ಮಧ್ಯಪ್ರದೇಶದ(Madhyapradesh) ಜಬಲ್ಪುರದಲ್ಲಿ(Jabalpur) ಎರಡು ವರ್ಷದ ಮಗುವಿನ ಪೋಷಕರು(Parents) ತಮ್ಮ ಮಗುವಿನಲ್ಲಿ ಬದಲಾವಣೆಯನ್ನು ಹಲವಾರು ದಿನಗಳಿಂದ ಗಮನಿಸಿದ್ದಾರೆ.

ಬಾಲಕ ದಿನೇ ದಿನೇ ನಿಶ್ಯಬ್ದನಾಗಿ ಮತ್ತು ದುರ್ಬಲನಾಗಿದ್ದಾನೆ. ಕೊನೆಗೆ ಮಗುವನ್ನು ವೈದ್ಯರ(Doctor) ಬಳಿ ಕರೆದೊಯ್ದ ಪೋಷಕರು ಅಚ್ಚರಿಗೊಂಡಿದ್ದಾರೆ. ವೈದ್ಯರು ಮಗುವಿನ ಆಂತರಿಕ ಅಂಗಾಂಗಗಳು ಊದಿಕೊಂಡಿರುವುದು ಕಂಡು ಬಂದಿದೆ, ಹೀಗಾಗಿ ಇದು ಬಹುಶಃ ಆತನಿಗೆ ಯಾರೋ ಹಿಂಸೆ ನೀಡುತ್ತಿದ್ದಾರೆ ಎಂದು ಊಹಿಸಿ ಹೇಳಿದ್ದಾರೆ. ವೈದ್ಯರ ಮಾತನ್ನು ಶಂಕಿಸಿ ಪೋಷಕರು ಏನು ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಲು ಮನೆಯೊಳಗೆ ಸಿಸಿಟಿವಿ ಕ್ಯಾಮೆರಾ(CCTV Camera) ಅಳವಡಿಸಲು ನಿರ್ಧರಿಸಿದ್ದಾರೆ. ಆ ಬಳಿಕ ಅವರಿಗೆ ತಿಳಿದುಬಂದ ಸತ್ಯ ಬೆಚ್ಚಿಬೀಳಿಸಿದೆ.
ಮನೆಯಲ್ಲಿ ತಾವು ಕೆಲಸದ ನಿಮಿತ್ತ ಹೊರ ಹೋದಾಗ ಮಗುವನ್ನು ನೋಡಿಕೊಳ್ಳಲು ದಾದಿ ರಜಿನಿ ಚೌಧರಿಯನ್ನು(Rajini Chowdhary) ನೇಮಿಸಿದ್ದ ಪೋಷಕರು, ಆಕೆಗೆ ಮಾಸಿಕ 5,000 ರೂಪಾಯಿ ನೋಡಿಕೊಳ್ಳುವುದಕ್ಕೆ ಎಂದು ಕೊಡುತ್ತಿದ್ದರು ಎನ್ನಲಾಗಿದೆ. ಈಕೆ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಬಂದು ಮಗುವಿಗೆ ಹೆದರಿಸಿ, ಬೆದರಿಸಿ ಥಳಿಸುವ ಮೂಲಕ ಚಿತ್ರಹಿಂಸೆ ನೀಡುತ್ತಿದ್ದಳು ಎಂಬುದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ. ಆಕೆಗೆ ಸಂಬಳದ ಜೊತಗೆ ಆಹಾರವನ್ನು ಸಹ ನೀಡುತ್ತಿದ್ದ ದಂಪತಿಗಳಿಗೆ ಆಘಾತವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ವೀಡಿಯೊದಲ್ಲಿ, ಆರೋಪಿ ಶಿಶುಪಾಲಕಿ ಮಗುವನ್ನು ಥಳಿಸುವುದು, ಕೂದಲಿನಿಂದ ಎಳೆದುಕೊಂಡು ಹೋಗುವುದು ಕಂಡುಬಂದಿದೆ. ಇದರ ನಂತರ, ಪೊಲೀಸರಿಗೆ ಮಾಹಿತಿ ನೀಡಿದ ಪೋಷಕರ ದೂರಿನ ಮೇರೆಗೆ ದಾದಿಯ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.