ಬಹುಭಾಷಾ ನಿರ್ಮಾಣ ಸಂಸ್ಥೆಯಿಂದ ಸ್ಯಾಂಡಲ್ ವುಡ್ ಚಿತ್ರವೊಂದಕ್ಕೆ ಗುಡ್ ನ್ಯೂಸ್

ಪೊಗರು . ಸ್ಯಾಂಡಲ್ ವುಡ್ ನ ಹೈ ಎಕ್ಸಪೆಕ್ಟೆಡ್ ಸಿನಿಮಾ. ಬಿಗ್ ಬಜೆಟ್ ನಲ್ಲಿ ತಯಾರಾಗಿರೋ ಪೊಗರು ಸಿನಿಮಾ ಸದ್ಯ ಸೌಂಡ್ ಮೇಲೆ ಸೌಂಡ್ ಮಾಡ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿರೋ ಈ ಚಿತ್ರಕ್ಕೀಗ ಬೇಡಿಕೆಯ ಮೇಲೆ ಬೇಡಿಕೆ ಶುರುವಾಗಿದೆ . ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಇತ್ತೀಚೆಗಷ್ಟೇ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ . ನಿರ್ಮಾಪಕ ಆರ್ .ಕೆ ದಗ್ಗಲ್ ಅವರು ಹಿಂದಿ ಡಬ್ಬಿಂಗ್ ಹಕ್ಕನ್ನು ಬರೋಬ್ಬರಿ೭.೨೦ ಲಕ್ಷ ಖರೀದಿಸಿದ್ರು..

ಇದೀಗ ಚಿತ್ರತಂಡದ ಖುಷಿ ದುಪ್ಪಟ್ಟಾಗಿದೆ .ಹಿಂದಿ ಡಬ್ಬಿಂಗ್ ರೈಟ್ಸ್ ಬೆನ್ನಲೆ ತಮಿಳಿನಲ್ಲೂ ಡಬ್ಬಿಂಗ್ ರೈಟ್ಸ್ ಪರ್ಚೆಸ್ ಮಾಡಕ್ಕೆ ಕೆಲವೊಂದು ನಿರ್ಮಾಣ ಸಂಸ್ಥೆಗಳು ಮುಗಿಬಿದ್ದಿವೆಯಂತೆ .ತಮಿಳಿನ ಡಬ್ಬಿಂಗ್ ರೈಟ್ಸ್ ಗಾಗಿ ಪೊಗರು ಚಿತ್ರತಂಡದ ಬೆನ್ನತ್ತಿರುವ ಕೆಲ ನಿರ್ಮಾಣ ಸಂಸ್ಥೆಗಳು ಮಾತುಕತೆಯನ್ನು ನಡೆಸುತ್ತಿದ್ದಾರೆ .ಇತ್ತ ಪೊಗರು ಸಿನಿಮಾ ತಂಡ ಒಳ್ಳೆ ಮೊತ್ತಕ್ಕೆ ಸಿನಿಮಾ ಡಬ್ಬಿಂಗ್ ರೈಟ್ಸ್ ಅನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದೆ ..

ಈ ಸಿನಿಮಾದ ಮತ್ತೊಂದು ಹೈಲೆಟ್ ಅಂದ್ರೆ . ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿನಿಮಾವೊಂದು ಬರೀ ಕ್ಲೈಮಾಕ್ಸ್ ದೊಡ್ಡ ಮೊತ್ತದ ಹಣವನ್ನು ಖರ್ಚುಮಾಡಿದ್ದಾರೆ . ಬರೀ ಕ್ಲೈಮಾಕ್ಸ್ ಸೀನಿಗಾಗಿ ನಿರ್ದೇಶಕರು ೩ ಕೋಟಿ ಹಣವನ್ನು ವ್ಯಯಿಸಿದ್ದಾರೆ. ಕ್ಲೈಮಾಕ್ಸ್ ಸೀನ್ ನಲ್ಲಿ ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಗಳು ಕಾಣಿಸಿಕೊಂಡಿದ್ದು ;ಪ್ರಿನ್ಸ್ ಜೊತೆ ಸೆಣಸಾಡಲಿದ್ದಾರೆ . ಕಿರಿಕ್ ಕಿಂಗ್ ಕಾಯ್ ಗ್ರೀನ್ ಮಾರ್ಗನ್ ಅಷ್ಟೇ ಅಲ್ಲದೆ ಇನ್ನು ಹಲವು ಬಾಡಿ ಬಿಲ್ಡರ್ ಗಳನ್ನು ಪೊಗರಿನಲ್ಲಿ ಸೆಣಸಾಡಲು ನಿರ್ದಶಕರು ರೆಡಿಮಾಡಿದ್ದಾರೆ ..

ನಂದಕಿಶೋರ್ ಆಕ್ಷನ್ ಕಟ್ ಹೇಳಿರೊ ಪೊಗರು ಸಿನಿಮಾಕ್ಕೆ ಬಿ .ಕೆ ಗಂಗಾದರ್ ಬಂಡವಾಳ ಹೂಡಿದ್ದಾರೆ. ರಶ್ಮಿಕಾ ಮಂದಣ್ಣ ದ್ರುವ ಸಜರ್ಜಾಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ಉಳಿದಂತೆ ಚಿತ್ರದಲ್ಲಿ ಧನಂಜಯ್ , ರಾಘವೇಂದ್ರ ರಾಜ್ ಕುಮಾರ್ , ಪಿ ರವಿಶಂಕರ್ ಬಣ್ಣಹಚ್ಚಿದ್ದಾರೆ .. ಶ್ರೀ ಜಗದ್ಗುರು ಮೂವಿಸ್ ಬ್ಯಾನರಡಿ ಸುಮಾರು ೨೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರೋ ಪೊಗರು ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿದ್ದು . ಸಕ್ರಾಂತಿಗೆ ಸಿನಿರಸಿಕರಿಗೆ ಸಿಹಿ ನೀಡುವ ಸಾಧ್ಯತೆ ಇದೆ ..

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.