Bengaluru: ಅನಿವಾರ್ಯ ಸಂದರ್ಭಗಳಲ್ಲಿ. ಇಲ್ಲವೇ ಆರಾಮವಾಗಿ ಕುಳಿತು ಸಂಚರಿಸಲು ಉಪಯುಕ್ತವಾಗಿರುವ ಹಲವಾರು ಆಟೋಗಳ ದಾಖಲೆಯೇ ಇಲ್ಲ.ಬೆಂಗಳೂರು ನಗರದಲ್ಲಿ (Bangalore city) 2020ರ ಹಿಂದೆ ನೋಂದಣಿ (Registration) ಆಗಿರುವ ಆಟೋ ಪರ್ಮಿಟ್ಗಳ ದಾಖಲೆಗಳೇ (Documents of auto permits) ಆರ್ಟಿಒ ಕಚೇರಿಯಲ್ಲಿ (RTO office) ಇಲ್ಲವಂತೆ! ಬೆಂಗಳೂರಿನ ಶಾಂತಿನಗರ ಮುಖ್ಯ ಕಚೇರಿಯಲ್ಲಿ ವಾಹನ್- 3 ಅಡಿ ರಿಜಿಸ್ಟ್ರೇಷನ್ (Vahan- 3 Registration) ಆಗಿರುವ ಸಾವಿರಾರು ಆಟೋಗಳ ದಾಖಲೆ ಇಲ್ಲ ಎಂಬುದು ತಿಳಿದುಬಂದಿದೆ. 2020 ರ ವರೆಗೆ ವಾಹನ್- 3 ಅಡಿಯಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗುತಿತ್ತು.

2020 ಮಾರ್ಚ್ ನಂತರ ವಾಹನ್ – 4 ಅಡಿಯಲ್ಲಿ ವಾಹನಗಳ ನೋಂದಣಿ ಮಾಡಲಾಗುತ್ತಿದೆ. ಆದರೆ ವಾಹನ್- 3ರ ಅಡಿಯಲ್ಲಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋ ಪರ್ಮಿಟ್ಗಳ ದಾಖಲೆಗಳೇ ಇಲ್ಲವಾಗಿದ್ದು, ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.ದಾಖಲೆಗಳು ಇಲ್ಲದ ಕಾರಣ ಆಟೋ ಪರ್ಮಿಟ್ಗಳ ರಿನಿವಲ್ (Renewal of Auto Permits) ಆಗುತ್ತಿಲ್ಲ. ಪರ್ಮಿಟ್ ರಿನಿವಲ್ ಆಗದಿರುವ ಆಟೋಗಳಿಗೆ ಆರ್ಟಿಓ ಅಧಿಕಾರಿಗಳು (RTO officials) ಬರೋಬ್ಬರಿ ಐದು ಸಾವಿರ ರುಪಾಯಿ ದಂಡ ವಿಧಿಸುತ್ತಿದ್ದಾರೆ. ಪರ್ಮಿಟ್ ರಿನಿವಲ್ ಮಾಡುತ್ತಲೂ ಇಲ್ಲ, ದಂಡ ವಿಧಿಸುವುದನ್ನು ನಿಲ್ಲಿಸುತ್ತಲೂ ಇಲ್ಲ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದುವೇಳೆ ಪರ್ಮಿಟ್ ರಿನಿವಲ್ ಆಗದ ಆಟೋಗಳಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವ ವೇಳೆ ಆಟೋ ಅಪಘಾತಕ್ಕೀಡಾದರೆ ಇನ್ಶುರೆನ್ಸ್ ಕ್ಲೈಮ್ (Insurance claim) ಆಗುವುದಿಲ್ಲ. ಈ ಬಗ್ಗೆ ಪ್ರಯಾಣಿಕರು ಕೂಡ ಆರ್ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ ಆಟೋ ಪರ್ಮಿಟ್ ರಿನಿವಲ್ ಮಾಡಿ ಅಂದರೆ ನಮ್ಮ ಬಳಿ ನಿಮ್ಮ ದಾಖಲೆಗಳಿಲ್ಲ ಎನ್ನುತ್ತಾರೆ ಆರ್ಟಿಒ ಅಧಿಕಾರಿಗಳು. ರಸ್ತೆಯಲ್ಲಿ ಆಟೋಗಳನ್ನು ತಪಾಸಣೆ ಮಾಡುವ ವೇಳೆ ಪರ್ಮಿಟ್ ರಿನಿವಲ್ ಆಗಿಲ್ಲ ಎಂದು ದಂಡವನ್ನೂ ವಿಧಿಸುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಆಟೋ ಚಾಲಕರು (Auto drivers) ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ (Department of Transport) ಕೂಡಲೇ ಕ್ರಮ ಕೈಗೊಳ್ಳಬೇಕಿದೆ.