Bengaluru: ಬೆಂಗಳೂರಿಗರ ಫೇವರೆಟ್ ಫುಡ್ ಗಳಲ್ಲಿ ಒಂದಾಗಿರುವ ಹಾಗೂ ಅನಾರೋಗ್ಯ ಪಿಡೀತರಿಗೂ ಇಷ್ಟವಾಗುವ ಇಡ್ಲಿಯಿಂದ (Idli) ಜನರ ಆರೋಗ್ಯ ಹಾಳಾಗುತ್ತದೆ, ಕ್ಯಾನ್ಸರ್ (Cancer) ಬರಲಿದೆ ಎಂಬ ಅಂಶ ಬಹಿರಂಗವಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ (State Health Department) ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಖಚಿತಪಡಿಸಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ (Health Minister) ದಿನೇಶ್ ಗುಂಡೂರಾವ್ ಅವರು, ಆಹಾರ ತಯಾರಿಕೆಯಲ್ಲಿ ಅದರಲ್ಲೂ ಇತ್ತೀಚೆಗೆ ಹೆಚ್ಚಾಗಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ (Use of plastic) ಹೆಚ್ಚಾಗಿದ್ದು, ಇದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ (Serious effect) ಬೀರಲಿದೆ. ಹೀಗಾಗಿ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಧಿಕೃತವಾಗಿ ಸುತ್ತೋಲೆ (Circular) ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ 251 ಆಹಾರ ಕೇಂದ್ರಗಳಲ್ಲಿ ಆಹಾರಗಳ ಗುಣಮಟ್ಟ ಪರೀಕ್ಷೆ (Quality testing of foods) ನಡೆಸಿದ್ದು, ಈ ಪೈಕಿ 51 ಆಹಾರದ ಮಾದರಿಗಳು ಅಸುರಕ್ಷಿತ ಎಂದು ದೃಢಪಟ್ಟಿದೆ. ಇಡ್ಲಿಗಳನ್ನು ಆವಿಯಲ್ಲಿ ಬೇಯಿಸುವಾಗ ಪ್ಲಾಸ್ಟಿಕ್ ಶೀಟ್ ಗಳನ್ನು ಬಳಸುವ ಅಂಗಡಿಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ, ಇದು ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಇದರಿಂದಾಗಿ ಇಡ್ಲಿಗೆ ಕ್ಯಾನ್ಸರ್ ಕಾರಕ (Carcinogen) ವಸ್ತುಗಳು ಸೇರಿಕೊಳ್ಳುತ್ತವೆ.ಅಡುಗೆ ಮಾನದಂಡಗಳನ್ನು ಉಲ್ಲಂಘಿಸುತ್ತಿರುವ ಈ 51 ಅಂಗಡಿಗಳಿಗೆ ಈಗಾಗಲೇ ಪ್ಲಾಸ್ಟಿಕ್ ಶೀಟ್ ಗಳನ್ನು ಬಳಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ (Fined) ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.