Health Tips : ಚರ್ಮದ ಅಂದವನ್ನು ಕಾಪಾಡಲು ಆಯುರ್ವೇದ(Ayurvedic Tips For Skin) ಜೀವನ ಶೈಲಿಯೇ ಎಂದಿಗೂ ಅತ್ಯುತ್ತಮವಾದದ್ದು. ಆಯುರ್ವೇದ ಕೇವಲ ವಿಜ್ಞಾನ(Science) ಮಾತ್ರವಲ್ಲದೇ ಅದೊಂದು ಕಲೆಯು ಹೌದು, ಇದು ನೈಸರ್ಗಿಕವಾಗಿ ಸ್ಫೂರ್ತಿದಾಯಕವಾದದ್ದು.
ಆಯುರ್ವೇದ ಎಂದರೆ, ಕೇವಲ ಗಿಡಮೂಲಿಕೆಗಳ ಪರಿಹಾರ ಮಾತ್ರವಲ್ಲದೇ ಸುಂದರ ಜೀವನಶೈಲಿಯೂ ಎನ್ನಬಹುದು. ಚರ್ಮದ ಅಂದವನ್ನು(Ayurvedic Tips For Skin) ಕಾಪಾಡಲು ಸಹ ಆಯುರ್ವೇದ ಜೀವನ ಶೈಲಿ ಅತ್ಯುತ್ತಮವಾದದ್ದು.
ಸುಂದರ ತ್ವಚೆ ಮತ್ತು ಉತ್ತಮ ಆರೋಗ್ಯಕ್ಕೆ ಕೆಲವು ಆಯುರ್ವೇದದ ಸಲಹೆಗಳು ಇಲ್ಲಿವೆ ನೋಡಿ.
ಹೊಂದಾಣಿಕೆ ಅಲ್ಲದ ಆಹಾರವನ್ನು ಮಿಕ್ಸ್ ಮಾಡಿ ತಿನ್ನಬೇಡಿ : ಹಣ್ಣು ಮತ್ತು ಹಾಲು, ಹಾಲು ಮತ್ತು ಮಾಂಸ, ಊಟದ ನಂತರ ಕೂಲ್ ಡ್ರಿಂಕ್ಸ್, ತುಪ್ಪ ಮತ್ತು ಜೇನುತುಪ್ಪ,
ಹೀಗೆ ಹೊಂದಾಣಿಕೆಯಲ್ಲದ ಆಹಾರ ಕ್ರಮವನ್ನು ಅನುಸರಿಸಿದರೆ ಆಹಾರವನ್ನು ವಿಷವಾಗುವುದರಲ್ಲಿ ಅನುಮಾನವೇ ಇಲ್ಲ.
ಟೀ ಸೇವನೆ : ನಮ್ಮ ದೇಹವು ದಿನವಿಡೀ ನೀರಿನ ಅಂಶವನ್ನು ಹಿಡಿದಿಡುವುದು ಅತ್ಯಂತ ಮುಖ್ಯ. ಆದ್ದರಿಂದ ಆಗಾಗ ನೀರು ಮತ್ತು ಹರ್ಬಲ್ ಟೀ ಸೇವನೆ ಮಾಡಿ.
ಗಿಡಮೂಲಿಕೆಗಳ ಟೀಗಳಾದ ಶುಂಟಿ, ನಿಂಬೆಹಣ್ಣು, ಮತ್ತು ಕ್ಯಾಮೋಮೈಲ್ ಟೀ ಅನ್ನು ಮಧ್ಯಾಹ್ನದ ವೇಳೆ ಸೇವಿಸಬೇಕು. ಇದು ಜೀರ್ಣಕ್ರಿಯೆ ಉತ್ತಮವಾಗಲು ಮತ್ತು ಚರ್ಮದ ಕಾಂತಿಗೆ ಒಳ್ಳೆಯದು.
ಹೆಚ್ಚು ನೀರಿನಂಶವಿರುವ ತರಕಾರಿಗಳನ್ನು ಸೇವಿಸಿ : ನೀರಿನಂಶ ಹೆಚ್ಚಾಗಿರುವ ತರಕಾರಿಗಳು ಸುಲಭವಾಗಿ ಜೀರ್ಣವಾಗಬಲ್ಲವು. ಅಂತಹ ತರಕಾರಿಗಳೆಂದರೆ ಕ್ಯಾರೆಟ್, ಮೂಲಂಗಿ, ಸೌತೆಕಾಯಿ, ಸೊಪ್ಪು, ಎಲ್ಲಾ ಬಗೆಯ ಚರ್ಮಕ್ಕೆ ಅತ್ಯುತ್ತಮವಾದವು.
ಇವು ದೇಹದ ಶುದ್ಧೀಕರಣಗಳು ಎಂದು ಹೆಸರುವಾಸಿಯಾಗಿವೆ. ಈ ತರಕಾರಿಗಳನ್ನು ಬೇಯಿಸಬೇಕು ಅಥವಾ ಸಾಲಡ್ ಮಾಡಿ, ಕನಿಷ್ಟ 3-5 ತರಕಾರಿಗಳನ್ನು ಮಿಶ್ರ ಮಾಡಿ ಸೇವಿಸಬೇಕು. ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಬಹುದು.
ವಿಪರೀತ ಸೂರ್ಯನ ಶಾಖಕ್ಕೆ ಚರ್ಮವನ್ನು ಒಡ್ಡದಿರಿ : ಯಾವುದೇ ಆದರೂ ವಿಪರೀತವಾದಲ್ಲಿ ಅದು ದೇಹಕ್ಕೆ ಕೆಟ್ಟದ್ದೇ. ಬೆಳಗಿನ ವೇಳೆ ಸೂರ್ಯನ ಶಾಖಕ್ಕೆ ಅಲ್ಪ ಪ್ರಮಾಣದಲ್ಲಿ ಚರ್ಮ ಒಡ್ಡುವುದು ವಿಟಮಿನ್ ‘ಡಿ’ಗಾಗಿ ಅಗತ್ಯ.
ಆದರೆ ಅತೀ ಹೆಚ್ಚಾಗಿ ಸೂರ್ಯನ ಯುವಿ ಕಿರಣಗಳಿಗೆ ಚರ್ಮ ಒಡ್ಡುವುದರಿಂದ ಟ್ಯಾನಿಂಗ್, ಸನ್ಬರ್ನ್, ಹೈಪರ್ಪಿಗ್ಮೆಂಟೇಶನ್, ಮತ್ತು ಸುಕ್ಕುಗಳನ್ನು ಉಂಟುಮಾಡಬಹುದು.
ಅತಿಯಾದ ಬಿಸಿಲಿನ ವೇಳೆ ಹೊರಗೆ ಹೋದಾಗ ಛತ್ರಿ, ಟೋಪಿ, ಸ್ಕ್ರಾಫ್ ಅನ್ನು ಚರ್ಮದ ಸುರಕ್ಷತೆಗಾಗಿ ಬಳಸಲು ಮರೆಯದಿರಿ.
ಹಲವು ಬಗೆಯ ಬೀಜಗಳು ಮತ್ತು ಕಾಳುಗಳ ಸೇವನೆ : ಇವು ಕೇವಲ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಮಾತ್ರವಲ್ಲ, ನಾವು ಕೂಡ ದಿನನಿತ್ಯ ಕಾಳು ಬೇಳೆಯನ್ನು ಆಹಾರದಲ್ಲಿ ಸೇವನೆ ಮಾಡಿದರೆ ಚರ್ಮದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು.
ಇವು, ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಚರ್ಮ ಮತ್ತು ಹೃದಯನಾಳಗಳಿಗೆ ಉತ್ತಮವಾಗಿವೆ. ಹೊಳೆಯುವ ಚರ್ಮಕ್ಕಾಗಿ ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಿಸ್ತಾ ಮತ್ತು ಅಗಸೆ ಬೀಜಗಳನ್ನು ನಿಯಮಿತವಾಗಿ ಸೇವಿಸಿ.
https://youtu.be/Uba9-oFEVvg PROMO | RTO ಸೇಲಾಗಿದೆ ! ಯಾರಿಗೆ? ಬ್ರೋಕರ್‌ಗಳಿಗೆ.
ಶುಗರ್ ಮತ್ತು ಉಪ್ಪಿನಂಶವನ್ನು ಕಡಿಮೆಗೊಳಿಸಿ : ಹೆಚ್ಚಿನ ಉಪ್ಪಿನಂಶ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ, ಅಲ್ಲದೇ ಹೃದಯ ರೋಗಕ್ಕೆ ಕಾರಣವಾಗುತ್ತದೆ.
ಹೆಚ್ಚಿನ ಪ್ರಮಾಣದ ಶುಗರ್ ಮತ್ತು ಉಪ್ಪು ಸೇವನೆಯಿಂದ #Collagen ಮತ್ತು Elastin ಡ್ಯಾಮೇಜ್ ಗೂ ಕಾರಣವಾಗುತ್ತದೆ. ಆದರೆ ನಿಯಮಿತವಾಗಿ ಶುಗರ್ ಮತ್ತು ಉಪ್ಪಿನಂಶವನ್ನು ಸೇವಿಸಿದ್ದಲ್ಲಿ, ಚರ್ಮದ ಕಾಂತೀಯತೆ ಮತ್ತು ಸುಕ್ಕು ಬರದ ರೀತಿ ಕಾಪಾಡುತ್ತವೆ.
- ಪವಿತ್ರ