• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ವಿಷಕಾರಿ ದತ್ತೂರಿ ಹಣ್ಣು-ಬೀಜಗಳ ಆನ್‌ಲೈನ್ ಅಲ್ಲಿ ಮಾರಾಟ ಮಾಡುವಂತಿಲ್ಲ: ಇ-ಕಾಮರ್ಸ್ ಸಂಸ್ಥೆಗಳಿಗೆ ಆಹಾರ ಇಲಾಖೆಯಿಂದ ಖಡಕ್ ಎಚ್ಚರಿಕೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ವಿಷಕಾರಿ ದತ್ತೂರಿ ಹಣ್ಣು-ಬೀಜಗಳ ಆನ್‌ಲೈನ್ ಅಲ್ಲಿ ಮಾರಾಟ ಮಾಡುವಂತಿಲ್ಲ: ಇ-ಕಾಮರ್ಸ್ ಸಂಸ್ಥೆಗಳಿಗೆ ಆಹಾರ ಇಲಾಖೆಯಿಂದ ಖಡಕ್ ಎಚ್ಚರಿಕೆ
0
SHARES
7
VIEWS
Share on FacebookShare on Twitter

FSSAI ಅಡಿಯಲ್ಲಿ ದತ್ತೂರಿ (ban of poisonous datura fruits in online) ಹಣ್ಣು ಮಾರುವಂತಿಲ್ಲ

ಅಮೆಜಾನ್‌ ಸೇರಿದಂತೆ ಇತರ ಇ-ಕಾಮರ್ಸ್‌ ತಾಣಗಳಲ್ಲಿ ಹಣ್ಣು ಮಾರಿದ್ರೆ ಲೈಸನ್ಸ್ ರದ್ದು

ವಿಷಕಾರಿ ಹಣ್ಣು-ಬೀಜಗಳ ಮಾರಾಟದ ಬೆನ್ನಲ್ಲೇ ಅಮೆಜಾನ್ ಸೇರಿದಂತೆ ಪ್ರಮುಖ ಸಂಸ್ಥೆಗಳ ವಿರುದ್ಧ ತನಿಖೆ

ಕರ್ನಾಟಕದಲ್ಲಿ ವಿಷಕಾರಿ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಮಾನವ ಬಳಕೆಗೆಂದು (ban of poisonous datura fruits in online) ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FDA) ಗಂಭೀರ ಕ್ರಮಕ್ಕೆ ಮುಂದಾಗಿದೆ.

ಅಮೆಜಾನ್, ಬಿಗ್‌ಬಾಸ್ಕೆಟ್ (Big basket) ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ಸೇರಿದಂತೆ ಪ್ರಮುಖ ಇ-ಕಾಮರ್ಸ್ ವೇದಿಕೆಗಳಲ್ಲಿ ದತ್ತೂರಿ ಹಣ್ಣು ಮತ್ತು ಬೀಜಗಳು ಮಾರಾಟಕ್ಕೆ ಲಭ್ಯವಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ban of poisonous datura fruits in online

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಂಸ್ಥೆಗಳ ಆಹಾರ ಪರವಾನಗಿಗಳನ್ನು (ban of poisonous datura fruits in online) ಅಮಾನತುಗೊಳಿಸುವಂತೆ ಶಿಫಾರಸು ಮಾಡಲಾಗಿದೆ.

ಸಾರ್ವಜನಿಕರು ಸುಲಭವಾಗಿ ಖರೀದಿಸಬಹುದಾದ ರೀತಿಯಲ್ಲಿ ಅತ್ಯಂತ ವಿಷಕಾರಿ ಸಸ್ಯದ ಭಾಗಗಳು ಲಭ್ಯವಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ದತ್ತೂರಿ ಸಾಮಾನ್ಯ ಆಹಾರ ಪದಾರ್ಥವಲ್ಲ. ಇದರ ಹಣ್ಣು ಮತ್ತು ಬೀಜಗಳಲ್ಲಿ ಅಟ್ರೋಪಿನ್ ಸೇರಿದಂತೆ ದೇಹಕ್ಕೆ ತೀವ್ರ ಹಾನಿ ಉಂಟುಮಾಡಬಲ್ಲ ವಿಷಕಾರಿ ಸಂಯುಕ್ತಗಳಿವೆ.

ತಪ್ಪಾಗಿ ಸೇವಿಸಿದರೆ ನರಮಂಡಲ, ಹೃದಯ ಹಾಗೂ ಮೆದುಳಿನ ಕಾರ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಒಣ ಬಾಯಿ, ಅತಿಯಾದ ಬಾಯಾರಿಕೆ, ಕಣ್ಣಿನ ಗುಡ್ಡೆಗಳು ಹಿಗ್ಗುವುದು, ದೃಷ್ಟಿ ಮಬ್ಬಾಗುವುದು, ಚರ್ಮ ಕೆಂಪಾಗುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು ಮುಂತಾದ

ಲಕ್ಷಣಗಳು ಕಾಣಿಸಿಕೊಳ್ಳಬಹುದು. ವಿಷದ ಪ್ರಮಾಣ ಹೆಚ್ಚಾದರೆ ತೀವ್ರ ಮಾದಕತೆ, ಪ್ರಜ್ಞೆ ಕಳೆದುಕೊಳ್ಳುವುದು, ಮಾನಸಿಕ ಗೊಂದಲ ಸೇರಿದಂತೆ ಜೀವಕ್ಕೆ ಅಪಾಯಕಾರಿಯಾದ

ಪರಿಸ್ಥಿತಿಯೂ ಉಂಟಾಗಬಹುದು. ಹೀಗಾಗಿ ದತ್ತೂರಿ ಹಣ್ಣು ಅಥವಾ ಬೀಜಗಳನ್ನು ಆಹಾರವಾಗಿ ಸೇವಿಸುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಂಬಂಧಪಟ್ಟ ಇ-ಕಾಮರ್ಸ್ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದೆ. FSSAI ಹಾಗೂ ಇತರ ಅನ್ವಯವಾಗುವ ನಿಯಮಗಳ ಅನುಮತಿಯಿಲ್ಲದೆ ಅಪಾಯಕಾರಿ ದತ್ತೂರಿ ಉತ್ಪನ್ನಗಳನ್ನು ಮಾನವ ಬಳಕೆಗೆಂದು ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆ ಸ್ಪಷ್ಟನೆ ಕೇಳಿದೆ.

ನೋಟಿಸ್ ಹಿನ್ನೆಲೆಯಲ್ಲಿ ಅಮೆಜಾನ್ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳ ಮುಂದೆ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿದ್ದಾರೆ. ಆಹಾರ ಉತ್ಪನ್ನಗಳ ಪಟ್ಟಿಗೆ

ಸೇರ್ಪಡೆಗೊಳ್ಳುವ ವಸ್ತುಗಳ ಸ್ವರೂಪ, ಮಾರಾಟದ ಉದ್ದೇಶ ಮತ್ತು ಅವುಗಳ ಸುರಕ್ಷತಾ ನಿಯಮಗಳ ಪಾಲನೆಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ನಿಯಮ ಉಲ್ಲಂಘನೆ ದೃಢಪಟ್ಟರೆ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ವಿಷಯ ತಜ್ಞ ಡಾ. ಎಂ.ಜೆ. ಪ್ರಭು (Dr. M.J. Prabhu) ಅವರ ಪ್ರಕಾರ, ದತ್ತೂರಿ ಭಾರತೀಯ ಔಷಧೀಯ ಸಸ್ಯವಾಗಿದ್ದರೂ

ಅದನ್ನು ಹಣ್ಣಿನಂತೆ ಮಾರಾಟ ಮಾಡಿ ಸೇವಿಸುವುದು ಸೂಕ್ತವಲ್ಲ. ಕೆಲವು ಆಯುರ್ವೇದ ಔಷಧೀಯ ಸೂತ್ರೀಕರಣಗಳಲ್ಲಿ ದತ್ತೂರಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಆದರೆ ಇಂತಹ ಬಳಕೆ ತಜ್ಞರ ಮೇಲ್ವಿಚಾರಣೆಯಲ್ಲಿ ಹಾಗೂ ನಿಖರವಾದ ತಯಾರಿಕಾ ವಿಧಾನಗಳೊಂದಿಗೆ ಮಾತ್ರ ನಡೆಯಬೇಕು. ಧಾರ್ಮಿಕ ಉದ್ದೇಶಕ್ಕಾಗಿ ದತ್ತೂರಿ ಪೂರೈಸಿದರೂ ಅದನ್ನು ತಿನ್ನುವ ಹಣ್ಣು ಎಂದು ಪರಿಗಣಿಸಬಾರದು ಎಂಬ ಎಚ್ಚರಿಕೆ ಅಗತ್ಯವಾಗಿದೆ.

ವೈದ್ಯರು, ಔಷಧ ತಯಾರಕರು ಹಾಗೂ ಸಂಬಂಧಪಟ್ಟ ಕ್ಷೇತ್ರದ ಅಧಿಕೃತ ವ್ಯಕ್ತಿಗಳ ನಿಯಂತ್ರಿತ ಬಳಕೆಗೆ ಮಾತ್ರ ಇಂತಹ ವಸ್ತುಗಳು ಸೀಮಿತವಾಗಿರಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಆನ್‌ಲೈನ್ ಶಾಪಿಂಗ್ (Online Shopping) ವ್ಯವಸ್ಥೆಯ ಮೂಲಕ ವಿಷಕಾರಿ ಸಸ್ಯದ ಹಣ್ಣು ಮತ್ತು ಬೀಜಗಳು ಯಾವುದೇ ಸೂಕ್ತ ಪರಿಶೀಲನೆಯಿಲ್ಲದೆ ಗ್ರಾಹಕರ ಕೈಗೆ ತಲುಪುವ ಸಾಧ್ಯತೆ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಶೇಷವಾಗಿ ದತ್ತೂರಿಯ ವಿಷಕಾರಿ ಸ್ವಭಾವದ ಬಗ್ಗೆ ಅರಿವಿಲ್ಲದವರು ಇದನ್ನು ಸಾಮಾನ್ಯ ಹಣ್ಣು ಅಥವಾ ಔಷಧೀಯ ವಸ್ತು ಎಂದು ತಪ್ಪಾಗಿ ಭಾವಿಸುವ ಅಪಾಯವಿದೆ. ಆದ್ದರಿಂದ

ಇ-ಕಾಮರ್ಸ್ ವೇದಿಕೆಗಳು ತಮ್ಮಲ್ಲಿ ಪಟ್ಟಿ ಮಾಡಲಾಗುವ ಉತ್ಪನ್ನಗಳ ಸ್ವರೂಪ, ಕಾನೂನುಬದ್ಧತೆ ಮತ್ತು ಬಳಕೆಯ ಉದ್ದೇಶವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ಅಗತ್ಯವಿದೆ.

ಜನರ ಜೀವಕ್ಕೆ ಅಪಾಯ ಉಂಟುಮಾಡಬಲ್ಲ ವಸ್ತುಗಳ ಮಾರಾಟವನ್ನು ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಆನ್‌ಲೈನ್ (Online) ವೇದಿಕೆಗಳು ಜವಾಬ್ದಾರಿಯುತವಾಗಿ

ನಡೆದುಕೊಳ್ಳಬೇಕು. ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಆಹಾರವಾಗಿ ಸೇವಿಸಬಾರದು ಎಂಬ ಎಚ್ಚರಿಕೆಯನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು.

ಇದನ್ನು ಓದಿ : https://vijayatimes.com/kpsc-veterinary-officer-recruitment-scam/
Tags: Datura fruitse-commercefooddepartmentFSSAIOnline sale

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.