Bengaluru : ಅಯ್ಯಪ್ಪ ಮಾಲೆ, ದತ್ತ ಮಾಲೆ, ಓಂ ಶಕ್ತಿ ಮಾಲೆಗಳನ್ನು ನೋಡಿದ್ದೇವೆ. ದೇವರ ಹೆಸರಲ್ಲಿ ಮಾಲೆ ಹಾಕಿ ವೃತ ಪಾಲಿಸಿ ಯಾತ್ರೆ ಮಾಡೋದನ್ನು ಕಂಡಿದ್ದೇವೆ. ಆದ್ರೆ ಇದು ಹೊಸತಾಗಿ (Ayyappa Malle Punitha Maale) ಹುಟ್ಟಿಕೊಳ್ಳುತ್ತಿರುವ ಪುನೀತ್ ಮಾಲೆ'.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅವರ ಅಭಿಮಾನಿಗಳ ಬಳಗ ಇದೀಗ
ಪುನೀತ ಮಾಲೆ’(Puneeth Maale) ಎಂಬ ಅಭಿಯಾನವನ್ನು ಪ್ರಾರಂಭಿಸಿ ಭಾರೀ ಸುದ್ದಿ ಮಾಡುತ್ತಿದ್ದಾರೆ. ಹಾಗಾದ್ರೆ ಏನಿದು ಪುನೀತ್ ಮಾಲೆ?

Puneeth Rajkumar
ಕರ್ನಾಟಕದಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar)
ಅವರಿಗೆ ಬೃಹತ್ ಅಭಿಮಾನಿಗಳ ಬಳಗವಿದೆ.
ಅದರಲ್ಲೂ ಪುನೀತ್ ನಿಧನದ ಬಳಿಕ ಆ ಸಂಖ್ಯೆ ಪುನೀತ್ ರಾಜ್‌ಕುಮಾರ್ ಅವರನ್ನು ದೇವರಂತೆ ಕಾಣುವ ಹುಚ್ಚು ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ. ಅಷ್ಟೇ ಅಲ್ಲ ಪುನೀತ್ ರಾಜ್‌ಕುಮಾರ್ ಅವರಂತೆ ತಾವೂ ಜನಸೇವೆ ಮಾಡಬೇಕು.
ದಾನ, ಧರ್ಮದಲ್ಲಿ ತೊಡಗಬೇಕು ಅನ್ನೋ ಮಹಾತ್ವಾಕಾಂಕ್ಷಿ ಯುವಕರ ತಂಡವೇ ಸೃಷ್ಟಿಯಾಗಿದೆ. ಇನ್ನು ಕೆಲವರು ಅಭಿಮಾನವನ್ನು ಅತಿರೇಕವಾಗಿ ಪ್ರದರ್ಶಿಸಲು ಮುಂದಾಗುತ್ತಿದ್ದಾರೆ.
ಇದೇ ರೀತಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಬಳಗ ಪುನೀತ ಮಾಲೆ ಎಂಬ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ.
ಹೊಸಪೇಟೆ ತಾಲೂಕಿನ `ಅಪ್ಪು ಹುಡುಗರು- ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ’ ಎಂಬ ಹೆಸರಿನ ತಂಡ ರಚಿಸಿರುವ ಯುವಕರ ಗುಂಪೊಂದು,
ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಹನುಮ ಮಾಲೆ (Ayyappa Malle Punitha Maale) ಮಾದರಿಯಲ್ಲಿ ಪುನೀತ ಮಾಲೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಸಂಗತಿ ಅನೇಕರಲ್ಲಿ ಮಂದಹಾಸ ಮೂಡಿಸಿದರೇ, ಇನ್ನು ಕೆಲವರಲ್ಲಿ ಇದು ಗೊಂದಲ ಸೃಷ್ಟಿಸಿದೆ ಮತ್ತು ಭಾರಿ ಚರ್ಚೆಗೂ ಗ್ರಾಸವಾಗಿದೆ. ಪುನೀತ ಮಾಲೆ ಎಂಬ ಕಾರ್ಯಕ್ರಮದ ಬಗ್ಗೆ ಈಗಾಗಲೇ ಪೋಸ್ಟರ್‌ಗಳು ಪ್ರಕಟವಾಗಿದೆ.
ಈ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪುನೀತ ಮಾಲೆ ಅಪ್ಪು ಅವರ ಅಭಿಮಾನಿಗಳು ಆಯೋಜಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡರೂ
ಇದರಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಅವರ ಫೋಟೊ ಕೂಡ ಪೋಸ್ಟರ್‌ನಲ್ಲಿ ಇದೆ!
ಅಪ್ಪು ಅವರ ಅಭಿಮಾನಿಗಳ ಬಳಗ ಹಾಕಿರುವ ಪೋಸ್ಟರ್‌ನಲ್ಲಿ ನಿಯಮಾವಳಿಗಳು ಒಂದೆಡೆ ಇದ್ದರೇ,
ಮತ್ತೊಂದೆಡೆ ಅಪ್ಪು ಅವರ ಫೋಟೋ ಕೆಳಗೆ ಸಿದ್ದಾರ್ಥ್ ಸಿಂಗ್ ಅವರ ಫೋಟೋ ಕೂಡ ಇದೆ. ಸಿದ್ದಾರ್ಥ್ ಸಿಂಗ್ ಅವರ ಫೋಟೋ ಅಡಿಯಲ್ಲಿ ಅಪ್ಪು ಅಭಿಮಾನಿ, ಸಮಾಜ ಸೇವಕ ಎಂದು ಬರೆಯಲಾಗಿದೆ.

ಸದ್ಯ ಇದೇ ಈಗ ವಿವಾದಕ್ಕೂ ಕಾರಣವಾಗಿದೆ. ಹಲವರು ಪುನೀತ ಮಾಲೆ ಒಂದೊಳ್ಳೆ ಕಾರ್ಯಕ್ರಮವಾಗಿದೆ. ಅಪ್ಪು ಅಭಿಮಾನಿಗಳು ಸಹಕರಿಸಿ ಎಂದು ಪ್ರೋತ್ಸಾಹ ಸೂಚಿಸಿದರೇ,
ಇನ್ನು ಕೆಲವರು ರಾಜಕೀಯ ಸಲುವಾಗಿ ಅಪ್ಪು ಅವರ ಹೆಸರು ಬಳಸಿಕೊಂಡಿರುವುದು ಅಕ್ಷಮ್ಯ!
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಪ್ಪು ಅವರ ಹೆಸರು ಬಳಸಿಕೊಂಡು ಪುನೀತ ಮಾಲೆ ಕಾರ್ಯಕ್ರಮ ನಡೆಸಲು ಯೋಜಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪುನೀತ ಮಾಲೆ ಕಾರ್ಯಕ್ರಮ ಹೇಗಿರಲಿದೆ : ಇದೇ ಮಾರ್ಚ್ ೧-೧೮ ರವರೆಗೆ ಮಾಲೆಗಳನ್ನು ಧರಿಸಬೇಕು. ಮಾರ್ಚ್,
೧೭ ರವರೆಗೆ ವ್ರತ ಆಚರಣೆ ಮಾಡುವವರು ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ಧರಿಸಿ ಅಪ್ಪು ಅವರ ಚಿತ್ರವಿಟ್ಟು ಪೂಜಿಸಬೇಕು.
ಮಾ.೧೭ ರಂದು ಹೊಸಪೇಟೆಯ ಡಾ. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಮಾ.೧೮ ರಂದು ಬೆಂಗಳೂರಿನಲ್ಲಿರುವ ಅಪ್ಪು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಮರ್ಪಿಸಲಾಗುತ್ತದೆ.
ತದನಂತರ ಅದನ್ನು ಬಡವರಿಗೆ ವಿತರಣೆ ಮಾಡಲಾಗುತ್ತದೆ. ಮಾ.೧೭ ಪುನೀತ್ ಅವರ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಆಚರಣೆ ಮಾಡುವಂತೆ ರಾಜ್ಯ ಸರ್ಕಾರ ಈ ಹಿಂದೆ ಅಧಿಕೃತವಾಗಿ ಘೋಷಿಸಿತ್ತು.
ಅದರಂತೆಯೇ ಸ್ಪೂರ್ತಿ ದಿನವನ್ನು ಆಚರಿಸಲಾಗುತ್ತದೆ ಎಂದು ಅಪ್ಪು ಅಭಿಮಾನಿ ಬಳಗ ತಿಳಿಸಿದೆ.