USA : ಜೇಮ್ಸ್ ಕ್ಯಾಮರೂನ್(James Cameron) ಅವರ ನಿರ್ದೇಶನದಲ್ಲಿ ಮೂಡಿಬಂದ ಅವತಾರ್ 2 : ದಿ ವೇ ಆಫ್ ವಾಟರ್(Avatar-2 the way of water) ಚಿತ್ರ ಇದೀಗ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ! ಈ ಹಿಂದೆ ವಿಶ್ವಾದ್ಯಂತ 2 ಬಿಲಿಯನ್ (Avatar2 earned 2 million) ಗಳಿಕೆಯನ್ನು ಕಂಡು ದಾಖಲೆಯನ್ನು ಬರೆದಿದ್ದ ಅವತಾರ್ 2 ಚಿತ್ರ,
ಇದೀಗ ಆ ದಾಖಲೆಯನ್ನು ಮುರಿದು, 2 ಬಿಲಿಯನ್ ಡಾಲರ್ ಗಳಿಕೆಯನ್ನು ಮೀರಿಸಿ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಕಬಳಿಕೆಯನ್ನು ಮುಂದುವರೆಸುವ ಮುಖೇನ ಹೊಸ ದಾಖಲೆಯನ್ನು ನಿರ್ಮಿಸಿದೆ.
ವಿಶ್ವಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಒಂದು ತಿಂಗಳು ಪೂರೈಸಿದ್ದು, ಇನ್ನೂ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಮುಂದಿದೆ.
ಈ ಚಿತ್ರವು ಈಗ ವಿಶ್ವಾದ್ಯಂತ $2 ಬಿಲಿಯನ್ ಗಳಿಕೆಯನ್ನು ಮೀರಿಸಿ, ಗಳಿಕೆಯನ್ನು ಎಂದಿನಂತೆ ಮುಂದುವರಿಸಿದೆ.
ವರದಿಗಳ ಪ್ರಕಾರ, ಅವತಾರ್ 2 : ದಿ ವೇ ಆಫ್ ವಾಟರ್ ಬಾಕ್ಸ್ ಆಫೀಸ್‌ನಲ್ಲಿ ಈ ಮೈಲಿಗಲ್ಲು ಸಾಧಿಸಿದ ಆರನೇ ಚಿತ್ರ ಎಂಬ ದಾಖಲೆಗೆ ಒಳಪಟ್ಟಿದೆ ಮತ್ತು ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ ನಡೆದಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ತಮ್ಮ ಚಿತ್ರವು ಕನಿಷ್ಠ $2 ಬಿಲಿಯನ್ ಗಳಿಸುವ ಅಗತ್ಯವಿದೆ.
ಯಾಕೆಂದರೆ ಈ ಚಿತ್ರದ ಮುಂದಿನ ಸೀಕ್ವೆಲ್‌ಗಳನ್ನು ನಿರ್ಧರಿಸಲು ಈ ಗಳಿಕೆ ಅತ್ಯವಶ್ಯಕವಾಗಿದೆ. ನಮ್ಮ ಮುಂದಿನ ಯೋಜನೆಗಳಿಗೆ ಇದು (Avatar2 earned 2 million) ಸಹಾಯ ಮಾಡುತ್ತದೆ ಎಂದು ಹೇಳಿದ್ದರು.
ಸದ್ಯ ಅವತಾರ್ 2 :ದಿ ವೇ ಆಫ್ ವಾಟರ್ ವಿಶ್ವಾದ್ಯಂತ $2 ಬಿಲಿಯನ್ ಗಳಿಕೆಯನ್ನು ದಾಟಿ, ಮುನ್ನುಗ್ಗುತ್ತಿದೆ.
ಅವತಾರ್ 2 : ದಿ ವೇ ಆಫ್ ವಾಟರ್ ಡಿಸೆಂಬರ್ 16, 2022 ರಂದು ವಿಶ್ವಾದ್ಯಂತ ಏಕಕಾಲಕ್ಕೆ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಈ ಚಿತ್ರವು ಭಾರತದಲ್ಲಿ(India) ಮತ್ತು ಹಲವಾರು ದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಅದ್ಭುತವಾದ ಪ್ರದರ್ಶನವನ್ನು ಕಾಣುತ್ತಿದ್ದು,
ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವಿಟರ್‌ನಲ್ಲಿ(Twitter) ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ(Box office) $ 2 ಬಿಲಿಯನ್ ಗಳಿಕೆಯನ್ನು ಮೀರಿದೆ ಎಂದು ಮಾಹಿತಿಯನ್ನು ಹಂಚಿಕೊಂಡರು.
ಇದನ್ನೂ ಓದಿ: ಕಾರ್ಕಳದಿಂದಲೇ ಸ್ಪರ್ಧೆ: ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ
ಇದರೊಂದಿಗೆ, ಅವತಾರ್ : ದಿ ವೇ ಆಫ್ ವಾಟರ್ ಈ ಮೈಲಿಗಲ್ಲನ್ನು ಮುಟ್ಟಿದ ಆರನೇ ಚಿತ್ರವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಬರೋಬ್ಬರಿ 12 ವರ್ಷಗಳ ನಂತರ ಬಿಡುಗಡೆಯಾದ ಅವತಾರ್ 2 ಸಿನಿಮಾ, ಅವತಾರ್‌ನ ಮುಂದುವರಿದ ಭಾಗವಾಗಿದೆ.
ದಿ ವೇ ಆಫ್ ವಾಟರ್, ಅಭಿಮಾನಿಗಳ ಒತ್ತಾಯ ಹಾಗೂ ಮನರಂಜಿಸುವ ಉದ್ದೇಶದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲಾಯಿತು ಎಂದು ಚಿತ್ರತಂಡ ತಿಳಿಸಿದೆ.
ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಸ್ಯಾಮ್ ವರ್ತಿಂಗ್ಟನ್, ಜೊಯಿ ಸಲ್ಡಾನಾ, ಸಿಗೌರ್ನಿ ವೀವರ್, ಸ್ಟೀಫನ್ ಲ್ಯಾಂಗ್ ಮತ್ತು ಕೇಟ್ ವಿನ್ಸ್ಲೆಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಅವತಾರ್: ದಿ ವೇ ಆಫ್ ವಾಟರ್ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.