- ಇನ್ಮುಂದೆ ಓಲಾ, ಊಬರ್‌ನ (Ola, Uber) ಈ ಸೇವೆ ಇರೋದು ಅನುಮಾನ (Bad news for Bengaluru residents)
- 6 ವಾರಗಳ ಗಡುವು ನೀಡಿದ ಹೈಕೋರ್ಟ್ (The High Court has given a deadline)
- ವೈಟ್ ನಂಬರ್ (White number) ಪ್ಲೇಟ್ ಹೊಂದಿದ್ರೆ ಬಾಡಿಗೆ ಓಡಿಸುವಂತಿಲ್ಲ
Bengaluru: ಬೆಂಗಳೂರಿನ ನಗರವಾಸಿಗಳಿಗೆ (City dwellers of Bangalore) ಬೇಸರದ ಸುದ್ದಿಯೊಂದು ಹೊರಬಿದ್ದಿದೆ.ಬಸ್ ಬಿಟ್ಟರೆ ಅತೀ ಹೆಚ್ಚಾಗಿ (Highest except for the bus) ನೆಚ್ಚಿಕೊಂಡಿರುವ ಓಲಾ (Ola), ಉಬರ್ (Uber) ರ್ಯಾಪಿಡೊ (Rapido) ಬೈಕ್ ಟ್ಯಾಕ್ಸಿ (Taxi) ಸೇರಿದಂತೆ ಕೆಲವು ವಾಹನಗಳ ಸೇವೆಯನ್ನು ಮುಂದಿನ ಆರು ವಾರಗಳಲ್ಲಿ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ (High Court ordered) .
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (India Systems Private Limited) , ರೊಪ್ಪೆನ್ ಟ್ರಾನ್ಸ್ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ANI Technologies Private Limited) ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮಪ್ರಸಾದ್ (Justice B.M. Shyamaprasad) ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.ಮುಂದಿನ ಆರು ವಾರಗಳಲ್ಲಿ ಸೇವೆ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು (Government should take action) ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಅಲ್ಲದೆ 1988 ರ ಮೋಟಾರು ವಾಹನ ಕಾಯ್ದೆಯ (Motor Vehicle Act) ಸೆಕ್ಷನ್ 3 ರ ಅಡಿಯಲ್ಲಿ ಅಗತ್ಯ ನಿಯಮಗಳೊಂದಿಗೆ ಸಂಬಂಧಿತ ಮಾರ್ಗಸೂಚಿಗಳನ್ನು (Guidelines) ತಿಳಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike taxi in the state) ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆರು ವಾರಗಳ ಒಳಗೆ ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು (Bike taxi operations) ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಲು ನ್ಯಾಯಾಲಯವು ರಾಜ್ಯ ಸರ್ಕಾರ (State Government) ಮತ್ತು ಸಾರಿಗೆ ಇಲಾಖೆಗೆ (Department of Transport) ನಿರ್ದೇಶನ ನೀಡಿದೆ.

ಸೂಕ್ತ ಸರ್ಕಾರಿ ನಿಯಮಗಳು ಜಾರಿಗೆ ಬರುವವರೆಗೆ ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ (Bike taxi transportation) ವಾಹನಗಳಾಗಿ ನೋಂದಾಯಿಸಲು ಅಥವಾ ಅಂತಹ ಸೇವೆಗಳಿಗೆ ಒಪ್ಪಂದ ಸಾಗಣೆ (Contract shipment) ಪರವಾನಗಿಗಳನ್ನು ನೀಡಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ (Justice B. M. Shyam Prasad) ಸ್ಪಷ್ಟವಾಗಿ ಹೇಳಿದ್ದಾರೆ.
ಮೋಟಾರು ವಾಹನ (motor vehicle) ಕಾಯಿದೆಯ ನಿಯಮಗಳ ಪ್ರಕಾರವಾಗಿ ಹಳದಿ ನೋಂದಣಿ ಫಲಕ (yellow board) ಹೊಂದಿರುವ ಸಾರಿಗೆ ವಾಹನಗಳಂತೆ ಬೈಕ್ ಟ್ಯಾಕ್ಸಿಗೆ (Bike taxi) ಅನುಮತಿ ನೀಡಬೇಕು ಎಂಬುದಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ (Direction to State Govt) ನೀಡಬೇಕು ಎಂದು ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (Systems Private Limited) , ರೊಪ್ಪೆನ್ ಟ್ರಾನ್ಸ್ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ANI Technologies Private Limited) ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು.
ಜತೆಗೆ, ಅರ್ಜಿದಾರರಿಂದ (Applicant) ನೋಂದಣಿಯಾಗಿರುವ ಬೈಕ್ ಟ್ಯಾಕ್ಸಿಗಳಿಗೆ (Bike taxis) ಯಾವುದೇ ರೀತಿಯ ತೊಂದರೆ ನೀಡದಂತೆ ಸರ್ಕಾರಕ್ಕೆ ನಿರ್ದೇಶನ (Direction to Govt) ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಅರ್ಜಿಯ ವಿಚಾರಣೆ (Hearing of application) ವೇಳೆ ಅರ್ಜಿದಾರರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ (State Govt) , ಖಾಸಗಿ ವ್ಯಕ್ತಿಗಳಿಂದ ನೋಂದಣಿ ಮಾಡಿಕೊಂಡಿರುವ ವಾಹನಗಳನ್ನು ಬೈಕ್ ಟ್ಯಾಕ್ಸಿಗಳನ್ನಾಗಿ (Converting vehicles into bike taxis) ಪರಿವರ್ತಿಸಿ ಬಳಸುವುದಕ್ಕೆ ಅರ್ಜಿದಾರರಿಗೆ ಅರ್ಹತೆ ಇಲ್ಲ ಆದ್ದರಿಂದ ಅರ್ಜಿ ವಿಚಾರಣೆಗೆ ಅರ್ಹವಿಲ್ಲ.
ಇದನ್ನೂ ಓದಿ: http://ಬೆಂಗಳೂರಿಗರಿಗೆ ಹೊಸ ತಲೆನೋವು, ಕಾಂಪೌಂಡ್ ಒಳಗಿನ ಪಾರ್ಕಿಂಗ್ಗೂ ಶುಲ್ಕ ನಿಗದಿಸಲು BBMP ತೀರ್ಮಾನ
ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ (Petition to the Tribunal) ಮಾಡಿತ್ತು. ಹಾಗಾಗಿ ಇದೀಗ ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಿದಂತೆ ರಾಜ್ಯ ಸರ್ಕಾರಕ್ಕೆ (State Govt) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ (Bad news for Bengaluru residents) ವಜಾಗೊಳಿಸಿದೆ.