ಕಳೆದ ಭಾನುವಾರ ನಡೆದ ಭಾರತ-ಪಾಕಿಸ್ತಾನ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದ ಬಳಿಕ ನಡೆದ ಕೆಲ ಕ್ಷಣಗಳು ಭಾರತ ಮತ್ತು ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಾಕಿಸ್ತಾನ ಕ್ರಿಕೆಟ್ ತಂಡ ನಾಯಕಿ ಬಿಸ್ಮಾ ಮಹರೂಫ್ ಅವರ ಏಳು ತಿಂಗಳ ಮಗು ಬೇಬಿ ಫಾತಿಮಾ ಜೊತೆ ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರು ನಡೆಸಿದ ಮುದ್ದಾಟದ ಕ್ಷಣಗಳು ವೈರಲ್ ಆಗಿವೆ.

ಇನ್ನು ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಭಾರತದ ಬ್ಯಾಟರ್ ಸ್ಮೃತಿ ಮಂದಣ್ಣ “ಮಗುವಿಗೆ ಜನ್ಮ ನೀಡಿದ ಆರು ತಿಂಗಳ ಬಳಿಕ ತಂಡಕ್ಕೆ ಹಿಂತಿರುಗಿ, ಕ್ರಿಕೆಟ್ ಆಡುವುದು ಎಲ್ಲ ಮಹಿಳಾ ಆಟಗಾರ್ತಿಯರಿಗೆ ಸ್ಪೂರ್ತಿ ನೀಡುವ ಸಂಗತಿಯಾಗಿದೆ. ಪಾಕ್ ನಾಯಕಿ ಬಿಸ್ಮಾ ಮಹರೂಫ್ ವಿಶ್ವದ ಎಲ್ಲ ಮಹಿಳಾ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ಇನ್ನು ಬೇಬಿ ಫಾತಿಮಾಗೆ ಭಾರತದಿಂದ ಸಾಕಷ್ಟು ಪ್ರೀತಿ ದೊರೆಯಲಿ ಎಂದು ಹಾರೈಸುತ್ತೇನೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸ್ಮೃತಿ ಮಂದಣ್ಣ ಬರೆದುಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸುಂದರ ಕ್ಷಣವಿದು. ಕ್ರಿಕೆಟ್ ಆಟ, ಮೈದಾನದಲ್ಲಿ ಮಾತ್ರ ಬೌಂಡರಿಗಳನ್ನು ಹೊಂದಿದೆ. ಆದರೆ ಮೈದಾನದ ಹೊರಗೆ ಎಲ್ಲವನ್ನೂ ದಾಟುತ್ತದೆ. ಕ್ರೀಡೆ ಜಗತ್ತಿನ ಎಲ್ಲ ಮನಸ್ಸಗಳನ್ನೂ ಒಂದುಗೂಡಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಅದೇ ರೀತಿ ಪಾಕಿಸ್ತಾನದ ಅನೇಕ ಕ್ರಿಕೆಟ್ ಆಟಗಾರರು ಕೂಡಾ ಸ್ಮೃತಿ ಮಂದಣ್ಣ ಬರೆದುಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸೃತಿ ಮಂದಣ್ಣ ಅವರ ಪೋಸ್ಟ್ಗೆ ಪಾಕಿಸ್ತಾನದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸುಂದರ ಕ್ಷಣವಿದು. ಕ್ರಿಕೆಟ್ ಆಟ, ಮೈದಾನದಲ್ಲಿ ಮಾತ್ರ ಬೌಂಡರಿಗಳನ್ನು ಹೊಂದಿದೆ. ಆದರೆ ಮೈದಾನದ ಹೊರಗೆ ಎಲ್ಲವನ್ನೂ ದಾಟುತ್ತದೆ. ಕ್ರೀಡೆ ಜಗತ್ತಿನ ಎಲ್ಲ ಮನಸ್ಸಗಳನ್ನೂ ಒಂದುಗೂಡಿಸುತ್ತದೆ” ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಪಾಕಿಸ್ತಾನದ ಅನೇಕ ಕ್ರಿಕೆಟ್ ಆಟಗಾರರು ಕೂಡಾ ಸ್ಮೃತಿ ಮಂದಣ್ಣ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿ, ಅವರ ಕ್ರೀಡಾಸ್ಪೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಈ ಪಂದ್ಯದಲ್ಲಿ ಭಾರತ ತಂಡ ಎದುರಾಳಿ ಪಾಕಿಸ್ತಾನ ತಂಡವನ್ನು 107 ರನ್‍ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಪಂದ್ಯದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮೆಹರೂಫ್ ತಮ್ಮ ಏಳು ತಿಂಗಳ ಮಗುವಿನೊಂದಿಗೆ, ಪೆವಿಲಿಯನ್‍ಗೆ ಆಗಮಿಸಿದರು. ಆಗ ಅದನ್ನು ನೋಡಿದ ಭಾರತ ತಂಡದ ಆಟಗಾರ್ತಿಯರು ಮಗುವನ್ನು ಆಟವಾಡಿಸುತ್ತಾ, ಮುದ್ದಾಡುತ್ತಿರುವ ವಿಡಿಯೋ ಮತ್ತು ಪೋಟೋಗಳು ಜಗತ್ತಿನ ಗಮನ ಸೆಳೆದವು. ಇನ್ನು ಬಿಸ್ಮಾ ಮೆಹರೂಫ್ ಪಾಕಿಸ್ತಾನ ತಂಡದ ಪ್ರಮುಖ ಬ್ಯಾಟರ್ ಆಗಿದ್ದು, ತಾಯಿಯಾದ ನಂತರ ಅವರು ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿದ್ದಾರೆ.