಬೆಂಗಳೂರು ನ 8 : ಪಟ್ರೋಲ್ ಬೆಲೆ ಇಳಿಕೆ ಬೆನ್ನಲ್ಲೇ ಇತ್ತ ಆಟೋದರ ಹೆಚ್ಚಳವಾಗಿದ್ದು ಜೊತೆಗೆ ಹೋಟೆಲ್ ತಿಂಡಿ ತಿನಿಸುಗಳ ದರ ಕೂಡ ಹೆಚ್ಚಳವಾಗಿದೆ. ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿಆದ ಹಿನ್ನಲೆಯಲ್ಲಿ ಆಟೋ ಮತ್ತು ಹೋಟೆಲ್ ದರ ಕೂಡ ಹೆಚ್ಚಾಗಿದೆ. ಹೋಟೆಲ್ ಊಟದ ದರ ಇಂದಿನಿಂದ ಹೆಚ್ಚಳವಾಗುತ್ತಿದೆ. ಜೊತೆಗೆ ಆಟೋ ದರ ಕೂಡ ಹೆಚ್ಚಳ ಮಾಡಿ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ಮುಂಚೆ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ?
- ಮಸಾಲೆ ದೋಸೆ 65 ರಿಂದ 75ರೂ.ಗೆ ಏರಿಕೆ
- ಇಡ್ಲಿ, ವಡೆ 35-40ರೂ. ಗೆ ಏರಿಕೆ
- ಕಾಫಿ, ಟಿ ಬೆಲೆ 15 ರಿಂದ 20ರೂ. ಗೆ ಏರಿಕೆ
- ಚೌಚೌ ಬಾತ್ 60 ರಿಂದ 70ರೂ. ಗೆ ಏರಿಕೆ
- ಸೌಥ್ ಇಂಡಿಯನ್ ಊಟ 85 ರಿಂದ 95ರೂ. ಗೆ ಏರಿಕೆ
- ರೈಸ್ ಬಾತ್ 40 ರಿಂದ 50ರೂ. ಗೆ ಹೆಚ್ಚಳ
- ರವಾ ಇಡ್ಲಿ 40 ರಿಂದ 45ರೂ. ಗೆ ಏರಿಕೆ
- ಅಕ್ಕಿ ರೊಟ್ಟಿ 45-50ರೂ. ಗೆ ಏರಿಕೆ
- ಪ್ರೈಡ್ ರೈಸ್ 100 ರಿಂದ 110ರೂ.ಗೆ ಕ್ಕೆ ಏರಿಕೆ
- ಗೋಬಿ ಮಂಚೂರಿ ಒಂದು ಪ್ಲೇಟಿಗೆ 100 ರಿಂದ 110ರೂ. ಗೆ ಕ್ಕೆ ಏರಿಕೆ
- ಪನ್ನೀರ್ ಮಂಚೂರಿ 110 ರಿಂದ 120ರೂ. ಗೆ ಹೆಚ್ಚಳ
- ಒಂದು ಪ್ಲೇಟ್ ಪೂರಿ 65 ರಿಂದ 70ರೂ. ಗೆ ಏರಿಕೆ
ಆಟೋ ದರ ಹೆಚ್ಚಿಸಿ ಆದೇಶ ಹೊರಡಿಸಿದ ಸಾರಿಗೆ ಪ್ರಾಧಿಕಾರ!
ಡಿಸೆಂಬರ್ ಒಂದರಿಂದ ಪರಿಷ್ಕರಿಸಲಾದ ಆಟೋ ದರ ಜಾರಿಯಾಗುತ್ತಿದೆ. ಸಾರಿಗೆ ಪ್ರಾಧಿಕಾರದಿಂದ ಆಟೋ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, 90 ದಿನಗಳ ಒಳಗಾಗಿ ಅಂದರೆ ಫೆಬ್ರವರಿ ಅಂತ್ಯದ ಒಳಗಾಗಿ ಮೀಟರ್ ಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಪರಿಷ್ಕೃತ ಆಟೋ ದರದ ವಿವರ ಇಂತಿದೆ.
- ಮೊದಲ 2 kmಗೆ 30 ರೂಪಾಯಿ ನಿಗದಿ
- ನಂತರದ ಪ್ರತಿ km ಗೆ 15 ರೂಪಾಯಿ
- ಮೊದಲ ಐದು ನಿಮಿಷ ಕಾಯುವಿಕೆ ಉಚಿತ
- ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
- 20 kg ವರೆಗೆ ಲಗೇಜ್ ಸಾಗಣೆ ಉಚಿತ
- 21 kg ಇಂದ 50 kg ವರೆಗೆ 5 ರೂ. ದರ ನಿಗದಿ
- ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15)