ಇದು ನಮ್ಮ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಆಯುಷ್ ವಿಭಾಗದಲ್ಲಿ ಕೇಳಿ ಬರುತ್ತಿರುವ ಸಾಮಾನ್ಯ ಡಯಾಲಾಗ್‌ಗಳು. ಇವರೆಲ್ಲಾ ಆಯುಷ್ ಇಲಾಖೆಯ ಕಮಿಷನ್ ಏಜೆಂಟರು. ಇವರ ಬಳಿ ಹೋದ್ರೆ ನಿಮಗೆ ಯಾವ ಔಷಧಿ ಲೈಸೆನ್ಸ್ ಬೇಕಾದ್ರೂ ಸುಲಭವಾಗಿ ಸಿಗುತ್ತೆ. ಇದಕ್ಕೆ ಇವರಾಡುವ ಮಾತುಗಳೇ ಸಾಕ್ಷಿ.
ಒಂದು ವೇಳೆ ನೀವು ಪ್ರಾಮಾಣಿಕವಾಗಿ ಆಯುಷ್ ಇಲಾಖೆಯ ವೆಬ್ ಮೂಲಕ ಆನ್‌ಲೈನ್‌ನಲ್ಲಿ ಔಷಧಿ ಲೈಸೆನ್ಸ್ಗೆ ಅಪ್ಲೆöÊ ಮಾಡಿದ್ರೆ ವರ್ಷವಿಡೀ ಕಚೇರಿ ಕಚೇರಿ ಸುತ್ತಾಡಬೇಕು. ಸುತ್ತಿ ಸುತ್ತಿ ಸುಸ್ತಾಗಿ ಔಷಧಿ ಲೈಸೆನ್ಸ್ ಬೇಡ ಏನೂ ಬೇಡ ಅಂತ ಓಡಿ ಹೋಗ್ತಿರ. ಅದೇ ಯಾವುದಾದ್ರೂ ಕನ್ಸಲ್ಟೆಂಟನ್ನು ಭೇಟಿಯಾಗಿ ಅವರ ಮೂಲಕ ನೀವೇನಾದ್ರೂ ಲೈಸೆನ್ಸ್ ಅಪ್ಲೆöÊಮಾಡಿದ್ರೆ ನಿಮಗೆ ಸುಲಭವಾಗಿ ಲೈಸೆನ್ಸ್ ದಕ್ಕುತ್ತೆ.
ನಮ್ಮ ರಾಜ್ಯದ ಆಯುಷ್ ಇಲಾಖೆಯಲ್ಲಿರುವ ಕಮಿಷನ್ ದಂಧೆಯಿAದ ರೋಸಿ ಹೋಗಿ ಅದೆಷ್ಟೋ ಔಷಧಿ ಉತ್ಪಾದಕರು ನೆರೆಯ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಅಲ್ಲಿ ಸುಲಭವಾಗಿ, ಸರಳವಾಗಿ ಲೈಸೆನ್ಸ್ ಸಿಗುತ್ತೆ, ಜೊತೆಗೆ ಲಕ್ಷ ಲಕ್ಷ ಲಂಚ ಕೊಡಬೇಕಾದ ಅವಶ್ಯಕತೆಯೂ ಇಲ್ಲ ಅಂತಾರೆ ನೊಂದ ಔಷಧಿ ಉತ್ಪಾದಕರು.
ಯಸ್, ನಮ್ಮ ರಾಜ್ಯದ ಆಯುಷ್ ಇಲಾಖೆ ಕಮಿಷನ್ ದಂಧೆಯ ಕೂಪವಾಗಿದೆ. ಇದಕ್ಕೆ ಡೆಪ್ಯುಡಿ ಡ್ರಗ್ ಕಂಟ್ರೋಲರ್ ಡಾ.ರಾಠೋಡ್ ಅವರು ಆಯುಷ್ ಇಲಾಖೆಯ ಕಾನೂನುಗಳನ್ನು ಧಿಕ್ಕರಿಸಿ ರೂಪಿಸಿರುವ ನಿಯಮಗಳೇ ಕಾರಣ ಅನ್ನೋದು ಔಷಧಿ ಉತ್ಪಾದಕರ ದೂರು.
ಈ ರೀತಿ ಆಯುಷ್ ಇಲಾಖೆಯ ಔಷಧಿ ಲೈಸೆನ್ಸ್ ವಿಭಾಗದಲ್ಲಿ ಸಾಕಷ್ಟು ಹಗರಣಗಳು ನಡೆಯುತ್ತಿವೆ. ಇದರಿಂದ ಔಷಧಿ ಉತ್ಪಾದಕರಿಗೆ ಬಹಳ ತೊಂದರೆಯಾಗುತ್ತಿದೆ ಅನ್ನೋ ದೂರು ಕೇಳಿ ಬಂತು. ಈ ದೂರಿನ ಬೆನ್ನತ್ತಿ ಹೊರಟ ವಿಜಯಟೈಮ್ಸ್ ಸಿಟಿಜನ್ ಜರ್ನಲಿಸ್ಟ್ ತಂಡ ರಹಸ್ಯ ಕಾರ್ಯಾಚರಣೆ ಮಾಡಿ ದೂರಿನ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿತು.
ಮೊದಲು ನಮ್ಮ ತಂಡ ನೇರವಾಗಿ ಆಯುಷ್‌ನ ಡೆಪ್ಯುಟಿ ಡ್ರಗ್ ಕಂಟ್ರೋಲರ್ ಡಾ. ರಾಠೋಡ್ ಅವರನ್ನೇ ಭೇಟಿ ಮಾಡಿ ಲೈಸೆನ್ಸ್ ಬಗ್ಗೆ ವಿಚಾರಿಸಿತು. ಅವರು ತಾವು ಬಹಳ ಪ್ರಾಮಾಣಿಕ ಅನ್ನೋ ರೀತಿ ಪೋಸ್ ಕೊಟ್ಟು ೬೫೦ ರೂಪಾಯಿ ಕಟ್ಟಿ ಆನ್ಲೆöÊನ್‌ನಲ್ಲಿ ಅಪ್ಲೆöÊ ಮಾಡಿ ಅಂದ್ರು.
ಆ ಬಳಿಕ ನಮ್ಮ ತಂಡ ಆಯುಷ್ ಇಲಾಖೆಯ ಡ್ರಗ್ ಇನ್ಸ್ಪೆಕ್ಟರ್ ಡಾ.ಅರುಣ್ ಅವರನ್ನು ಭೇಟಿಯಾಗಿ ನಮಗೆ ಡ್ರಗ್ ಲೈಸೆನ್ಸ್ ಮಾಡಬೇಕು. ನಾವು ಏನ್ ಮಾಡಬೇಕು ಅಂತ ವಿಚಾರಿಸಿದೆವು. ಆಗ ಅವರು ನಮಗೆ ರೇವತಿ ಅವರ ನಂಬರ್ ಕೊಟ್ಟು ನೀವು ಇವರನ್ನ ಸಂಪರ್ಕಿಸಿ ನಿಮಗೆ ಎಲ್ಲಾ ಸಹಾಯ ಮಾಡ್ತಾರೆ ಅಂದ್ರು
ರೇವತಿ ಅವರು ವಶಿಷ್ಟ ಫಾರ್ಮಸಿಯ ರವೀಂದ್ರ ಜೋಶಿಯವರನ್ನು ಭೇಟಿಯಾಗಲು ಹೇಳಿದ್ರು. ನಾವು ನೇರವಾಗಿ ಅವರನ್ನು ಭೇಟಿ ಮಾಡಿ ಲೈಸೆನ್ಸ್ ಪಡೆಯಲು ಮಾಡಬೇಕಾದ ತಯಾರಿಯ ಬಗ್ಗೆ ಕೇಳಿದೆವು. ಜೊತೆಗೆ ಎಷ್ಟು ಖರ್ಚಾಗುತ್ತೆ ಅನ್ನೋದನ್ನ ವಿಚಾರಿಸಿದಾಗ ಒಂದು ಲಕ್ಷ ರೂಪಾಯಿ ಖರ್ಚಾಗುತ್ತೆ ಅನ್ನೋ ನೇರ ಉತ್ತರ ಕೊಟ್ರು. ಇದೇ ಉತ್ತರವನ್ನು ವಶಿಷ್ಟ ಸಂಸ್ಥೆಯ ಮುಖ್ಯಸ್ಥರಾದ ವಾಸುದೇವ ಮೂರ್ತಿಯವರೂ ನಮಗೆ ಕೊಟ್ರು.
ಈಗ ನಮಗೆ ಪಕ್ಕಾ ಆಯ್ತು. ಲಕ್ಷ ಲಕ್ಷ ಕಮಿಷನ್ ಕೊಟ್ರೆ ಲೈಸೆನ್ಸ್ ಸುಲಭವಾಗಿ ಸಿಕ್ಕಿ ಬಿಡುತ್ತೆ. ಅದೂ ಆಯುಷ್ ಇಲಾಖೆ ಲಿಂಕ್‌ನಿAದ ಬಂದ್ರೆ ಮಾತ್ರ ಬೇಗ ಕೆಲಸ ಆಗುತ್ತೆ ಅನ್ನೋದು. ಯಾಂಕAದ್ರೆ ಇವರೆಲ್ಲಾ ಆಯುಷ್ ಇಲಾಖೆ ಅಧಿಕಾರಿ ಅರುಣ್ ಅವರ ಲಿಂಕ್‌ನಿAದಲೇ ನಮಗೆ ಪರಿಚಯ ಆಗಿರೋದು. ಅಲ್ಲದೆ ಇಂಥಾ ಅನೇಕ ಲೈಸೆನ್ಸ್ ಏಜೆಂಟರು ಕನ್ಸಲ್ಟೆಂಟ್ ಹೆಸರಲ್ಲಿ ಕಮಿಷನ್ ದಂಧೆ ಮಾಡುತ್ತಿದ್ದಾರೆ.
ಆಯುಷ್ ಇಲಾಖೆ ಕಮಿಷನ್ ಕೋರರ ಸ್ವರ್ಗ ಆಗಲು ಮುಖ್ಯ ಕಾರಣ ಡೆಪ್ಯುಟಿ ಡ್ರಗ್ ಕಂಟ್ರೋಲರ್ ರಾಠೋಡ್ ಅವರ ಸರ್ವಾಧಿಕಾರಿ ಧೋರಣೆ ಅನ್ನೋದು ಔಷಧಿ ಉತ್ಪಾದಕರ ದೂರು. ರಾಠೋಡ್ ಅವರು ಅರ್ಹತೆ ಇಲ್ಲದಿದ್ದರೂ, ಇಲಾಖೆಯ ಕಾನೂನನ್ನು ತಿರುಚಿ ತಮ್ಮ ಹುದ್ದೆಯನ್ನು ಗಟ್ಟಿ ಮಾಡಿಕೊಂಡಿದ್ದಾರೆ. ತಮಗೆ ಬೇಕಾದ ಹಾಗೆ ನಿಯಮ ರೂಪಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಅನ್ನೋದನ್ನು ಆರೋಗ್ಯ ಇಲಾಖೆಯ ಅಂದಿನ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಅವರು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ,
ಅಲ್ಲದೆ ಡಾ. ರಾಠೋಡ್ ಅವರು ಕಮಿಷನ್ ಏಜೆಂಟರಿಗೆ ಅನುಕೂಲವಾಗುವಂತೆ, ಔಷಧಿ ಉತ್ಪಾದಕರಿಗೆ ತೊಂದರೆ ಆಗುವಂಥಾ ಕೆಲ ನಿಯಮಗಳನ್ನು ಸೇರಿಸಿದ್ದಾರೆ. ಇದು ಇನ್ನಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಇದು ಆರೋಗ್ಯ ಸಚಿವರ ಗಮನಕ್ಕೆ ಯಾಕೆ ಬಂದಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ
ಡಾ.ರಾಠೋಡ್ ಅವರ ಸರ್ವಾಧಿಕಾರಿ ಧೋರಣೆಯಿಂದ ಆಯುಷ್ ಇಲಾಖೆಯಿಂದ ಔಷಧಿ ಉತ್ಪಾದಕರೆಲ್ಲಾ ಬೇರೆ ರಾಜ್ಯಗಳಿಗೆ ಪರಾರಿಯಾಗುತ್ತಿದ್ದಾರೆ. ಇದಕ್ಕೇ ಬ್ರೇಕ್ ಹಾಕಲು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಈ ಬಗ್ಗೆ ತನಿಖೆ ಮಾಡಬೇಕು. ಅಲ್ಲದೆ ಆಯುಷ್ ಇಲಾಖೆಯ ಏಜೆಂಟ್ ವ್ಯವಹಾರ ಹಾಗೂ ಕಮಿಷನ್ ದಂಧೆಗೆ ಫುಲ್‌ಸ್ಟಾಪ್ ಹಾಕಬೇಕು ಅನ್ನೋದು ಔಷಧಿ ಉತ್ಪಾದಕರ ಆಗ್ರಹ.
ಬೆಂಗಳೂರಿನಿಂದ ಶ್ರೀನಿವಾಸ್, ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್