ಮಂಗಳೂರು, ಡಿ. 18: ಗುರುವಾರ ಸಂಜೆ ಉಜಿರೆಯಿಂದ 8 ವರ್ಷದ ಬಾಲಕನನ್ನು ದುಶ್ಕರ್ಮಿಗಳು ಅಪಹರಿಸಿ ಬಿಡುಗಡೆಗೆ 17 ಕೋಟಿ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.
ಗುರುವಾರ ಸಂಜೆ ವೇಳೆ ಮನೆಯಂಗಳದಲ್ಲಿ ಆಟವಾಡುತಿದ್ದ 8 ವರ್ಷದ ಮಗುವನ್ನು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಉಜಿರೆಯ ಬಿಜೋಯ್ ಏಜೆನ್ಸಿಸ್ ಮಾಲೀಕ, ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಅಪಹರಣಗೊಂಡ ಬಾಲಕ. ಬಾಲಕನ ಅಜ್ಜ ಎ. ಕೆ. ಶಿವನ್ ಎದುರೇ ಈ ಕೃತ್ಯ ನಡೆದಿದೆ.
ಅಪಹರಣದ ಬಳಿಕ ಅಪಹರಣಕಾರರು ಬಾಲಕನ ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸಿ, 17 ಕೋಟಿ ಕೋಟಿಯನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡುವಂತೆಯೂ ತಿಳಿಸಿದ್ದಾರೆ. ಈ ಬಗ್ಗೆ ಬಾಲಕನ ಅಜ್ಜ ಎ.ಕೆ. ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.