ಬಹಳ ಹಿಂದಿನಿಂದಲೂ ಅವಲಕ್ಕಿ (Avalakki) ಭಾರತದ ಅನೇಕ ಭಾಗಗಳಲ್ಲಿ ನೆಚ್ಚಿನ ಉಪಹಾರ ಭಕ್ಷ್ಯಗಳಲ್ಲಿ (Favorite breakfast dish) ಒಂದಾಗಿದೆ. ಉತ್ತಮ ಆರೋಗ್ಯ (Good health) ಮತ್ತು ಶಕ್ತಿಯಿಂದ ದಿನವನ್ನು ಪ್ರಾರಂಭಿಸಲು ಇದು ಉತ್ತಮ ಆಹಾರವಾಗಿದೆ (Good food). ಅವಲಕ್ಕಿಯಿಂದ ವಿವಿಧ ರೀತಿಯ ಆಹಾರ ತಯಾರಿಸೋದು ಸುಲಭ ಮಾತ್ರವಲ್ಲ ಜೀರ್ಣಿಸಿಕೊಳ್ಳಲು (Digest) ಕೂಡ ಸುಲಭವಾಗಿರುತ್ತದೆ.ಇದು ಕಬ್ಬಿಣ (Iron) ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ (Carbohydrates) ಸಮೃದ್ಧವಾಗಿದೆ ಮತ್ತು ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ (Glycemic index) ಕಡಿಮೆಯಾಗಿದೆ.
ಇನ್ನು ಅವಲಕ್ಕಿಯ ಪ್ರಯೋಜನಗಳ ನೋಡುವುದಾದರೆ ಅವಲಕ್ಕಿಯಲ್ಲಿ ಕ್ಯಾಲೋರಿ ಮಟ್ಟವು (Calorie level) ತುಂಬಾ ಕಡಿಮೆಯಾಗಿದೆ. ತೂಕ ಇಳಿಕೆ ಮಾಡಲು ಶ್ರಮಿಸುತ್ತಿರುವವರು ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಸೇವಿಸಬೇಕು. ಇದರಿಂದ ಅವರು ತೂಕ ಹೆಚ್ಚಾಗುವುದಿಲ್ಲ ಹೊಟ್ಟೆ ಕೂಡ ತುಂಬಿದಂತಿರುತ್ತದೆ. ಅಷ್ಟೇ ಅಲ್ಲದೇ ಅವಲಕ್ಕಿ ಗ್ಲುಟನ್ ಮುಕ್ತವಾದ (Gluten free) ಆಹಾರವಾಗಿದೆ. ಇದು ಗ್ಲುಟನ್ ಅಲರ್ಜಿಯಿಂದ ಬಳಲುತ್ತಿರುವವರಿಗೆ ಉತ್ತಮ ಉಪಹಾರವಾಗಿದೆ.

ಇನ್ನು ಅವಲಕ್ಕಿ ಸಮೃದ್ಧವಾಗಿ ಕಬ್ಬಿಣಾಂಶ ಹೊಂದಿದ್ದು ಇದು ದೇಹದಲ್ಲಿ ರಕ್ತದ ಮಟ್ಟವನ್ನು (Blood levels) ಕಾಪಾಡುತ್ತದೆ. ರಕ್ತಹೀನತೆಯ ತೊಂದರೆಗಳನ್ನು ತಡೆಗಟ್ಟಲು ಹಿಮೋಗ್ಲೋಬಿನ್ (Hemoglobin) ಅನ್ನು ಸರಿಯಾಗಿ ನಿರ್ವಹಿಸುತ್ತದೆ. ಹಾಗೂ ಅವಲಕ್ಕಿ ಹೆಚ್ಚಿನ ಫೈಬರ್ (fiber) ಹೊಂದಿದ್ದು ಇದು ಕರುಳಿನ ಆರೋಗ್ಯಕ್ಕೆ (Gut health) ತುಂಬಾ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಇದರಿಂದ ಮಲಬದ್ಧತೆ ಸಮಸ್ಯೆಯಿಂದ (Constipation problem) ಸುಲಭವಾಗಿ ಮುಕ್ತಿ ಪಡೆಯಬಹುದಾಗಿದೆ.ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ ಅವಲಕ್ಕಿ ವಿಟಮಿನ್ ಬಿ1 (Vitamin B1), ಬಿ2, ಬಿ3, ಬಿ6 ಹೊಂದಿದೆ. ನಮ್ಮ ದೇಹದ ಆರೋಗ್ಯಕ್ಕೆ (Body health) ಅಗತ್ಯವಾದ ಕಬ್ಬಿಣ (Iron), ಮೆಗ್ನೀಸಿಯಮ್ (Magnesium), ರಂಜಕದಂತಹ ಖನಿಜಗಳು (Minerals like phosphorus) ಅವಲಕ್ಕಿಯಲ್ಲಿವೆ ಹಾಗಾಗಿ ಈ ಬಿರು ಬಿಸಿಲಿನ ಝಳಕ್ಕೆ ಅವಲಕ್ಕಿ ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.